ಕಟ್ಟುನಿಟ್ಟಿನ ಮಾದರಿ ನೀತಿ ಸಂಹಿತೆ ಜಾರಿಗೆ ನಿಗಾವಹಿಸಿ-ಜಿಲ್ಲಾಧಿಕಾರಿ

| Published : Mar 18 2024, 01:48 AM IST

ಕಟ್ಟುನಿಟ್ಟಿನ ಮಾದರಿ ನೀತಿ ಸಂಹಿತೆ ಜಾರಿಗೆ ನಿಗಾವಹಿಸಿ-ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಶನಿವಾರ ಸಂಜೆಯಿಂದಲೇ ಜಾರಿಯಾಗಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆ ನಿಗಾಕ್ಕೆ ನಿಯೋಜಿತಗೊಂಡ ವಿವಿಧ ತಂಡಗಳು ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ನಿಗಾವಹಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಸಲಹೆ ನೀಡಿದರು.

ಹಾವೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಶನಿವಾರ ಸಂಜೆಯಿಂದಲೇ ಜಾರಿಯಾಗಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆ ನಿಗಾಕ್ಕೆ ನಿಯೋಜಿತಗೊಂಡ ವಿವಿಧ ತಂಡಗಳು ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ನಿಗಾವಹಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಗೆ ನಿಯೋಜಿತಗೊಂಡಿರುವ ವಿಡಿಯೋ ಸರ್ವಲೆನ್ಸ್ ತಂಡ, ವಿಡಿಯೋ ವಿವಿಂಗ್ ತಂಡ, ಫ್ಲೈಯಿಂಗ್ ಸ್ಕ್ವಾಡ್, ಸೆಕ್ಟರ್ ಆಫೀಸರ್, ಚುನಾವಣಾ ವೆಚ್ಚ ನಿಗಾ ಸಮಿತಿಗೆ ನಿಯೋಜಿತ ಅಧಿಕಾರಿ ಸಿಬ್ಬಂದಿಗಳಿಗೆ ತಮ್ಮ ಕರ್ತವ್ಯ ಹಾಗೂ ಚುನಾವಣಾ ಮಹತ್ವ ಕುರಿತಂತೆ ವಿವರಿಸಿದ ಅವರು, ಚುನಾವಣಾ ಕಾರ್ಯವನ್ನು ತಲೆಯ ಭಾರವಾಗಿ ತೆಗೆದುಕೊಂಡು ಒತ್ತಕ್ಕೆ ಒಳಗಾಗಬೇಡಿ. ಖುಷಿಯಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿಯೊಂದಿಗೆ ಪಾರದರ್ಶಕ ಚುನಾವಣೆ ನಡೆಸಲು ಒಂದು ತಂಡವಾಗಿ ಎಲ್ಲರೂ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.೨೧ ಚೆಕ್‌ಪೋಸ್ಟ್: ಜಿಲ್ಲೆಯಲ್ಲಿ ೨೧ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಚೆಕ್ ಪೋಸ್ಟ್‌ಗಳಲ್ಲಿ ಎಲ್ಲ ಮೂಲಸೌಕರ್ಯ ಹಾಗೂ ಅಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಹ್ಯಾಂಡಿಕ್ಯಾಮ್, ರಿಫ್ಲೆಕ್ಟೆಡ್ ಜಾಕೇಟ್, ಟಾರ್ಚ್ ನೀಡಲಾಗುವುದು. ಚೆಕ್ ಪೋಸ್ಟ್‌ಗ ಳಲ್ಲಿ ಸರ್ಕಾರಿ ವಾಹನ ಹಾಗೂ ಆಂಬ್ಯುಲೆನ್ಸ್ ಒಳಗೊಂಡಂತೆ ಯಾವುದೇ ವಾಹನಕ್ಕೂ ರಿಯಾಯ್ತಿ ನೀಡಬೇಡಿ. ಎಲ್ಲ ವಾಹನಗಳನ್ನು ತಪಾಸಣೆ ನಡೆಸಿ, ತಪಾಸಣೆ ಆರಂಭಿಸುವ ಮುನ್ನ ವಿಡಿಯೋ ಚಿತ್ರೀಕರಣಮಾಡಿ. ತಪಾಸಣೆ ವೇಳೆ ಪ್ರಮಾಣಿಕೃತ ಮಾದರಿ ವ್ಯವಸ್ಥೆಯ ನಿಯಮದಂತೆ ಕಾರ್ಯನಿರ್ವಹಿಸಿ, ಸೌರ್ಜನ್ಯ ಹಾಗೂ ಸಹನೆಯಿಂದ ವರ್ತಿಸಿ ಎಂದು ಸಲಹೆ ನೀಡಿದರು.

ವಿಎಸ್‌ಟಿ ಹಾಗೂ ಎಫ್‌ಎಸ್‌ಟಿ ತಂಡಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಕರೆಗಳು ಬಂದಾಗ ಸ್ಥಳಕ್ಕೆ ಭೇಟಿ ನೀಡಬೇಕು. ಕಾರ್ಯಕ್ರಮಗಳು ನಡೆಯುವಾಗ ಪರಸ್ಪರ ಮಾತನಾಡಿಕೊಂಡು ಕಾರ್ಯಕ್ರಮ ಒಳ ಹಾಗೂ ಹೊರ ಆವರಣ, ಭಾಷಣಗಳ ಚಿತ್ರೀಕರಣ ಸೇರಿದಂತೆ ಅಚ್ಚುಕಟ್ಟಾಗಿ ಮಾಡಬೇಕು. ಇದರಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ವೆಚ್ಚ ಅಂದಾಜಿಗೆ ಪೂರಕವಾಗಿರುತ್ತದೆ. ಯಾವುದೇ ಗೊಂದಲ ಆಗಬಾರದು. ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ನಿಮ್ಮ ಸೆಕ್ಟರ್ ಅಧಿಕಾರಿಗಳೊಂದಿಗೆ ಹಾಗೂ ಆರ್‌ಒಗಳೊಂದಿಗೆ ಸರಿಯಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಿಗೆ ದಂಡಾಧಿಕಾರಿಗಳ ಅಧಿಕಾರ ನೀಡಲಾಗಿದೆ. ನಿಮ್ಮ ಪ್ರತಿ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತದೆ. ನಿಮ್ಮ ವ್ಯಾಪ್ತಿಯಲ್ಲಿ ಸೂಕ್ಷ್ಮ ನಿಗಾವಹಿಸಿ ಚುನಾವಣಾ ಅಕ್ರಮಗಳ ಬಗ್ಗೆ ಪತ್ತೆಮಾಡಿ ನಿಯಮಾಸಾನುರ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಚುನಾವಣಾ ಅಕ್ರಮಗಳ ಪತ್ತೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ತೊಡಕುಗಳಿದ್ದರೆ, ಹೆಚ್ಚಿನ ನೆರವು ಬೇಕಾಗಿದ್ದರೆ ಕಾನೂನಾತ್ಮಕ ಸಲಹೆಗಳು ಬೇಕಾಗಿದ್ದರೆ ನನ್ನನ್ನು ನೇರವಾಗಿ ಸಂಪರ್ಕಿಸಿ ಅಥವಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಸಂಪರ್ಕಿಸಿ ಎಂದು ಸೂಚನೆ ನೀಡಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಮಾತನಾಡಿ, ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಚುನಾವಣಾ ಆಯೋಗದ ಮಾರ್ಗ ಸೂಚಿಯಂತೆ ೨೪ ತಾಸು, ೪೮ ತಾಸು ಹಾಗೂ ೭೨ ತಾಸಿನೊಳಗಾಗಿ ಎಲ್ಲ ತರದ ರಾಜಕೀಯ ಬ್ಯಾನರ್ಸ್‌, ಕಟೌಟ್ ಒಳಗೊಂಡಂತೆ ಎಲ್ಲ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಬೇಕು. ವಿ.ಎಸ್.ಟಿ., ಎಸ್.ಎಸ್.ಟಿ. ಹಾಗೂ ಎಫ್‌ಎಸ್‌ಟಿ ತಂಡಗಳು ನಿಗದಿತ ನಮೂನೆಯಲ್ಲಿ ನಿಗದಿಪಡಿಸಿದ ಅವಧಿಯೊಳಗೆ ವರದಿಮಾಡುವಂತೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಮಾತನಾಡಿ, ಯಾವುದೇ ಸಮಸ್ಯೆಗಳು ಇದ್ದಲ್ಲಿ ಪೊಲೀಸ್ ನೆರವು ಅಗತ್ಯವಿದ್ದರೆ ನನಗೆ ದೂರವಾಣಿ ಕರೆಮಾಡಿ. ತಕ್ಷಣವೇ ನೆರವಿಗೆ ಧಾವಿಸಲಾಗುವುದು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ಈ ಕೂಡಲೇ ಚುನಾವಣಾ ಕಾರ್ಯದಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ತೊಡಗಬೇಕು. ಚುನಾವಣಾ ಕರ್ತವ್ಯದಲ್ಲಿ ಯಾರೂ ನಿರ್ಲಕ್ಷ್ಯಮಾಡಬೇಡಿ, ನೋಟಿಸ್ ಪಡೆಯದೇ ಉತ್ತಮ ರೀತಿಯಲ್ಲಿ ಕೆಲಸಮಾಡಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಎಸ್.ಜಿ.ಮುಳ್ಳಳ್ಳಿ, ಉಪ ವಿಭಾಗಾಧಿಕಾರಿಗಳ ಚೆನ್ನಪ್ಪ, ಮಹ್ಮದ್ ಖಿಜರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ ಹೊಸಗೌಡ್ರ, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ನಾಗರಾಜ ಎಲ್., ಎಲ್ಲ ತಹಸೀಲ್ದಾರ್‌ಗಳು ಇದ್ದರು.