ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಚಿಂತನೆ ಪ್ರೋತ್ಸಾಹಿಸಿ

| Published : Mar 01 2025, 01:01 AM IST

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಚಿಂತನೆ ಪ್ರೋತ್ಸಾಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ- ಕಾಲೇಜುಗಳ ಮಟ್ಟದಲ್ಲಿ ಆಯೋಜಿಸುವ ವಿಜ್ಞಾನ ವಸ್ತು ಪ್ರದರ್ಶನ, ವಿಜ್ಞಾನ ಜಾತ್ರೆ ಕಾರ್ಯಕ್ರಮಗಳು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಶಾಲಾ ವಿಜ್ಞಾನ ಸಂಘ ಅಧ್ಯಕ್ಷೆ ಡಾ. ಶಕುಂತಲಾ ರಾಜ್ ಕುಮಾರ್ ಹೇಳಿದ್ದಾರೆ.

- ವಿಜ್ಞಾನ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಶಾಲಾ ವಿಜ್ಞಾನ ಸಂಘ ಅಧ್ಯಕ್ಷೆ ಡಾ. ಶಕುಂತಲಾ ಸಲಹೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶಾಲಾ- ಕಾಲೇಜುಗಳ ಮಟ್ಟದಲ್ಲಿ ಆಯೋಜಿಸುವ ವಿಜ್ಞಾನ ವಸ್ತು ಪ್ರದರ್ಶನ, ವಿಜ್ಞಾನ ಜಾತ್ರೆ ಕಾರ್ಯಕ್ರಮಗಳು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಶಾಲಾ ವಿಜ್ಞಾನ ಸಂಘ ಅಧ್ಯಕ್ಷೆ ಡಾ. ಶಕುಂತಲಾ ರಾಜ್ ಕುಮಾರ್ ಹೇಳಿದರು.

ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಶಾಲೆಯಿಂದ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿಯೇ ವೈಜ್ಞಾನಿಕ ಮನೋಭಾವನೆಯನ್ನು ಶಿಕ್ಷಕರು ಮೂಡಿಸಬೇಕು. ವಿಜ್ಞಾನ ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳು ಇಂತಹ ಚಿಂತನೆ ಹೆಚ್ಚುಸುತ್ತವೆ ಎಂದರು.

ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸ್ವ-ಕಲಿಕೆಗೆ ಪ್ರೋತ್ಸಾಹದಾಯಕವಾಗಿದೆ. ವಿಜ್ಞಾನಿಗಳು ವಿದ್ಯಾರ್ಥಿ ಜೀವನದಲ್ಲಿಯೇ ರೂಪುಗೊಳ್ಳುತ್ತಾರೆ. ಅವರ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಶಿಕ್ಷಕರು ಮಾಡಬೇಕು. ಇಂದು ಎಲ್‌ಕೆಜಿಯಿಂದ 9ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸುವಿಕೆಯು ಹಲವು ವಿಜ್ಞಾನಿಗಳನ್ನು ರೂಪಿಸುವ ಸಾಧ್ಯತೆಗಳು ಇರುತ್ತವೆ ಎಂದರು. ಎಲ್‌ಕೆಜಿಯ ವಿದ್ಯಾರ್ಥಿಗಳು ವಿವಿಧ ಹಣ್ಣುಗಳು, ಯುಕೆಜಿಯಿಂದ ವಾಹನಗಳು, 1ನೇ ತರಗತಿಯಿಂದ ಔಷಧಿ ಸಸ್ಯಗಳು, 2ನೇ ತರಗತಿಯ ವಿದ್ಯಾರ್ಥಿಗಳು ತರಕಾರಿ, 3ನೇ ತರಗತಿಯ ವಿದ್ಯಾರ್ಥಿಗಳು ಹೂವುಗಳು, 4ನೇ ತರಗತಿಯ ವಿದ್ಯಾರ್ಥಿಗಳು ಎಲೆಗಳು, 5ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಪ್ರಯೋಗಗಳ ಮಾದರಿಗಳು ಗಮನ ಸೆಳೆದವು. ವಿಜ್ಞಾನ ಸಂತೆ, ಮೇಳದಲ್ಲಿ ಮಣ್ಣಿನಿಂದ ತಯಾರಿಸಿದ ಮಡಿಕೆ, ಕುಕ್ಕರ್, ವಾಟರ್ ಬಾಟಲಿಗಳು, ಇಡ್ಲಿ ಸ್ಟಾಂಡ್, ಹಾಟ್ ಬಾಕ್ಸ್, ರೊಟ್ಟಿ ಹೆಂಚು ಗಮನ ಸೆಳೆದವು, ವಿದ್ಯಾರ್ಥಿಗಳೇ ಮನೆಯಲ್ಲಿ ತಯಾರಿಸಿದ ಜ್ಯೂಸ್, ಮಂಡಕ್ಕಿ, ಹಣ್ಣುಗಳು ಅಗಮಿಸಿದ ಗಣ್ಯರು ಖರೀದಿಸಿದರು.

ಈ ಸಂದರ್ಭ ಸಂಸ್ಥೆ ಅಧ್ಯಕ್ಷ ಎ.ಆನಂದ್ ಕುಮಾರ್, ಸಹ ಕಾರ್ಯದರ್ಶಿ ಗಣೇಶ್ ಕೆ., ಖಜಾಂಚಿ ಸೋಮಶೇಖರಪ್ಪ ಕೆ., ಹಾಲೇಶ್ ಕುಂಕೋದ್, ಎಚ್.ಎಂ. ಅರುಣ್ ಕುಮಾರ್, ಜಯಪ್ಪ ಎಚ್.ಟಿ, ಪ್ರಕಾಶ್ ಹೆಬ್ಬಾರ್, ಅಂಬಿಕಾ ಹೆಬ್ಬಾರ್, ರಾಜು ಜಿ.ಎಚ್., ಪ್ರಸನ್ನ ಕೆ.ವಿ., ಡಾ.ಲಿಂಗರಾಜ್, ಮುಖ್ಯೋಪಾಧ್ಯಾಯರಾದ ತಿಮ್ಮೇಶ್ ಆರ್., ಪುನೀತ್ ಎಂ.ಕೆ., ಶಿಕ್ಷಕರಾದ ಗಿರೀಶ್ ನಾಡಿಗ್, ಅಶೋಕ್ ಎಚ್., ರವಿ, ಸತೀಶ್, ಮಂಜಪ್ಪ, ನಾಗಮ್ಮ, ರುಕ್ಮಿಣಿ, ಶಶಿಕಲಾ, ಸುಮ, ಶಿವಲಿಂಗಪ್ಪ ಇದ್ದರು.

- - - -28ಎಚ್.ಎಲ್.ಐ1.ಜೆಪಿಜಿ:

ವಿಜ್ಞಾನ ಜಾತ್ರೆ ಕಾರ್ಯಕ್ರಮವನ್ನು ವಿಜ್ಞಾನ ಸಂಘದ ಅಧ್ಯಕ್ಷೆ ಡಾ.ಶಕುಂತಲಾ ರಾಜ್ ಕುಮಾರ್ ಉದ್ಘಾಟಿಸಿದರು.