ಸೌರ ಕೃಷಿ ಪಂಪ್‌ಸೆಟ್‌ನಿಂದ ಇಂಧನ ಉಳಿತಾಯ: ಡಾ.ರಾಜಶೇಖರ್ ಬಾರ್ಕೆರ್

| Published : Aug 05 2025, 12:30 AM IST

ಸೌರ ಕೃಷಿ ಪಂಪ್‌ಸೆಟ್‌ನಿಂದ ಇಂಧನ ಉಳಿತಾಯ: ಡಾ.ರಾಜಶೇಖರ್ ಬಾರ್ಕೆರ್
Share this Article
  • FB
  • TW
  • Linkdin
  • Email

ಸಾರಾಂಶ

ಸೌರಶಕ್ತಿ ಆಧಾರಿತ ಕೃಷಿ ಪಂಪ್‍ಸೆಟ್‍ಗಳನ್ನು ಬಳಸುವುದರಿಂದ ಇಂಧನ ಉಳಿತಾಯವಾಗುತ್ತದೆ. ರೈತರು ಕೃಷಿ ಹಾಗೂ ಗೃಹ ಬಳಕೆಗೆ ಬಿಇಇ ಸ್ಟಾರ್ ಲೇಬಲ್‍ವುಳ್ಳ ಪಂಪ್‍ಸೆಟ್ ಬಳಸಬೇಕು. ಇವು ಹೆಚ್ಚಿನ ಇಂಧನ ದಕ್ಷತೆ ಹೊಂದಿದ್ದು ವಿದ್ಯುತ್ ಉಳಿತಾಯಕ್ಕೆ ಸಹಕಾರಿಯಾಗಿವೆ ಎಂದು ಬಬ್ಬೂರು ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಜಶೇಖರ್ ಭಾರ್ಕೆರ್ ಹೇಳಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಸೌರಶಕ್ತಿ ಆಧಾರಿತ ಕೃಷಿ ಪಂಪ್‍ಸೆಟ್‍ಗಳನ್ನು ಬಳಸುವುದರಿಂದ ಇಂಧನ ಉಳಿತಾಯವಾಗುತ್ತದೆ. ರೈತರು ಕೃಷಿ ಹಾಗೂ ಗೃಹ ಬಳಕೆಗೆ ಬಿಇಇ ಸ್ಟಾರ್ ಲೇಬಲ್‍ವುಳ್ಳ ಪಂಪ್‍ಸೆಟ್ ಬಳಸಬೇಕು. ಇವು ಹೆಚ್ಚಿನ ಇಂಧನ ದಕ್ಷತೆ ಹೊಂದಿದ್ದು ವಿದ್ಯುತ್ ಉಳಿತಾಯಕ್ಕೆ ಸಹಕಾರಿಯಾಗಿವೆ ಎಂದು ಬಬ್ಬೂರು ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಜಶೇಖರ್ ಭಾರ್ಕೆರ್ ಹೇಳಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬ್ಯುರೋ ಆಫ್ ಎನರ್ಜಿ ಎಫಿಷಿಯನ್ಸಿ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತದ ಸಹಯೋಗದೊಂದಿಗೆ ತಾಲೂಕಿನ ಬಬ್ಬೂರು ಫಾರಂನಲ್ಲಿ ಕೃಷಿ ಪಂಪ್‍ಸೆಟ್‍ಗಳು ಹಾಗೂ ಜಲ ಸಂರಕ್ಷಣೆ ಕುರಿತು ಹಮ್ಮಿಕೊಳ್ಳಲಾದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿ ಕ್ಷೇತ್ರದಲ್ಲಿ ಬಿಇಇ ಸ್ಟಾರ್ ರೇಟೆನ ಉಳ್ಳ ಪಂಪುಗಳನ್ನು ಬಳಸುವುದರಿಂದ ಅಂದಾಜು ಶೇ.30ರಷ್ಟು ವಿದ್ಯುತ್ ಉಳಿತಾಯ ಸಾಧ್ಯವಿದೆ. ಸರಿಯಾದ ಪಂಪಿಂಗ್ ಸಿಸ್ಟಮ್ ಘಟಕಗಳನ್ನು ಆಯ್ಕೆ ಮಾಡುವ ಮೂಲಕ ವಿದ್ಯುತ್ ನಷ್ಟಗಳನ್ನು ಕಡಿಮೆ ಮಾಡಬಹುದು. ನೀರನ್ನು ಅನಾವಶ್ಯಕವಾಗಿ ಪೋಲು ಮಾಡಬಾರದು. ಏಕೆಂದರೆ ನೀರೆತ್ತಲು ಹಾಗೂ ಸಾಗಿಸಲು ವಿದ್ಯುತ್ ಬೇಕು. ಆದುದರಿಂದ ನೀರನ್ನು ಮಿತವಾಗಿ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಬಳಸಿದರೆ ವಿದ್ಯುತ್ತಿನ ಉಳಿತಾಯ ಸಾಧ್ಯ. ಅಗತ್ಯ ಇಲ್ಲದಿರುವ ಸಮಯದಲ್ಲಿ ಕೃಷಿ ಪಂಪ್ ಸೆಟ್‍ಗಳನ್ನು ಹಾಗೂ ಇತರೆ ವಿದ್ಯುತ್ ಪರಿಕರಗಳನ್ನು ಬಂದ್ ಮಾಡಬೇಕು ಎಂದರು.

ಸೆಲ್ಕೋ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ ಭಗವಾತ್ ಮಾತನಾಡಿ, ಕೃಷಿ ಪಂಪ್‍ಸೆಟ್‍ಗಳಿಗೆ ಪಿಎಂ ಕುಸುಮ್ ಯೋಜನೆಯಡಿ ಸೋಲಾರ್ ವಿದ್ಯುತ್ ಸಂಪರ್ಕ ನೀಡಬಹುದು. ಇದರ ಜತೆಗೆ ಪಿಎಂ ಸೂರ್ಯಘರ್ ಯೋಜನೆಯಡಿ ಮನೆಯಲ್ಲಿಯೂ ಸೌರ ವಿದ್ಯುತ್ ಉತ್ಪಾದನೆ ಮಾಡಬಹುದು. ಮಾರುಕಟ್ಟೆಯಲ್ಲಿ ಸೌರಶಕ್ತಿ ಚಾಲಿತ ಕೃಷಿ ಪಂಪ್‍ಸೆಟ್‍ಗಳು, ಹಿಟ್ಟಿನ ಗಿರಣಿ, ರೊಟ್ಟಿ ತಯಾರಿಸುವ ಯಂತ್ರ, ಮನೆ ಉಪಕರಣಗಳು, ಸೋಲಾರ್ ಬಿಸಿ ನೀರಿನ ಘಟಕ, ವಿವಿಧ ಕೃಷಿ ಯಂತ್ರೋಪಕರಣಗಳು ದೊರಕುತ್ತವೆ ಎಂದರು.

ಜಲ ವಿಜ್ಞಾನಿ ಹಾಗೂ ಮಳೆ ನೀರು ಕೋಯ್ಲು ತಜ್ಞ ಡಾ.ದೇವರಾಜರೆಡ್ಡಿ ತರಬೇತಿಯಲ್ಲಿ ಹಾಜರಿದ್ದ ರೈತರಿಗೆ ಮಳೆನೀರು ಕೊಯ್ಲು, ಬೋರ್‌ವೆಲ್ ಅಂತರ್ಜಲ ಮರುಪೂರಣ, ಮಳೆ ನೀರಿನ ಬಡ್ಜೆಟ್, ನೀರಿನ ಮಿತ ಬಳಕೆ ಮತ್ತು ಜಲ ಸಂರಕ್ಷಣೆ ಕುರಿತು ತರಬೇತಿ ನೀಡಿದರು.

ಬೇಸಾಯ ಶಾಸ್ತ್ರಜ್ಞ ಅಂಜಿನಪ್ಪ, ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ.ಆರ್, ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಎನ್.ಆರ್.ಮಹೇಶ್ವರಪ್ಪ, ಹಿರಿಯೂರು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕಾಂತರಾಜ್, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳಿಯ ನಿರ್ದೇಶಕ ಕೆ ಜಗದೀಶ ಕಂದಿಕೆರೆ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ .ಎo ವಿ, ರೈತ ಮಹಿಳೆ ಪೂರ್ಣಿಮಾ ಬಡಿಗೇರ ಹಲವರು ಹಾಜರಿದ್ದರು.