ಸಾರಾಂಶ
ಗ್ರಾಮೀಣ ಭಾಗದ ಜನ ಬಯಲು ನಾಟಕ, ರಂಗಭೂಮಿ ಕಲೆ ನಮ್ಮ ಪ್ರತಿಭೆಗಳನ್ನು ಗುರುತಿಸಿ ಪೋಷಿಸಬೇಕು.
ಕುರುಗೋಡು: ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆಗಳ ಉಳಿವಿಗಾಗಿ ಇಂತಹ ಬಯಲು ನಾಟಕ, ಸುಗಮ ಸಂಗೀತ ಸೇರಿದಂತೆ ಇನ್ನಿತರ ರಂಗಭೂಮಿಯ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಮುದ್ದಟನೂರು ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ಇಲ್ಲಿನ ತಾಲೂಕಿನ ಸಮೀಪದ ಬಾದನಹಟ್ಟಿ ಗ್ರಾಮದ ಶ್ರೀ ಉಡಸಲಮ್ಮ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಆಶ್ರಯದಲ್ಲಿ ವದ್ದಟ್ಟಿ ರಂಗ ಬಸವೇಶ್ವರ ಕಲಾ ಟ್ರಸ್ಟ್ ವತಿಯಿಂದ ಸಂಜೆ ಹಮ್ಮಿಕೊಂಡಿದ್ದ ದಸರಾ ಗ್ರಾಮೀಣ ರಂಗೋತ್ಸವ ಕರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಗ್ರಾಮೀಣ ಭಾಗದ ಜನ ಬಯಲು ನಾಟಕ, ರಂಗಭೂಮಿ ಕಲೆ ನಮ್ಮ ಪ್ರತಿಭೆಗಳನ್ನು ಗುರುತಿಸಿ ಪೋಷಿಸಬೇಕು. ಈ ಸಂರ್ಭದಲ್ಲಿ ಗ್ರಾಪಂ ಅಧ್ಯಕ್ಷ ಕರಿಬೇಡರ ಕರೆಣ್ಣ ರಂಗ ಬಸವೇಶ್ವರ ಕಲಾ ಟ್ರಸ್ಟ್ ಕರ್ಯರ್ಶಿ ಹುಲಗಯ್ಯ ನಾಯಕರ್, ಪಿ.ಕರೆಣ್ಣ, ಸಿದ್ದಮ್ಮನಹಳ್ಳಿ ಕರಿಬಸಪ್ಪ, ಹುಲುಗಪ್ಪ, ಎಂ.ಬುಡ್ಡಪ್ಪ, ಕರಿಬಸವನಗೌಡ, ಜಡೇಶ್ . ಕೆ.ರ್ರಿನಾಗೇಶ್. ಅಂಜಿನಪ್ಪ, ಪಾಂಡು, ಗ್ರಾಮದ ಮುಖಂಡರು, ಇದ್ದರು.
ಕುರುಗೋಡು ತಾಲೂಕಿನ ಸಮೀಪದ ಬಾದನಹಟ್ಟಿ ಗ್ರಾಮದ ಉಡಸಲಮ್ಮ ದೇವಸ್ಥಾನದ ಆವರಣದಲ್ಲಿ ದಸರಾ ಗ್ರಾಮೀಣ ರಂಗೋತ್ಸವ ಬಯಲು ನಾಟಕ ಹಮ್ಮಿಕೊಳ್ಳಲಾಯಿತು.