ಸಾರಾಂಶ
-ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದ ಶಾಸಕ ಶ್ರೀನಿವಾಸ್
ಕನ್ನಡಪ್ರಭ ವಾರ್ತೆ ನೆಲಮಂಗಲಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಸಾರ್ವಜನಿಕ ಆಸ್ಪತ್ರೆ ಪ್ರಯೋಗ ಶಾಲೆ ಹಿರಿಯ ತಾಂತ್ರಿಕ ಅಧಿಕಾರಿ ಎಂ.ಎಸ್.ಮೃತ್ಯುಂಜಯ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ದೇವಕಿ ಘೋಷಿಸಿದರು.
ನಗರದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಸಂಘದ ರಾಜ್ಯಪರಿಷತ್ ಸದಸ್ಯ ಸ್ಥಾನಕ್ಕೆ ಮೃತ್ಯುಂಜಯ ಹಾಗೂ ಶಿಕ್ಷಕ ಬಿ.ಜಿ.ರಮೇಶ್ ಸ್ಪರ್ಧಿಸಿದ್ದರು. ತಾಲೂಕು ಘಟಕದ 25 ನಿರ್ದೇಶಕರ ಮತಗಳಲ್ಲಿ ಮೃತ್ಯುಂಜಯ 16 ಮತ ಪಡೆದು ಜಯಗಳಿಸಿದ್ದಾರೆ.ನೂತನ ಸದಸ್ಯ ಮೃತ್ಯುಂಜಯ ಮಾತನಾಡಿ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಹೆಚ್ಚುಮತಗಳ ಅಂತರದಿಂದ ಆಯ್ಕೆಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು, ತಾಲೂಕಿನ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಧ್ವನಿಯಾಗುವೆ. ಸಂಘದ ಎಲ್ಲಾ ಪದಾಧಿಕಾರಿಗಳನ್ನು ಒಗ್ಗೂಡಿಸಿಕೊಂಡು ಪ್ರಯತ್ನ ನೌಕರರ ಹಿತಕ್ಕಾಗಿ ಶ್ರಮಿಸುತ್ತೇನೆಂದು ಭರವಸೆ ನೀಡಿದರು.
ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಕೆ.ಎನ್.ನಾಗೇಶ್ ಮಾತನಾಡಿ, ನನ್ನ ಮೇಲೆ ಭರವಸೆಯಿಟ್ಟು ತಾಲೂಕು ಸಂಘದ ಅಧ್ಯಕ್ಷನನ್ನಾಗಿ ಅವಿರೋಧ ಆಯ್ಕೆಮಾಡಿರುವುದಕ್ಕೆ ಧನ್ಯವಾದಗಳು. ಸರ್ಕಾರಿ ನೌಕರರ ಶ್ರೇಯೋಭೀವೃದ್ಧಿ ಹಾಗೂ ಸಂಘದ ಬಲವರ್ಧನೆಯೇ ನನ್ನ ಗುರಿ. ಸಂಘ ಮತ್ತು ಸಂಘದ ಸರ್ವಸದಸ್ಯರ ಸೇವೆಗಾಗಿ ಸದಾ ಶ್ರಮಿಸುತ್ತೇನೆಂದು ತಿಳಿಸಿದರು.ಅವಿರೋಧ ಆಯ್ಕ:ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಶಿಕ್ಷಕ ಕೆ.ಎನ್.ನಾಗೇಶ್, ಖಜಾಂಚಿಯಾಗಿ ಪಿಡಿಒ ಉಮಾಶಂಕರ್, ಪ್ರದಾನ ಕಾರ್ಯದರ್ಶಿಯಾಗಿ ಕಾರ್ಮಿಕ ನಿರೀಕ್ಷಕರಾದ ನಾಗರತ್ನ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳು ಘೋಷಿಸಿದರು.
ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಶಾಸಕ ಎನ್.ಶ್ರೀನಿವಾಸ್, ಎನ್‌ಪಿಎ ಅಧ್ಯಕ್ಷ ನಾರಾಯಣಗೌಡ, ಮಾಜಿ ಅಧ್ಯಕ್ಷ ಎನ್.ಪಿ.ಹೇಮಂತ್ ಕುಮಾರ್, ನಗರಸಭೆ ಸದಸ್ಯ ಸಿ.ಪ್ರದೀಪ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ್ರು, ನೌಕರರ ಮುಖಂಡರಾದ ಗುರುಮೂರ್ತಿ, ರಾಮಾಂಜನಪ್ಪ, ಹೊನ್ನಶಾಮಯ್ಯ, ಪ್ರಕಾಶ್, ರುದ್ರಮೂರ್ತಿ, ಡಿ.ದೇವರಾಜು, ನಾರಾಯಣ್, ಚೈತ್ರ ಮತ್ತಿತರರು ಅಭಿನಂದಿಸಿದರು.ನೂತನ ನಿರ್ದೇಶಕರಾದ ಗುರುಮೂರ್ತಿ, ಪುಷ್ಪ, ಸಿ.ಗೀತಾಮಣಿ, ಹೆಚ್.ವಿ. ನಾಗರಾಜು, ಶಾಂತಾಬಾಯಿ ಹೆಚ್. ಕಿರಣಗಿ, ರೇಣುಕಾಸ್ವಾಮಿ, ಚಂದ್ರಶೇಖರ್, ಮಂಜುನಾಥ್ ಇತರರು ಉಪಸ್ಥಿತರಿದ್ದರು.ಪೊಟೊ 17 ಕೆಎನ್ ಎಲ್ ಎಮ್:
ನೆಲಮಂಗಲ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ನಾಗೇಶ್, ರಾಜ್ಯಪರಿಷತ್ ಸದಸ್ಯ ಮೃತ್ಯುಂಜಯ, ಖಜಾಂಚಿ ಉಮಾಶಂಕರ್ ಹಾಗೂ ಪ್ರ.ಕಾರ್ಯದರ್ಶಿ ನಾಗರತ್ನ ಅವರನ್ನು ಸಂಘದ ನಿರ್ದೇಶಕರು ಮತ್ತು ಮುಖಂಡರು ಅಭಿನಂದಿಸಿದರು.