ಹೆಣ್ಮಕ್ಕಳ ಮೇಲಿನ ಕ್ರೌರ್ಯಕ್ಕೆ ಕಡಿವಾಣ ಹಾಕಲಿ: ಹನೀಫಾ ಹುಣಚಗಿ

| Published : May 21 2024, 12:34 AM IST

ಹೆಣ್ಮಕ್ಕಳ ಮೇಲಿನ ಕ್ರೌರ್ಯಕ್ಕೆ ಕಡಿವಾಣ ಹಾಕಲಿ: ಹನೀಫಾ ಹುಣಚಗಿ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಸರಣಿ ಕೊಲೆಗಳು ನಾಗರಿಕ ಸಮಾಜದಲ್ಲಿ ಭೀತಿ ಹುಟ್ಟಿಸಿದೆ. ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಇಳಕಲ್ಲಿನ ಜಮಾಅತೆ ಇಸ್ಲಾಮಿ ಮಹಿಳಾ ವಿಭಾಗದ ಸಂಚಾಲಕಿ ಹನೀಫಾ ಹುಣಚಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲಒಂದು ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಸರಣಿ ಕೊಲೆಗಳು ನಾಗರಿಕ ಸಮಾಜದಲ್ಲಿ ಭೀತಿ ಹುಟ್ಟಿಸಿದೆ. ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ದೃಶ್ಯ ಮಾಧ್ಯಮಗಳು ನೈಜ ವರದಿ ಮಾಡಬೇಕು ಎಂದು ಇಳಕಲ್ಲಿನ ಜಮಾಅತೆ ಇಸ್ಲಾಮಿ ಮಹಿಳಾ ವಿಭಾಗದ ಸಂಚಾಲಕಿ ಹನೀಫಾ ಹುಣಚಗಿ ತಿಳಿಸಿದರು.

ನಗರದ ಎಸ್.ಆರ್. ಕಂಠಿ ವೃತ್ತದಲ್ಲಿ ಸರಣಿ ಹತ್ಯೆ ಗಳನ್ನು ಖಂಡಿಸಿ ಜಮಾಅತೆ ವತಿಯಿಂದ ಪ್ರತಿಭಟನೆ ನಡೆಸಿ ಇಳಕಲ್ಲ ತಾಲೂಕು ತಹಸೀಲ್ದಾರಗೆ ಮನವಿ ಸಲ್ಲಿಸಿ ಮಾತನಾಡಿ, ಅನ್ಯ ಧರ್ಮದವರನ್ನು ಪ್ರೀತಿಸಿದ, ಮದುವೆಯಾದ ಕಾರಣಕ್ಕೆ ಹೆತ್ತವರೇ ಕೊಲೆ ಮಾಡುವ ಮರ‍್ಯಾದೆಗೇಡು ಹತ್ಯೆಗಳು ಒಂದೆಡೆಯಾದರೆ, ಮನೆಯವರ ಒತ್ತಡಕ್ಕೋ ಅಥವಾ ಬೇರೆ ಯಾವುದೋ ಕಾರಣಕ್ಕೆ ಯುವತಿಯರು ಪ್ರೀತಿ ನಿರಾಕರಿಸಿದರೆಂದು ಹಾಡಹಗಲೇ ಚಾಕುವಿನಿಂದ ಇರಿದು ಜೀವ ತೆಗೆಯುವ ಅಮಾನವೀಯ ಪ್ರವೃತ್ತಿ ಹೆಚ್ಚುತ್ತಿದೆ. ಇದು ಶತಮಾನಗಳಿಂದ ಸಾಗಿ ಬಂದಿರುವ ಹೆಣ್ಣುಮಕ್ಕಳ ಮೇಲಿನ ಪುರುಷನ ದೌರ್ಜನ್ಯದ ಸಂಕೇತವಾಗಿದೆ. ಈ ಸಮಾಜ ಎಷ್ಟೇ ಬದಲಾದರೂ ಹೆಣ್ಣಿನ ಮೇಲಿನ ಕಾಮ, ಕ್ರೌರ್ಯ, ದಬ್ಬಾಳಿಕೆಗೆ ಕಡಿವಾಣ ಬಿದ್ದಿಲ್ಲ. ಭವಿಷ್ಯದಲ್ಲಿ ಬೀಳುವ ಸೂಚನೆಗಳೂ ಇಲ್ಲ ಎಂಬುದು ಕಟು ವಾಸ್ತವ ಎಂದರು.

ಎಲ್ಲಾ ಜಾತಿ ಜನಾಂಗದ ಯುವತಿಯರೂ ಇದಕ್ಕೆ ಬಲಿಪಶುಯಾಗಿರುವುದು ಕಟು ಸತ್ಯವಾಗಿದ್ದು, ಆದರೆ ಮಾಧ್ಯಮಗಳು ಒಂದು ಸಮಾಜವನ್ನು ಗುರಿಯಾಗಿಸಿ ವರದಿ ಮಾಡುತ್ತಿರುವುದು ನೋವಾಗಿದೆ. ಕಾರಣ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಮತ್ತು ನೈಜ ಸುದ್ದಿ ಬಿತ್ತರಿಸುವಂತೆ ಸರ್ಕಾರ ಮಾಧ್ಯಮಗಳಿಗೆ ನಿರ್ದೆಶನ ಮಾಡಬೇಕು ಎಂದು ತಿಳಿಸಿದರು.

ಜಮಾಅತೆ ಇಸ್ಲಾಮಿ ಮಹಿಳಾ ವಿಭಾಗದ ಸಂಚಾಲಕಿ ಹನೀಫಾ ಹುಣಚಗಿ, ಗುಲ್ನಾಜ್ ಬೇಪಾರಿ, ಆಯೀಶಾ ತಹಸೀಲ್ದಾರ್, ಜಿ.ಐ,ಓ ರಾಜ್ಯ ಹೊಣೆಗಾರ ಸೀಮಾ ಹುಮ್ನಾಬಾದ, ಜಮಾಅತೆ ಇಸ್ಲಾಮಿ ವಿಭಾಗೀಯ ಸಂಚಾಲಕ ಮೆಹಬೂಬ ಆಲಂ ಬಡಗನ್, ಸ್ಥಾನೀಯ ಅಧ್ಯಕ್ಷ ಸಯೀದ್‌ ಅಹ್ಮದ ಕೊತ್ವಾಲ್‌, ಎಸ್.ಐ.ಒ ರಾಜ್ಯ ಕಾರ್ಯಕಾರ್ಶಿ ಮುಹ್ಮದ ಪೀರ್ ಲಟಗೇರಿ, ಅಬ್ದುಲ್ ಗಫಾರ ತಹಶೀಲ್ದಾರ್, ಹಬಿಬುಲ್ಲಾಹ ತಾವರಗೇರಿ, ಹುಸೇನಬಾಷಾ ಸೂಳಿಭಾವಿ, ಮುಹ್ಮದ ಗೌಸ್ ಗಡಾದ, ಮುರ್ತುಜಾ ಕಾಕಬಾಳ ಮತ್ತಿತರು ಹಾಜರಿದ್ದರು.