ಸಾರಾಂಶ
ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಲು ಮನವಿ.
ಕಂಪ್ಲಿ: ತಾಲೂಕಿನ ಸುಗ್ಗೇನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಜರುಗಿತು.
ಸುಗ್ಗೇನಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ವ್ಯವಸ್ಥೆ ಇಲ್ಲ. ಶಾಲೆಯ ವಾತಾವರಣವನ್ನು ಕಿಡಿಗೇಡಿಗಳು ಹಾಳು ಮಾಡುತ್ತಿದ್ದಾರೆ. ಶಾಲೆಯಲ್ಲಿ ಪಾಠ ಪ್ರವಚನಗಳಿಗೆ ಸಮರ್ಪಕ ಕೊಠಡಿಗಳ ವ್ಯವಸ್ಥೆ ಹಾಗೂ ಕಂಪ್ಯೂಟರ್ ವ್ಯವಸ್ಥೆಗೆ ಕಲ್ಪಿಸಬೇಕು ಎಂದು ಶಾಲೆಯ ವಿದ್ಯಾರ್ಥಿಗಳಾದ ಸಂತೋಷ್, ಜೀವನ್, ರಾಧಿಕಾ, ಮಮ್ತಾಜ್ ಒತ್ತಾಯಿಸಿದರು.ಪಿಡಿಒ ಕೆ. ಹನುಮಂತಪ್ಪ ಮಾತನಾಡಿ, ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಲು ತಿಳಿಸಿದರು.
ಬಳಿಕ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯರಾದ ಎಚ್.ಸಿ. ರಾಘವೇಂದ್ರ ಮಾತನಾಡಿ, ಮಕ್ಕಳ ಅಭಿವೃದ್ಧಿಯಾದರೆ ಪಂಚಾಯಿತಿಗಳ ಅಭಿವೃದ್ಧಿ ಸಾಧ್ಯ. ಸುಸ್ಥಿರ ಅಭಿವೃದ್ಧಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಕೇಂದ್ರೀಕೃತ ಅನೇಕ ವಿಚಾರಗಳನ್ನು ಗಮನಿಸಬಹುದು. ಗ್ರಾಮ ಪಂಚಾಯಿತಿಗಳು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮಕ್ಕಳಸ್ನೇಹಿ ಪಂಚಾಯಿತಿಗಳಾಗಬೇಕು ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎ.ಕೆ. ಲೋಕೇಶಪ್ಪ, ಕಾರ್ಯದರ್ಶಿ ಶಿವಪ್ಪ, ಸದಸ್ಯರಾದ ಮಂಜುನಾಥ್, ಸುಭಾನ್ ಸಾಬ್, ಎಂ. ತಿಪ್ಪಯ್ಯ, ಸಿಆರ್‌ಪಿ ಭುವನೇಶ್ವರ್, ಮುಖ್ಯ ಶಿಕ್ಷಕರಾದ ಡಿ. ಸುಲೋಚನಾ, ಗೋಣಿಬಸಪ್ಪ, ಶಹಿರಾಬಾನು, ಲಿಂಗನಾಯಕ್, ಶ್ವೇತಾ, ಮರಿ ಗಿಂಚಪ್ಪ, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆ, ಸಿಬ್ಬಂದಿ ಆಶಾ ಕಾರ್ಯಕರ್ತರು ಸೇರಿದಂತೆ ವಿದ್ಯಾರ್ಥಿಗಳಿದ್ದರು.