ಹರಿಹರ ಪಾರಂಪರಿಕ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು: ಡಾ.ಪ್ರಭಾ

| Published : Apr 15 2024, 01:21 AM IST

ಹರಿಹರ ಪಾರಂಪರಿಕ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು: ಡಾ.ಪ್ರಭಾ
Share this Article
  • FB
  • TW
  • Linkdin
  • Email

ಸಾರಾಂಶ

ಕೊಂಡಜ್ಜಿ ಸೇರಿದಂತೆ ಪಾರಂಪರಿಕ ಕ್ಷೇತ್ರಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿ, ಹರಿಹರ ಕ್ಷೇತ್ರದತ್ತ ಮುಖ ಮಾಡುವಂತೆ ಕಾಯಕಲ್ಪ ನೀಡುವುದಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದ್ದಾರೆ.

- ಕೊಯಮತ್ತೂರು, ಬೆಳಗಾವಿ ಮಾದರಿಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಭರವಸೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಕೊಂಡಜ್ಜಿ ಸೇರಿದಂತೆ ಪಾರಂಪರಿಕ ಕ್ಷೇತ್ರಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿ, ಹರಿಹರ ಕ್ಷೇತ್ರದತ್ತ ಮುಖ ಮಾಡುವಂತೆ ಕಾಯಕಲ್ಪ ನೀಡುವುದಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದರು.

ಹರಿಹರ ತಾಲೂಕು ಕೊಂಡಜ್ಜಿ ಗ್ರಾಮದಿಂದ ಶನಿವಾರದಿಂದ ಕೊಂಡಜ್ಜಿ, ಬುಳ್ಳಾಪುರ, ಕೆಂಚನಹಳ್ಳಿ, ಹೊಟ್ಟಿಗೇನಹಳ್ಳಿ, ಕುರುಬರಹಳ್ಳಿ, ಕರಲಹಳ್ಳಿ, ಸಾರಥಿ, ದೀಟೂರು, ಗಂಗನರಸಿ, ಹನಗವಾಡಿ, ನಾಗೇನಹಳ್ಳಿ, ಹಲಸಬಾಳು, ರಾಜನಹಳ್ಳಿ, ಬಿಳಸನೂರು, ನಂದಿಗಾವಿ, ಧೂಳೆಹೊಳೆ, ಎಳೆಹೊಳೆ, ಮಳಲಹಳ್ಳಿ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದ ಅವರು, ಹರಿಹರ ಕ್ಷೇತ್ರವನ್ನು ಪ್ರವಾಸಿ, ಪಾರಂಪರಿಕ ತಾಲೂಕಾಗಿಸುವ ಗುರಿ ಇದೆ ಎಂದರು. ಕೊಂಡಜ್ಜಿಯನ್ನು ಪ್ರವಾಸಿ ತಾಣ ಮಾಡುವುದು, ಹನಗವಾಡಿ ಕೈಗಾರಿಕಾ ಪ್ರದೇಶವಾಗಿ, ಸಾರಥಿ-ಕುರುಬರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರ ಸರ್ಕಾರದಿಂದ ಬೆಳಗಾವಿ ಮತ್ತು ಕೊಯ ಮತ್ತೂರು ಕೈಗಾರಿಕಾ ಪ್ರದೇಶ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತೇವೆ. ನನೆಗುದಿಗೆ ಬಿದ್ದಿರುವ ಭದ್ರಾ ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ತಲುಪಿಸುವ ಕೆಲಸ ಮಾಡುವೆ ಎಂದು ಅವರು ತಿಳಿಸಿದರು.

ರಸಗೊಬ್ಬರ, ಎಥೆನಾಲ್‌ ಘಟಕ ಆರಂಭಿಸಲು ಒತ್ತು ನೀಡುವೆ. ಹರಿಹರ ಸೇರಿದಂತೆ ಸುತ್ತಲಿನ ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ಆದ್ಯತೆ ನೀಡುತ್ತೇನೆ. ಹರಿಹರದ ವೀಳ್ಯದೆಲೆ ಮಾರುಕಟ್ಟೆ, ಎಲೆ ಪೆಂಡಿ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ರೈತರು, ವ್ಯಾಪಾರಸ್ಥರಿಗೆ ಅನುಕೂಲ ಮಾಡುತ್ತೇವೆ. ಅಂತರ ರಾಷ್ಟ್ರೀಯಮಟ್ಟಕ್ಕೆ ಎಲೆ ಪೆಂಡಿ ಮಾರಾಟಗೊಳ್ಳಲು ಅಗತ್ಯ ವ್ಯವಸ್ಥೆ ಕಲ್ಪಿಸಲು ಬದ್ಧ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಎಸ್.ರಾಮಪ್ಪ, ಮುಖಂಡರಾದ ಶ್ರೀನಿವಾಸ ನಂದಿಗಾವಿ, ಜಿಪಂ ಮಾಜಿ ಸದಸ್ಯ ಬಿ.ಎಂ.ವಾಗೀಶ ಸ್ವಾಮಿ, ಎಂ.ಎನ್.ನಾಗೇಂದ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷ ರೇವಣಸಿದ್ದ ಪ್ಪ, ಎಲ್.ಬಿ.ಹನುಮಂತಪ್ಪ, ಮಲೆಬೆನ್ನೂರು ಹಬೀದ್ ಅಲಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕುಮಾರ, ಸಿ.ಎನ್.ಹುಲಿಗೇಶ, ನಿಖಿಲ್ ಕೊಂಡಜ್ಜಿ, ಬೆಣ್ಣೆಹಳ್ಳಿ ಹಾಲೇಶಪ್ಪ, ಮಂಜನಾಥ ಪಾಟೀಲ್, ಗಂಗಾಧರ, ಜಿಗಳಿ ಆನಂದಪ್ಪ, ಗನ್ನಾ ಹಬೀಬ್‌, ಕೆ.ಜಿ.ಸಿದ್ದೇಶ, ಸಂತೋಷ ನೋಟದವರ, ಕಮಲಾಪುರ ಮಲ್ಲೇಶ, ಗಂಗಾಧರ, ಆರೀಫ್ ಅಲಿ, ಪಿ.ಎಸ್.ಕುಮಾರ ಇತರರು ಇದ್ದರು. ಇದೇವೇಳೆ ಬಿಜೆಪಿ, ಜೆಡಿಎಸ್ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

- - - (* ಒಂದೇ ಫೋಟೋ ಬಳಸಿ)

-13ಕೆಡಿವಿಜಿ16, 17, 18, 19:

ಹರಿಹರ ತಾಲೂಕು ಕೊಂಡಜ್ಜಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮತಯಾಚಿಸಿದರು.