ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತ ಗೊಳಿಸದೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪಾಲಕರು ಪ್ರೋತ್ಸಾಹಿಸಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತ ಗೊಳಿಸದೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪಾಲಕರು ಪ್ರೋತ್ಸಾಹಿಸಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. ನಗರದ ಬಸವಭವನದಲ್ಲಿ ಗುರುವಾರ ನೂಪುರ ನೃತ್ಯ ವಿದ್ಯಾಮಂದಿರದ ನೃತ್ಯ ವೈಭವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮಕ್ಕಳನ್ನು ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತಗೊಳಿಸದೇ ಶಾಸ್ತ್ರೀಯ ಸಂಗೀತ, ನೃತ್ಯ, ಭಾರತೀಯ ಕಲಾಪ್ರಕಾರ ಕಲಿಯಲು ಪ್ರೋತ್ಸಾಹಿಸಬೇಕು. ಇದರಿಂದ ದೇಶದ ಸಂಸ್ಕೃತಿ ಉಳಿಸಿ ಬೆಳೆಸಿದಂತಾಗುತ್ತದೆ. ಮಕ್ಕಳಿಗೆ ದೈಹಿಕ ಮಾನಸಿಕ ಬೆಳವಣಿಗೆಗೆ ನೃತ್ಯ ಪೂರಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ. ಡಾ.ಸುನಂದಾ ಎಸ್. ಶಿರೂರ ಮಾತನಾಡಿ, ಮೊಬೈಲ್ ಗೀಳಿನಿಂದಾಗಿ ಮಕ್ಕಳು ಚಟುವಟಿಕೆ ರಹಿತರಾಗಿದ್ದಾರೆ. ಸಂಗೀತ ನೃತ್ಯದಲ್ಲಿ ಪಾಲ್ಗೊಳ್ಳುವ ಮಕ್ಕಳು ಮಾನಸಿಕ, ದೈಹಿಕವಾಗಿ ಸದೃಢರಾಗುತ್ತಾರೆ. ನೃತ್ಯದ ಭಂಗಿಗಳು ಯೋಗಸಾಧನವಿದ್ದಂತೆ, ಇದರಿಂದ ಮಾನಸಿಕ ಬಲ ದೊರೆಯುತ್ತದೆ ಎಂದು ಹೇಳಿದರು.

ಡಾ.ಲಕ್ಷ್ಮೀ ತುಂಗಳ, ಡಾ.ಎಚ್.ಜಿ.ದಡ್ಡಿ, ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಗೋವಿಂದ ಪಿ.ಭಂಗ ಮಾತನಾಡಿದರು. ಡಾ.ಜಿ.ಎನ್. ಸನದಿ, ಉಪನ್ಯಾಸಕ ಎಸ್.ಎಂ. ಕುಂಬಾರ, ಕಲಾವಿದ ಜಗನ್ನಾಥ ದೇಸಾಯಿ, ನೂಪುರ ನೃತ್ಯ ವಿದ್ಯ ಮಂದಿರದ ನಿರ್ದೇಶಕಿ ವಿದುಷಿ ಜಯೇಶ್ವರಿ.ಎಂ.ನಾಯಕ ವೇದಿಕೆಯಲ್ಲಿದ್ದರು.

ನೃತ್ಯಕಲೆಯಲ್ಲಿ ಸಾಧನೆಗೈದು ವಿದ್ವತ್ ಪೂರ್ಣಗೊಳಿಸಿದ ಶಿವಾನಿ ಕುಂಚನೂರ ಹಾಗೂ ನೃತ್ಯಕಲಾ ವಿದ್ಯಾರ್ಥಿಗಳಾದ ರಂಜಿತಾ ಪಟ್ಟಣಶೆಟ್ಟಿ, ಸಂಜನಾವಾಲಿ, ವಿಜಯಲಕ್ಷ್ಮೀ ಮೇತ್ರಿ, ಛಾಯಾ ಹಿಕಡಿ, ಮೇಘನಾ ಬೆಳಗಲಿ, ಗೀತಾಂಜಲಿ ಓದಿಕಾರ, ಅಮೂಲ್ಯಾ ಕಾಂಬ್ಳೆ, ಮೇಘಾ ಪತ್ತಾರ, ಸಹನಾ ಗುರವ, ಸುವರ್ಣಾ ಜಿರಲಿ, ಸುಧಿಕ್ಷಾ ಜಕಾತಿ, ವಿಶ್ವಶ್ರೀ ಕಂಬಾರ, ಕಾವ್ಯಾಂಜಲಿ ಭಾಕಸಕೇಡೆ, ನವ್ಯಾ ಬಸವನಾಳ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಹಾಡುಗಾರಿಕೆ ಸಾಗರದ ವಿದ್ವಾನ್‌ ಅಶೋಕ ಹೆಗ್ಗೊಡು, ಹೊನ್ನಾವರದ ವಿದ್ವಾನ್‌ ಪದ್ಮರಾಜ ಭಟ್ಟ ಮೃದಂಗ, ಧಾರವಾಡದ ವಿದ್ವಾನ್‌ ಶಂಕರ ಕಬಾಡಿ ವಯಲಿನ್, ಧಾರವಾಡದ ವೈಭವ ಭಟ್ಟ್ ಕೊಳಲು ಸಾಥ್‌ ನೀಡಿದರು. ಶ್ರೀನಿವಾಸ ಕಟ್ಟಿಮನಿ, ರತ್ನಾ ಅಮೀತ ಸೇಠ ನಿರೂಪಿಸಿ ವಂದಿಸಿದರು.