ಸಾರಾಂಶ
ಕಲಾದಗಿ: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿ ಹಿನ್ನೆಲೆ ಸಾರ್ವಜನಿಕ ಸ್ಥಳದಲ್ಲಿದ್ದ ರಾಜಕೀಯ ಪಕ್ಷಗಳ, ವ್ಯಕ್ತಿಗಳಿಗೆ ಸಂಬಂಧಿಸಿದ ಬ್ಯಾನರ್, ಬಂಟಿಂಗ್ಸ್ ಗಳನ್ನು ತೆರವು ಮಾಡಲಾಯಿತು. ಕಲಾದಗಿ ಗ್ರಾ.ಪಂ ಅಧಿಕಾರಿಗಳು, ಕಂದಾಯ ಇಲಾಖಾ ಅಧಿಕಾರಿಗಳು, ಗೋಡೆ ಬರಹ, ಪ್ರಚಾರ ಕೊರುವ ಪಾಂಪ್ಲೆಟ್ಸ್ ತೆರವುಗೊಳಿಸಿದರು.
ಕಲಾದಗಿ: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿ ಹಿನ್ನೆಲೆ ಸಾರ್ವಜನಿಕ ಸ್ಥಳದಲ್ಲಿದ್ದ ರಾಜಕೀಯ ಪಕ್ಷಗಳ, ವ್ಯಕ್ತಿಗಳಿಗೆ ಸಂಬಂಧಿಸಿದ ಬ್ಯಾನರ್, ಬಂಟಿಂಗ್ಸ್ ಗಳನ್ನು ತೆರವು ಮಾಡಲಾಯಿತು. ಕಲಾದಗಿ ಗ್ರಾ.ಪಂ ಅಧಿಕಾರಿಗಳು, ಕಂದಾಯ ಇಲಾಖಾ ಅಧಿಕಾರಿಗಳು, ಗೋಡೆ ಬರಹ, ಪ್ರಚಾರ ಕೊರುವ ಪಾಂಪ್ಲೆಟ್ಸ್ ತೆರವುಗೊಳಿಸಿದರು. ಬಸ್ ನಿಲ್ದಾಣ ಸೇರಿದಂತೆ 12 ವಾರ್ಡ್‌ಗಳ ಪ್ರಮುಖ ಸಾರ್ವಜನಿಕ ಪ್ರದೇಶದಲ್ಲಿ ತೆರವು ಕಾರ್ಯ ನಡೆಯಿತು. ಈಗಾಗಲೇ ಸಾರ್ವಜನಿಕ ಪ್ರದೇಶದಲ್ಲಿ ಅಂಟಿಸಲಾದ ರಾಜಕೀಯ ಪಕ್ಷಗಳ ಪ್ರಚಾರ ಬ್ಯಾನರ್, ಬಂಟಿಂಗ್ಸ ತೆರವುಗೊಳಿಸಿದ್ದೇವೆ. ಇನ್ನೊಂದು ಬಾರಿ ಸಂಪೂರ್ಣ ಗ್ರಾಮದ ತುಂಬ ಸಂಚರಿಸಲಾಗುವುದು. ಎಲ್ಲಾ ಕಡೆ ಗಮನ ಹರಿಸಿ ಬ್ಯಾನರ್ ತೆರವುಗೊಳಿಸುವ ಕಾರ್ಯ ಮಾಡಲಾಗುವುದು ಎಂದು ಪಿಡಿಒ ಬಿ.ಎಲ್. ಹವಾಲ್ದಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.