ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ ಅಗತ್ಯ: ಸಿಇಒ ಕಾಂದೂ

| Published : Jan 12 2024, 01:45 AM IST

ಸಾರಾಂಶ

ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವದ್ಯೋಗಕ್ಕೆ ಪ್ರೋತ್ಸಾಹ ನೀಡಿದಾಗ ಮಾತ್ರ ಅವರು ಸ್ವಾವಲಂಬಿಗಳಾಗಲು ಸಾಧ್ಯ.

ಶಿರಸಿ:

ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವದ್ಯೋಗಕ್ಕೆ ಪ್ರೋತ್ಸಾಹ ನೀಡಿದಾಗ ಮಾತ್ರ ಅವರು ಸ್ವಾವಲಂಬಿಗಳಾಗಲು ಸಾಧ್ಯ ಎಂದು ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಹೇಳಿದರು.

ಮಂಗಳವಾರ ಶಿರಸಿಗೆ ಭೇಟಿ ನೀಡಿ, ಉಂಚಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಕೊಪ್ಪ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಡೈರಿ ಹಾಗೂ ಸುಭಾಶ್ಚಂದ್ರ ಶಿರಾಲಿ ಅವರ ಆಲೆಮನೆಗೆ ಭೇಟಿ ನೀಡಿ ಮಾತನಾಡಿದರು.ಕಾನಕೊಪ್ಪದ ಹಾಲು ಉತ್ಪಾದಕ ಮಹಿಳಾ ಸಂಘದ ಸದಸ್ಯರನ್ನು ಭೇಟಿ ಮಾಡಿ, ಹಾಲು ಡೈರಿ ಸ್ಥಾಪನೆಗೆ ಕಾರಣ, ಡೈರಿಯ ನಿರ್ವಹಣೆ, ಹಾಲು ಖರೀದಿ, ಲಾಭಾಂಶ ವಿತರಣೆ ಮುಂತಾದ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು. ಮಹಿಳೆಯರು ಮತ್ತು ಹೈನುಗಾರಿಕೆಗಿರುವ ಅನ್ಯೋನ್ಯ ಸಂಬಂಧದ ಕುರಿತು ಚುಟುಕಾಗಿ ತಿಳಿಸಿ, ಹೈನುಗಾರಿಕೆಯಿಂದಲೇ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂದು ತಿಳಿಸುವ ಮೂಲಕ ಸದಸ್ಯೆಯರಿಗೆ ಸ್ವಾವಲಂಬನೆಯ ಬದುಕು ಕೊಟ್ಟಿಕೊಳ್ಳಲು ಪ್ರೇರೇಪಿಸಿದರು.ಆನಂತರ ಕಾನಕೊಪ್ಪದ ಸುಭಾಶ್ಚಂದ್ರ ಶಿರಾಲಿ ಅವರ ಆಲೆಮನೆಗೆ ಭೇಟಿ ನೀಡಿದರು. ಆಲೆಮನೆ ನಿರ್ಮಾಣ, ನಿರ್ವಹಣೆ, ಕಬ್ಬಿನ ಲಭ್ಯತೆ ಹಾಗೂ ಮಾರುಕಟ್ಟೆ ಸವಾಲುಗಳ ಕುರಿತು ಚರ್ಚಿಸಿದರು. ನಂತರ ಆಲೆಮೆನಯಲ್ಲಿ ಕಬ್ಬಿನಿಂದ ಹಾಲು ತೆಗೆದು, ಕುದಿಸಿ ಸಾವಯವ ಬೆಲ್ಲ ತಯಾರಿಸುವುದನ್ನು ವೀಕ್ಷಿಸಿದರು. ಬೆಲ್ಲ ತಯಾರಿಕೆಯ ಹಂತದಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿಯಾಗದಿರುವುದುನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.ಈ ವೇಳೆ ಶಿರಸಿ ತಾಪಂ ಇಒ ಸತೀಶ ಹೆಗಡೆ, ಸಹಾಯಕ ನಿರ್ದೇಶಕ ಬಿ.ವೈ. ರಾಮಮೂರ್ತಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ NRLM ಸಿಬ್ಬಂದಿ ಹಾಜರಿದ್ದರು.