ಸಾರಾಂಶ
ಪಾರಿಜಾತ ಅಭಿನಯವನ್ನು ಗುರುತಿಸಿ ನೇಪಥ್ಯದಲ್ಲಿ ಬಂದು ಅಭಿಮಾನ ಪೂರ್ವಕವಾಗಿ ಹೃದಯ ತುಂಬಿ ಮಾತನಾಡಿಸುವ ಅಭಿಮಾನಿಗಳೇ ಕಲಾವಿದರ ನಿಜವಾದ ಸಂಪತ್ತು
ಕನ್ನಡಪ್ರಭ ವಾರ್ತೆ ಲೋಕಾಪುರ
ಭಾರತೀಯ ಸಂಸ್ಕೃತಿಯ ಜೀವಂತಿಕೆ ಜಾನಪದ ಕಲೆ ಎಂದೂ ಸಂಬೋಧಿಸಲಾಗುತ್ತಿದ್ದರೂ ಜಾನಪದ ಪ್ರಕಾರಗಳನ್ನು ಪ್ರೋತ್ಸಾಹಿಸುವ ಹಾಗೂ ಕಲಾವಿದರನ್ನು ಗೌರವಿಸುವುದು ತೀರಾ ವಿರಳ ಎಂದು ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು ಹೇಳಿದರು.ಪಟ್ಟಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾರಿಜಾತ ಕಲಾವಿದ ಸಿದ್ದಪ್ಪ ಬಿದರಿರನ್ನು ಸನ್ಮಾನಿಸಿ ಮಾತನಾಡಿದ ಶ್ರೀಗಳು, ಕಲಾವಿದರಿಗೆ ಅನೇಕ ರೀತಿ ಮಾನ, ಸನ್ಮಾನ, ಮನ್ನಣೆ ಗೌರವ ಸಿಗುತ್ತದೆ. ಆದರೆ ಕಲಾವಿದರ ಪ್ರತಿಭೆಯನ್ನು ಪ್ರೇಕ್ಷಕ ವರ್ಗ ಗುರುತಿಸಿ, ಅಸ್ವಾದಿಸಿದಾಗ ಮಾತ್ರ ನಿಜವಾದ ಸಂತೃಪ್ತಿ ಸಿಕ್ಕುತ್ತದೆ. ಬಡ ಕಲಾವಿದರನ್ನು ಗುರುತಿಸಿದಾಗ ಮಾತ್ರ ಬಹು ದೊಡ್ಡ ಸಮಾಧಾನವಾಗುತ್ತದೆ. ಪಾರಿಜಾತ ಅಭಿನಯವನ್ನು ಗುರುತಿಸಿ ನೇಪಥ್ಯದಲ್ಲಿ ಬಂದು ಅಭಿಮಾನ ಪೂರ್ವಕವಾಗಿ ಹೃದಯ ತುಂಬಿ ಮಾತನಾಡಿಸುವ ಅಭಿಮಾನಿಗಳೇ ಕಲಾವಿದರ ನಿಜವಾದ ಸಂಪತ್ತು ಎಂದು ಹೇಳಿದರು.
ಗಣಿ ಉದ್ಯಮಿ ಎಂ.ಎಂ.ವಿರ‍್ತಕಮಠ ಮಾತನಾಡಿ, ಇವರ ಪಾರಿಜಾತ ಕಲೆ ಗಮನಿಸಿ ನಾಡಿನಾದ್ಯಂತ ಹಲವಾರು ಸಂಘ ಸಂಸ್ಥೆ, ಪ್ರತಿಷ್ಠಾನ ಸರ್ಕಾರಿಗಳು ಪ್ರಶಸ್ತಿ ಪುರಸ್ಕಾರಗಳಿಂದ ಗೌರವಿಸಿವೆ. ಜಾನಪದ ಕಲಾವಿದರನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದರೊಂದಿಗೆ ಹಿರಿಯ ಕಲಾವಿದರಿಗೆ ಸನ್ಮಾನಿಸುತ್ತಿರುವುದು ಕಾರ್ಯ ಶ್ಲಾಘನೀಯ ಎಂದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದರಾದ ದುರಗವ್ವ ರೊಡ್ಡಪ್ಪನವರ, ರತ್ನಾ ಕಾಳಮ್ಮನವರ ಜ್ಞಾನೇಶ್ವರ ಮಠದಿಂದ ಸನ್ಮಾನಿಸಲಾಯಿತು.
ಕಲಾವಿದ ಕೃಷ್ಣಾ ಭಜಂತ್ರಿ, ಸದಾಶಿವ ಉದಪುಡಿ, ಬಸವರಾಜ ಕಾತರಕಿ, ಭೀಮನಗೌಡ ಪಾಟೀಲ, ಪ್ರವೀಣ ಗಂಗಣ್ಣವರ, ಎಸ್.ಎಸ್.ಕೊಲ್ಹಾರ, ತಾಲೂಕಾ ಕಸಪಾ ಅಧ್ಯಕ್ಷ ಆನಂದ ಪೂಜಾರ, ಡಾ. ಲೋಕಣ್ಣ ಭಜಂತ್ರಿ, ಪರಪ್ಪಗೌಡ, ಎಸ್.ಎಂ.ರಾಮದುರ್ಗ, ಸಂಗಮೇಶ ಶಿರಗುಂಪಿ, ಅಲ್ಲಾಭಕ್ಷ ಭಾಗವಾನ, ಸಿದ್ದು ಹಿರೇಮಠ, ತಾಲೂಕು ಕಜಾಪ ಅಧ್ಯಕ್ಷ ರಮೇಶ ಅರಕೇರಿ, ಹಣಮಂತ ಬುದ್ನಿ, ಮಲ್ಲಯ್ಯ ಸಂಬಾಳದ, ಭಾಗ್ಯಾಶ್ರೀ ಪಾಟೀಲ, ವಿಜಯಲಕ್ಷ್ಮೀ ಕುಂದರಗಿ, ಪ್ರಕಾಶ ಕರಡಿಗುಡ್ಡ, ಪ್ರಭು ಹೊನವಾಡ, ಮುತ್ತು ತುಂಗಳ ಅಪಾರ ಕಲಾವಿದ ಬಳಗ, ಶಿಕ್ಷಕವೃಂದ, ಮಠದ ಸದ್ಭಕ್ತರು ಇದ್ದರು.