ಯುವಕರಿಗೆ ಉದ್ಯೋಗ, ಸ್ವಸಹಾಯ ಸಂಘಗಳಿಗೆ ಹೊಸ ಯೋಜನೆ

| Published : Apr 23 2024, 12:52 AM IST

ಸಾರಾಂಶ

ಪ್ರವಾಹ ಮತ್ತು ಕೋವಿಡ್ ಬಂದಾಗ ಜನರು ಸಂಕಷ್ಟದಲ್ಲಿದ್ದಾಗ ಸ್ಪಂದಿಸದೇ ಈಗ ಚುನಾವಣೆ ಬಂದಕೂಡಲೇ 5 ವರ್ಷದ ನಂತರ ಮತ್ತೇ ತಮ್ಮಲ್ಲಿ ಮತ ಕೇಳಲು ಬರುವ ಈಗಿನ ಸಂಸದರಿಗೆ ತಕ್ಕ ಪಾಠ ಕಲಿಸಲು ತಾವೆಲ್ಲರೂ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಉತ್ತರ ನೀಡಬೇಕು ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ರಾಯಬಾಗಪ್ರವಾಹ ಮತ್ತು ಕೋವಿಡ್ ಬಂದಾಗ ಜನರು ಸಂಕಷ್ಟದಲ್ಲಿದ್ದಾಗ ಸ್ಪಂದಿಸದೇ ಈಗ ಚುನಾವಣೆ ಬಂದಕೂಡಲೇ 5 ವರ್ಷದ ನಂತರ ಮತ್ತೇ ತಮ್ಮಲ್ಲಿ ಮತ ಕೇಳಲು ಬರುವ ಈಗಿನ ಸಂಸದರಿಗೆ ತಕ್ಕ ಪಾಠ ಕಲಿಸಲು ತಾವೆಲ್ಲರೂ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಉತ್ತರ ನೀಡಬೇಕು ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮನವಿ ಮಾಡಿದರು.

ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಸದಾ ನಿಮ್ಮಜೊತೆಯಲ್ಲಿದ್ದು ನಿಮ್ಮ ಕಷ್ಟದಲ್ಲಿ ಭಾಗಿಯಾಗುತ್ತೇನೆ. ಸ್ಥಳೀಯ ಯುವಕರಿಗೆ ಉದ್ಯೋಗ ನೀಡಲು ಈ ಭಾಗದಲ್ಲಿ ಕಾರ್ಖಾನೆಗಳನ್ನು ಪ್ರಾರಂಭಿಸಲಾಗುವುದು. ಮಹಿಳೆಯರ ಆರ್ಥಿಕಮಟ್ಟ ಹೆಚ್ಚಿಸಲು ಸ್ವಸಹಾಯ ಸಂಘಗಳಿಗೆ ಹೊಸ ಯೋಜನೆಗಳನ್ನು ರೂಪಿಸಿ ಉತ್ತೇಜ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ ಮಾತನಾಡಿ, ಹಿಡಕಲ್‌ ಡ್ಯಾಂನಿಂದ ನೀರು ಬಿಟ್ಟಿದ್ದು ಕಾಂಗ್ರೆಸ್ ಸರ್ಕಾರ. ಆದರೆ, ಕೆಲವರು ತಾವು ನೀರು ಬಿಡಿಸಿರುವುದಾಗಿ ಸುಳ್ಳು ಹೇಳಿ ಜನರದಾರಿ ತಪ್ಪಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಚುನಾವಣೆ ನಂತರ ಬಂದ್‌ ಆಗುವುದಾಗಿ ಬಿಜೆಪಿ ಪಕ್ಷದವರು ಸುಳ್ಳು ಹೇಳುತಿದ್ದು, ಇಂತಹ ಊಹಾಪೋಹಗಳಿಗೆ ಕಿವಿಗೊಡದೇ ಜನರು ತಲೆಗೆಡಸಿಕೊಳ್ಳಬಾರದು. ಕಾಂಗ್ರೆಸ್‌ 5 ಗ್ಯಾರಂಟಿಗಳು ಮುಂದುವರೆಯಲಿವೆ. ಜೊತೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೇ ಮಹಿಳೆಯರ ಖಾತೆಗೆ ₹1 ಲಕ್ಷ ಹಣ, ರೈತರ ಸಾಲಮನ್ನಾ ಮಾಡಲಾಗುವುದು. ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಕೋರಿದರು.

ರಾಯಬಾಗ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ಧಾರೂಢ ಬಂಡಗರ, ಯುವ ಮುಖಂಡ ಸದಾಶಿವ ದೇಸಿಂಗೆ, ನಿರ್ಮಲಾ ಪಾಟೀಲ, ಜಯಶ್ರೀ ಮೋಹಿತೆ, ಅಣ್ಣಾಸಾಹೇಬ್ ಭುವಿ, ನಾಮದೇವ ಕಾಂಬಳೆ, ಯೂನುಸ್‌ ಅತ್ತಾರ, ಬಾಹುಸಾಹೇಬ್‌ ಪಾಟೀಲ, ಅಪ್ಪಾಸಾಬ್‌ ಕುಲಗುಡೆ, ರಾಕೇಶ ಕಾಂಬಳೆ, ಹಾಜಿ ಮುಲ್ಲಾ, ದಿಲೀಪ ಜಮಾದಾರ, ಶಿವು ಪಾಟೀಲ, ಅಝರುದ್ದಿನ್ ಮುಲ್ಲಾ, ರವೀಂದ್ರ ಮೈಶಾಳೆ ಸೇರಿ ಅನೇಕರು ಇದ್ದರು.