ಮೂಡಿಗೆರೆಯಲ್ಲಿ ಅಂಗನವಾಡಿ ನೇಮಕಾತಿ ವಿವಾದ: ಕನ್ನಡದ ಜೊತೆ ಉರ್ದು ಕಡ್ಡಾಯಕ್ಕೆ ವಿರೋಧ

| Published : Sep 24 2024, 01:48 AM IST / Updated: Sep 24 2024, 12:54 PM IST

ಮೂಡಿಗೆರೆಯಲ್ಲಿ ಅಂಗನವಾಡಿ ನೇಮಕಾತಿ ವಿವಾದ: ಕನ್ನಡದ ಜೊತೆ ಉರ್ದು ಕಡ್ಡಾಯಕ್ಕೆ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಿಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಸಂದರ್ಭದಲ್ಲಿ ಕನ್ನಡದ ಜೊತೆಗೆ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿರುವುದನ್ನು ಕನ್ನಡಪರ ಸಂಘಟನೆಗಳು ವಿರೋಧಿಸಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿವೆ.  

 , ಮೂಡಿಗೆರೆ : ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ನೇಮಕಾತಿ ಸಂದರ್ಭದಲ್ಲಿ ಕನ್ನಡದ ಜತೆಗೆ ಉರ್ದು ಕಡ್ಡಾಯಗೊಳಿಸಿರುವುದನ್ನು ಕನ್ನಡಪರ ಸಂಘಟನೆಗಳು ವಿರೋಧಿಸಿವೆ.

ಶೇ. 25 ರಷ್ಟು ಅಲ್ಪಸಂಖ್ಯಾತರು ಇರುವ ನಗರದ ಐದನೇ ವಾರ್ಡ್‌ನಲ್ಲಿರುವ ಮಾರ್ಕೆಟ್ ರಸ್ತೆ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆಯರ ನೇಮಕ ಮಾಡಲು ಹೊರಡಿಸಿರುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಕ ಅಧಿಕಾರಿ ದಯಾವತಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ, ಕನ್ನಡ ಮಾತನಾಡುವ ಮಲೆನಾಡಿನ ಮೂಡಿಗೆರೆಯಲ್ಲಿ ಎಳೆ ವಯಸ್ಸಿನ ಮಕ್ಕಳ ಮನಸ್ಸಲ್ಲಿ ಸರ್ಕಾರದಿಂದಲೇ ಕನ್ನಡ ಕೊಲ್ಲಲು ಹೊರಟಿರುವುದು ನಿಜಕ್ಕೂ ಆಘಾತಕಾರಿ. ಈ ಅಂಗನವಾಡಿಗೆ ಎಲ್ಲಾ ಧರ್ಮದ ಮಕ್ಕಳು ಹೋಗುತ್ತಿದ್ದರು. ಉರ್ದು ಭಾಷೆಯನ್ನು ಕಡ್ಡಾಯ ಗೊಳಿಸಿರುವುದು ಕನ್ನಡಕ್ಕೆ ಬಗೆದಿರುವ ದ್ರೋಹವಾಗಿದ್ದು. ಅಲ್ಲದೆ ಶೋಷಿತರು. ಹಿಂದುಳಿದ ಹಾಗೂ ಇತರೆ ಜನಾಂಗದವರು ಈ ಹುದ್ದೆಗೆ ಅರ್ಜಿ ಸಲ್ಲಿಸದಂತೆ ತಡೆ ಹಿಡಿಯುವ ಹುನ್ನಾರವಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಆರೋಪಿಸಿದರು.

ಅಂಗನವಾಡಿ ಕನ್ನಡಿಗರ ತೆರಿಗೆಯಿಂದ ನಡೆಯುತ್ತಿದ್ದು ಇದನ್ನು ವಕ್ಫ್‌ ಬೋರ್ಡ್‌ ನಡೆಸುತ್ತಿಲ್ಲ. ಈ ಆದೇಶವನ್ನು ಕೂಡಲೇ ಹಿಂಪಡೆದು ಎಲ್ಲಾ ಜನಾಂಗದ ಕನ್ನಡ ಭಾಷಿಕರಿಗೆ ಅವಕಾಶ ಕಲ್ಪಿಸಬೇಕು. ಕನ್ನಡ ಕೊಲ್ಲಲು ಹೊರಟಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಸಭೆ ಕರೆದು ನಿರ್ಣಯಿಸಿ ಬೃಹತ್ ಹೋರಾಟಕ್ಕೆ ಕರೆ ನೀಡುವ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕನ್ನಡ ಸೇನೆ ತಾಲೂಕು ಅಧ್ಯಕ್ಷ ರಘು ಹೊರಟ್ಟಿ, ಕರವೇ ತಾಲೂಕು ಅಧ್ಯಕ್ಷ ವಿನೋದ್, ಎಂ.ವಿ. ಶ್ರೇಷ್ಠಿ, ವಿಶ್ವ ಹಾರ್ಲಗದ್ದೆ, ಗೀತಾ ಇದ್ದರು. 23 ಕೆಸಿಕೆಎಂ 5ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ನೇಮಕಾತಿ ಸಂದರ್ಭದಲ್ಲಿ ಕನ್ನಡದ ಜತೆಗೆ ಉರ್ದು ಭಾಷೆ ಕಡ್ಡಾಯಗೊಳಿಸಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ತಾಪಂ ಕಾರ್ಯನಿರ್ವಹಕ ಅಧಿಕಾರಿ ದಯಾವತಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.