ಸೃಜನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೇರೆಪಿಸಿ

| Published : May 31 2024, 02:15 AM IST

ಸೃಜನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೇರೆಪಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳನ್ನು ಓದಿನೊಂದಿಗೆ ಸಾಹಿತ್ಯ, ಸಂಗೀತ, ಕಲೆ ಮತ್ತಿತರ ವಿಷಯಗಳಲ್ಲಿ ತೊಡಗಿಸುವುದರಿಂದ ಅವರ ಮನಸ್ಸು ಅರಳುವ ಜತೆಗೆ ಸೃಜನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸುತ್ತದೆ ಎಂದು ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಮಕ್ಕಳನ್ನು ಓದಿನೊಂದಿಗೆ ಸಾಹಿತ್ಯ, ಸಂಗೀತ, ಕಲೆ ಮತ್ತಿತರ ವಿಷಯಗಳಲ್ಲಿ ತೊಡಗಿಸುವುದರಿಂದ ಅವರ ಮನಸ್ಸು ಅರಳುವ ಜತೆಗೆ ಸೃಜನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸುತ್ತದೆ ಎಂದು ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ನುಡಿದರು.

ಪಟ್ಟಣದ ಶಾಖಾ ಮೂರುಸಾವಿರಮಠದ ಸಭಾಭವನದಲ್ಲಿ ಸಾಹಿತ್ಯ ಸಂಸ್ಕೃತಿ ಪ್ರತಿಷ್ಠಾನದ ಅಡಿಯಲ್ಲಿ ಲಿಂ.ಗುರುಪಾದಸ್ವಾಮಿ ಹಿರೇಮಠ ಸ್ಮರಣೆಯಲ್ಲಿ ಡಾ.ಗುರುದೇವಿ ಹುಲೆಪ್ಪನವರಮಠ ಅವರ ಬೆಳಗು ಜಗದ ಮಗು ಎನ್ನುವ ಶಿಶು ಕವನ ಸಂಕಲನ ಹಾಗೂ ಬಾಗಲಕೋಟೆಯ ಸೋಮಲಿಂಗ ಬೇಡರ ಅವರ ಪುಟ್ಟಿ ಹೆಜ್ಜೆ ಕುಣಿಸು ಗೆಜ್ಜೆ ಕೃತಿಗೆ ಶಿಶು ಸಾಹಿತ್ಯ ಜ್ಯೋತಿ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿದರು.ನಿವೃತ್ತ ಶಿಕ್ಷಕ ಜಿ.ಬಿ.ತುರಮರಿ ಅಧ್ಯಕ್ಷತೆ ವಹಿಸಿದ್ದರು. ಶಾಂತಾದೇವಿ ಹುಲೇಪ್ಪನವರಮಠ, ಎಂ.ಎಂ.ಸಂಗಣ್ಣವರ, ಬಿ.ವಿ.ನೇಸರಗಿ ಅತಿಥಿಗಳಾಗಿ ಆಗಮಿಸಿದ್ದರು. ಡಾ.ಮಲ್ಲಿಕಾರ್ಜುನ ಛಬ್ಬಿ, ಸಿದ್ದು ನೇಸರಗಿ ಅವರು ಕೃತಿ ವಿಮರ್ಶಿಸಿದರು. ಕವಿಗೋಷ್ಠಿಯಲ್ಲಿ ಅನೇಕ ಶಿಕ್ಷಕ ಕವಿಗಳು ಕವನ ವಾಚಿಸಿದರು. ರಾಜೇಂದ್ರಸ್ವಾಮಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ವಿ.ಪತ್ತಾರ ಸ್ವಾಗತಿಸಿದರು. ಶಿವಪ್ರಸಾದ ಹುಲೆಪ್ಪನವಮಠ ನಿರೂಪಿಸಿದರು. ರಾಮಕೃಷ್ಣ ಹೋಟಕರ ವಂದಿಸಿದರು.