ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಡಿ.೩ರಂದು ವಿಶ್ವ ವಿಶೇಷಚೇತನರ ದಿನಾಚರಣೆ ಆಚರಿಸಲಾಗುತ್ತಿದೆ. ವಿಶ್ವ ಸಂಸ್ಥೆಯ ಪ್ರಸಕ್ತ ಸಾಲಿನಲ್ಲಿ ಘೋಷವಾಕ್ಯವಾದ ಸಮಗ್ರ ಮತ್ತು ಸುಸ್ಥಿರ ಭವಿಷ್ಯವಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವಕ್ಕೆ ಉತ್ತೇಜನ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಂಗಳಾ ತಿಳಿಸಿದರು. ನಗರದ ಗಡಿಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯಿಂದ ವಿಶ್ವ ವಿಕಲಚೇತನರ ದಿನಾಚರಣೆ-೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ವಿಶೇಷಚೇತನರನ್ನು ಕೀಳಾಗಿ ನೋಡದೆ, ಮುಂದೆ ತರಲು ಪ್ರಯತ್ನಿಸಬೇಕು ಎಂದರು. ವಿಶೇಷ ಚೇತನರಿಗೆ ಸೌಲಭ್ಯ
೨೦೦೬ರಲ್ಲಿ ವಿಶೇಷ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯನ್ನು ಪ್ರತ್ಯೇಕವಾಗಿ ಜಾರಿಗೆ ತರಲಾಗಿದೆ. ದ್ವಿಚಕ್ರವಾಹನ, ಬ್ಯಾಟರಿ ಅಳವಡಿಸಿದ ನಿಯಂತ್ರಚಾಲಿತ ದ್ವಿಚಕ್ರವಾಹನ, ಶ್ರವಣದೋಷದವರಿಗೆ ಯಂತ್ರ ನೀಡುವುದು. ಅಂಧರಿಗೆ ಟಾಕಿಂಗ್ ಲ್ಯಾಪ್‌ಟ್ಯಾಪ್, ಹೊಲಿಗೆ ಯಂತ್ರ ಹಾಗೂ ವಿಶೇಷಚೇತನರ ಪಾಲಕರಿಗೆ ಸಹಾಯಧನವನ್ನು ನೀಡಲಾಗುತ್ತದೆ. ಸೌಲಭ್ಯಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬಂದು ಅವರಲ್ಲಿರುವ ಪ್ರತಿಭೆಯೂ ಸಮಾಜಕ್ಕೆ ಕೊಡುಗೆಯಾಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ್ ಎಸ್.ಹೊಸಮನಿ ಮಾತನಾಡಿ, ಸಮಾಜದಲ್ಲಿ ವಿಶೇಷಚೇತನರಿಗೆ ಅನುಕಂಪ ತೊರದೆ, ಅವಕಾಶಗಳನ್ನು ಕಲ್ಪಿಸಬೇಕು ಎಂದರು.ಹಕ್ಕುಗಳಿಗೆ ಧಕ್ಕೆ ತರಬಾರದು೨೦೧೬ರಲ್ಲಿ ವಿಶೇಷಚೇತನರಿಗೆ ಹಕ್ಕುಗಳ ಅಧಿನಿಯಮ ಜಾರಿಗೆ ತಂದಿದ್ದರು. ೭ ಹಕ್ಕುಗಳಿದ್ದು, ಇತ್ತೀಚಿನ ದಿನಗಳ ೨೧ಕ್ಕೆ ಏರಿಸಲಾಗಿದೆ. ಅವರ ಹಕ್ಕುಗಳಿಗೆ ಧಕ್ಕೆ ಉಂಟಾದ ಸಂದರ್ಭದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನಿನ ಅರಿವು ಅಥವಾ ಅವಶ್ಯಕತೆ ನೀಡುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕ್ರೀಡಾ ಮತ್ತು ಸಂಸ್ಕೃತಿ ಚಟುವಟಿಕೆಗಳಲ್ಲಿ ವಿಜೇತ ಸುಭಾಷ್‌ರಿಗೆ ಪ್ರಥಮ, ಯಶ್ವಂತ್‌ಗೆ ದ್ವಿತೀಯ, ವೀರಭದ್ರಚಾರಿರಿಗೆ ತೃತೀಯ ಬಹುಮಾನ ಹಾಗೂ ಅಬ್ದುಲ್ ಮುಂತಾದವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.ನಗರಸಭಾಧ್ಯಕ್ಷೆ ಕೆ.ಲಕ್ಷ್ಮೀದೇವಮ್ಮ ರಮೇಶ್, ಉಪಾಧ್ಯಕ್ಷೆ ಸಂಗೀತ ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾರಾಯಣಸ್ವಾಮಿ.ಎನ್, ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ರಮ್ಯ.ಎಂ, ಸಂಘ ಸಂಸ್ಥೆ ಕಾರ್ಯದರ್ಶಿ ಸುಪ್ರೀಂ ಇದ್ದರು.