ಗ್ರಾಮೀಣ ಗೃಹ, ಕರಕುಶಲ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿ ಬೆಳೆಸಿ

| Published : Aug 05 2025, 11:45 PM IST

ಗ್ರಾಮೀಣ ಗೃಹ, ಕರಕುಶಲ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿ ಬೆಳೆಸಿ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ಗೃಹ, ಕರಕುಶಲ ಕೈಗಾರಿಕೆಗಳು ಸಾಕಷ್ಟು ಗ್ರಾಮೀಣ ಜನರ ಬದುಕಿಗೆ ಜೀವನಾಧಾರ. ಆದರೆ ಇಂದು ಪ್ರೋತ್ಸಾಹ ವಿಲ್ಲದೇ ಇಂತಹ ಕಸುಬುಗಳು ನಶಿಸುವ ಹಂತದಲ್ಲಿದೆ. ನಾವು ಗ್ರಾಮೀಣ, ಕರಕುಶಲ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಮೆಣಸೆ ಸಂಜೀವಿನಿ ಒಕ್ಕೂಟದ ಶುಭಾಷಿಣಿ ಹೇಳಿದರು.

ಮೆಣಸೆ ಸೊಸೈಟಿ ಆವರಣದಲ್ಲಿ ನಡೆದ 2 ದಿನಗಳ ಮಾರಾಟ ಮೇಳ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಗೃಹ, ಕರಕುಶಲ ಕೈಗಾರಿಕೆಗಳು ಸಾಕಷ್ಟು ಗ್ರಾಮೀಣ ಜನರ ಬದುಕಿಗೆ ಜೀವನಾಧಾರ. ಆದರೆ ಇಂದು ಪ್ರೋತ್ಸಾಹ ವಿಲ್ಲದೇ ಇಂತಹ ಕಸುಬುಗಳು ನಶಿಸುವ ಹಂತದಲ್ಲಿದೆ. ನಾವು ಗ್ರಾಮೀಣ, ಕರಕುಶಲ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಮೆಣಸೆ ಸಂಜೀವಿನಿ ಒಕ್ಕೂಟದ ಶುಭಾಷಿಣಿ ಹೇಳಿದರು.

ಮೆಣಸೆ ಸೊಸೈಟಿ ಆವರಣದಲ್ಲಿ ಆಯೋಜಿಸಲಾಗಿದ್ದ ಜಿಪಿಎಲ್ ಎಫ್ 2 ದಿನಗಳ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿ ದರು.ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಗೃಹಕೈಗಾರಿಕೆಗಳ ಮೂಲಕ ಅನೇಕ ವಸ್ತುಗಳನ್ನು ಉತ್ತಾದಿಸುತ್ತಾರೆ.ವಿವಿಧ ಆಹಾರ,ಖಾದ್ಯಗಳನ್ನು ಉತ್ಪಾದಿಸುತ್ತಾರೆ. ಆದರೆ ಆ ವಸ್ತುಗಳಿಗೆ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇರುವುದಿಲ್ಲ.

ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು, ಆರ್ಥಿಕವಾಗಿ ಸದೃಢರಾಗಲು ಈ ಗೃಹ, ಕರಕುಶಲ ಕೈಗಾರಿಕೆಗಳು ಆಧಾರವಾಗಿವೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಕುಟುಂಬ ನಿರ್ವಹಣೆಗೂ ಪೂರಕವಾಗಬಲ್ಲದು. ಆದ್ದರಿಂದ ಜನರು ಇಂತಹ ಉತ್ತನ್ನಗಳನ್ನು ಕೊಳ್ಳುವ ಮೂಲಕ ಪ್ರೋತ್ಸಾಹಿಸಬೇಕು.

ರಾಸಾಯನಿಕ ರಹಿತವಾಗಿ ಬೆಳೆದಿರುವ ಸೊಪ್ಪು ತರಕಾರಿಗಳು,ಹಣ್ಣು ಹಂಪಲುಗಳು ,ಆಹಾರ ಖಾದ್ಯ ವಸ್ತುಗಳು ಆರೋಗ್ಯಕ್ಕೂ ಉತ್ತಮ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ವ್ಯಾಪಾರ ಮೇಳಗಳು ನಡೆಯುವುದರಿಂದ ಗ್ರಾಮೀಣ ಕಲೆ ಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಪಿಎಲ್ ಎಫ್ ನ ತಾಲೂಕು ಅಭಿಯಾನದ ಆದರ್ಶ,ಚೈತ್ರ,,ಪವಿತ್ರ,ಸುಪ್ರಿತಾ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

5 ಶ್ರೀ ಚಿತ್ರ 2-

ಶೃಂಗೇರಿ ಮೆಣಸೆ ಸೊಸೈಟಿ ಆವರಣದಲ್ಲಿ ಜಿಪಿ ಎಲ್ ಎಫ್ ಮಾರಾಟ ಮೇಳ ನಡೆಯಿತು.