ಸಾರಾಂಶ
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಸರ್ಕಾರಿ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಾಗುವಾನಿ ಗಿಡ ವಿತರಣಾ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಉದ್ಯಾವರ
ಇಂದು ಅಭಿವೃದ್ಧಿಯ ಹೆಸರಲ್ಲಿ ನಾವು ಮರಗಳನ್ನು ಕಡಿದು ಹಾಕುತ್ತಿದ್ದೇವೆ. ಇದೆ ಚಾಳಿ ಮುಂದುವರಿದರೆ ಮುಂದೊಂದು ದಿವಸ ನಮಗೆ ಆಮ್ಲಜನಕದ ಕೊರತೆಯಾಗುವಂತ ಸಂದರ್ಭ ಬಂದು ಬದುಕು ದುಸ್ತರವಾಗುತ್ತದೆ. ನಕಲಿ ಅಭಿವೃದ್ಧಿ ಮಾಡುವ ಪ್ರಕೃತಿ ನಾಶದ ಬಗ್ಗೆ ನಾವು ಜಾಗರೂಕರಾಗಿರಬೇಕು. ಇಲ್ಲದಿದ್ದಲ್ಲಿ ಮುಂದೊಂದು ದಿನ ಮನುಕುಲ ದುರಂತದತ್ತ ಸಾಗುವ ಅಪಾಯವಿದೆ ಎಂದು ಉಡುಪಿ ಗಸ್ತು ಅರಣ್ಯಪಾಲಕ ಕೇಶವ ಪೂಜಾರಿ ಹೇಳಿದರು.ಅವರು ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಸರ್ಕಾರಿ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸಾಗುವಾನಿ ಗಿಡ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಇಲ್ಲಿ ಗಿಡಗಳನ್ನು ಕೇವಲ ವಿತರಿಸುವುದು ಮಾತ್ರವಲ್ಲ, ವಿತರಿಸಿದ ಗಿಡಗಳನ್ನು ಒಂದು ವರ್ಷದ ಅವಧಿಯಲ್ಲಿ ಚೆನ್ನಾಗಿ ಬೆಳೆಸಿದ ವಿದ್ಯಾರ್ಥಿಗೆ ನಗದು ಪುರಸ್ಕಾರವನ್ನು ಕೂಡ ಸಂಸ್ಥೆ ನೀಡುತ್ತದೆ ಎಂದರು.ವೇದಿಕೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಮೂಕಾಂಬೆ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಗುರುಪ್ರಸಾದ್, ಸಂಸ್ಥೆಯ ನಿರ್ದೇಶಕ ಶರತ್ ಕುಮಾರ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ತಿಲಕ್ ರಾಜ್ ಸಾಲ್ಯಾನ್ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಆಬಿದ್ ಅಲಿ ವಂದಿಸಿದರು. ಮಾಜಿ ಅಧ್ಯಕ್ಷ ರಿಯಾಜ್ ಪಳ್ಳಿ ನಿರ್ವಹಿಸಿದ್ದರು.ಸಂಸ್ಥೆಯ ಸದಸ್ಯರಾದ ಆಶಾವಾಸು, ಸುಗಂಧಿ ಶೇಖರ್, ಹೆಲನ್ ಫರ್ನಾಂಡಿಸ್, ಸರೋಜಾ ಅನೂಪ್, ಶೇಖರ್ ಕೆ. ಕೋಟ್ಯಾನ್, ಗಿರೀಶ್ ಗುಡ್ಡೆಯಂಗಡಿ, ಕೋಶಾಧಿಕಾರಿ ಪ್ರೇಮ್ ಮಿನೇಜಸ್, ಭಾಸ್ಕರ್ ಬಂಗೇರ, ವಿಶ್ವನಾಥ್ ಪೂಜಾರಿ, ಸುಂದರ್ ಸುವರ್ಣ, ಲೋಕನಾಥ್ ಬೊಳ್ಜೆ, ಸುಹೇಲ್ ರೆಹಮತ್ತುಲ್ಲಾ ಮೊದಲಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ನಂತರ ಸುಮಾರು 300 ವಿದ್ಯಾರ್ಥಿಗಳಿಗೆ ಸಾಗುವಾನಿ ಗಿಡವನ್ನು ವಿತರಿಸಲಾಯಿತು.