ಚಿಕ್ಕಮಗಳೂರುಭಾರತ ಇಂದು ಆರ್ಥಿಕ ಶಕ್ತಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲು ಎಂಜಿನಿಯರ್‌ಗಳ ಕೊಡುಗೆ ಅಪಾರವಾಗಿದೆ ಎಂದು ಆಶಾಕಿರಣ ಅಂಧ ಮಕ್ಕಳ ಶಾಲೆ ಅಧ್ಯಕ್ಷ, ಮಕ್ಕಳ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ಹೇಳಿದರು.
- ಎಐಟಿ ಕಾಲೇಜಿನ ಆದಿಚುಂಚನಗಿರಿ ಪಾಲಿಟೆಕ್ನಿಕ್ ನಿಂದ ನಡೆದ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭಾರತ ಇಂದು ಆರ್ಥಿಕ ಶಕ್ತಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲು ಎಂಜಿನಿಯರ್‌ಗಳ ಕೊಡುಗೆ ಅಪಾರವಾಗಿದೆ ಎಂದು ಆಶಾಕಿರಣ ಅಂಧ ಮಕ್ಕಳ ಶಾಲೆ ಅಧ್ಯಕ್ಷ, ಮಕ್ಕಳ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ಹೇಳಿದರು. ನಗರದ ಎಐಟಿ ಕಾಲೇಜಿನ ಆದಿಚುಂಚನಗಿರಿ ಪಾಲಿಟೆಕ್ನಿಕ್ ನಿಂದ ನಡೆದ ಇನ್ಸ್ಪಿರೋ ೨ಕೆ ೨೬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಂಜಿನಿಯರ್‌ಗಳು ದೇಶಕಟ್ಟುವವರು. ಛಲವಿದ್ದರೆ ಗುರಿಯೆಡೆಗೆ ಸಾಗಬಹುದು, ಅತ್ಯಂತ ಹಿಂದುಳಿದ ವರ್ಗದಿಂದ ಬಂದ ದ್ರೌಪದಿ ಮುರ್ಮು ಇಂದು ರಾಷ್ಟ್ರಪತಿಯಾಗಿದ್ದಾರೆ. ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಪ್ರಧಾನಿಯಾಗಿ ವಿಶ್ವ ಪ್ರಸಿದ್ಧ ನಾಯಕರಾಗಿದ್ದಾರೆ. ಇದಕ್ಕೆ ದೇಶಭಕ್ತಿ, ಛಲವೇ ಪ್ರಮುಖ ಕಾರಣ ಎಂದರು.
ವಿಜ್ಞಾನವಿಲ್ಲದೇ ಇದ್ದರೆ ಜಗತ್ತು ಮಲಗಿರುತ್ತದೆ. ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಡಿಪ್ಲೊಮಾ ಮುಗಿದ ನಂತರ ಎಂಜಿನಿಯರ್‌ಗಳಾಗಲು ಅವಕಾಶವಿದೆ ಎಂದು ತಿಳಿಸಿದರು.ಮೊಬೈಲ್‌ನಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇರುತ್ತದೆ. ಒಳ್ಳೆಯದನ್ನು ಮಾತ್ರ ಹುಡುಕಿ ಆಯ್ಕೆ ಮಾಡಿಕೊಳ್ಳಿ. ಸಮಾಜ ದಿಂದ ಪಡೆದಿದ್ದನ್ನು ಸಮಾಜಕ್ಕೆ ನೀಡುವಂತಾಗಬೇಕು. ದಿಢೀರನೆ ಹಣ ಮಾಡುವ ಆಲೋಚನೆ ಬಿಟ್ಟು ಶ್ರಮ ಮತ್ತು ಶ್ರದ್ಧೆಯಿಂದ ಅಭ್ಯಾಸ ಮುಂದುವರಿಸಬೇಕು ಎಂದರು. ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್ ಮಾತನಾಡಿ, ವಾರ್ಷಿಕೋತ್ಸವ ಕೇವಲ ಸಮಾರಂಭವಷ್ಟೇ ಅಲ್ಲ, ವರ್ಷ ಪೂರ್ತಿ ವಿದ್ಯಾರ್ಥಿಗಳ ಕಲಿಕೆ ನೆನಪಿನ ಜೊತೆಗೆ ಶಿಸ್ತು, ವ್ಯಕ್ತಿತ್ವ ನಿರ್ಮಾಣದ ಅವಲೋಕನದ ವೇದಿಕೆಯಾಗಿರುತ್ತದೆ ಎಂದರು. ಜ್ಞಾನದ ಜೊತೆಗೆ ಶಿಸ್ತು ಅತ್ಯಂತ ಪ್ರಮುಖ. ಡಿಪ್ಲೊಮಾ ಸೇರಿದಂತೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗಣಿತ ಕಠಿಣ ಎನ್ನುತ್ತಾರೆ. ಗಣಿತ ಇಲ್ಲವಾದರೆ ಜೀವನ ಇರುವುದಿಲ್ಲ. ಶ್ರಮ ವಹಿಸಿ ಕಲಿಯಬೇಕು. ಡಿಪ್ಲೊಮಾ ಪೂರೈಸಿದವರು ಸಹ ಈಗ ಕೃತಕ ಬುದ್ಧಿಮತ್ತೆ ಕಲಿಯಬಹುದು. ವಿದ್ಯಾರ್ಥಿಗಳ ಆಲೋಚನಾ ಶಕ್ತಿ ವಿಭಿನ್ನವಾಗಿರಬೇಕು. ಕೌಶಲ್ಯ ಮತ್ತು ಆವಿಷ್ಕಾರದ ಆಸಕ್ತಿ ಹೊಂದಿರಬೇಕು ಎಂದರು.ತಂತ್ರಜ್ಞಾನ ಇಂದು ಬಹಳ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಅದ್ಭುತ ಅನ್ವೇಷಣೆಗಳು ನಡೆಯುತ್ತಿವೆ. ಈ ಕಾರಣಕ್ಕೆ ವಿದ್ಯಾರ್ಥಿ ಗಳು ಹೊಸ ತಂತ್ರಜ್ಞಾನ, ಸೃಜನಶೀಲತೆ ಮೈಗೂಡಿಸಿಕೊಳ್ಳಬೇಕು. ತಂತ್ರಜ್ಞಾನದ ಜೊತೆಗೆ ಸಂಪ್ರದಾಯವೂ ಪ್ರಮುಖವಾಗುತ್ತದೆ. ಎರಡನ್ನೂ ಅಳವಡಿಸಿಕೊಂಡು ಯಶಸ್ಸು ಸಾಧಿಸಬೇಕು ಎಂದರು. ಜ್ಞಾನದ ನದಿ ಯಾವಾಗಲೂ ಹರಿಯುತ್ತಿರುತ್ತದೆ. ಅದನ್ನು ನೀವೆಷ್ಟು ಮೊಗೆದುಕೊಳ್ಳುತ್ತೀರಿ ಎನ್ನುವುದು ನಿಮ್ಮ ಸಾಮರ್ಥ್ಯ ವನ್ನು ತೋರಿಸುತ್ತದೆ. ಜ್ಞಾನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರಿಶ್ರಮ ವಹಿಸಬೇಕು ಎಂದರು. ಎಐಟಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಕೆ.ಎಂ.ಸಚಿನ್ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕಿ ವಿ.ಕೆ. ಮಧುರ ನಿರೂಪಿಸಿ ದರು. ಉಪನ್ಯಾಸಕ ಸಾಯಿ ನಂದನ್ ಸ್ವಾಗತಿಸಿದರು. ಪಾಲಿಟೆಕ್ನಿಕ್‌ನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.