ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರೇಣುಕಾ ಯಲ್ಲಮ್ಮ ಬಳಗದ ಸಮುದಾಯದವರು ಜಾತಿ ಸಮೀಕ್ಷೆಯಲ್ಲಿ ಹೊಲೆಯ ಎಂದು ಮಾತ್ರ ನಮೋದಿಸಬೇಕು ಎಂದು ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮನವಿ ಮಾಡಿದರು.ಪಟ್ಟಣದ ಎಸ್‌ವಿಆರ್ ಕಲ್ಯಾಣ ಮಂಟಪದಲ್ಲಿ ರೇಣುಕಾ ಯಲ್ಲಮ್ಮ ಬಳಗದ ಮುಖಂಡರ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗೆ ಸಂಬಂಧಸಿದಂತೆ ಮೇ 5ರಿಂದ ೧೫ರ ವರೆಗೆ ಹಮ್ಮಿಕೊಂಡಿದೆ ಎಂದರು.ಹೊಲೆಯ ಎಂದೇ ನಮೂದಿಸಿ
ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ದತ್ತಾಂಶ ಸಂಗ್ರಹದ ವೇಳೆ ಮನೆಮನೆಗೆ ಬರುವ ಅಧಿಕಾರಿಗಳ ಬಳಿ ಜಾತಿ ಕಾಲಂನಲ್ಲಿ ರೇಣುಕಾ ಯಲ್ಲಮ್ಮ ಸಮುದಾಯದವರು ಹೊಲೆಯ ಎಂದು ಮಾತ್ರ ನಮೊದು ಮಾಡಬೇಕು. ರಾಜ್ಯದ ಪರಿಶಿಷ್ಟಜಾತಿಗಳಲ್ಲಿ ಎರಡು ಬಗೆ ಇದೆ ರೈಟು ಮತ್ತು ಲೆಫ್ಟ್ ಎಂದಿದಿದೆ, ರೈಟು, ಲೈಫ್ಟ್‌ನಲ್ಲಿ ಛಲವಾದಿ, ಪರಿಯರು ಮಾದಿಗರು ಎಂದಿದೆ. ಜಿಲ್ಲೆಯಲ್ಲಿ ಎಲ್ಲ ಪರಿಶಿಷ್ಟ ಜಾತಿಗಳು ಹೊಲೆಯ ಎಂದು ಜಾತಿ ಸಮೀಕ್ಷೆಯಲ್ಲಿ ಬರೆಸಬೇಕು ಎಂದರು.ಈ ಜಾತಿ ಸಮೀಕ್ಷೆಯಲ್ಲಿ ಏನೆಂದು ಬರೆಸಬೇಕೆಂದು ನಮ್ಮಲ್ಲಿ ಸ್ವಲ್ಪ ಗೊಂದಲವಿತ್ತು, ಕೆಲವರು ಆದಿಕರ್ನಾಟಕ, ಪರಿಯ ಎಂದಿತ್ತು ಅದನ್ನೇ ಬರೆಸಿದರೆ ಹೇಗೆ ಎಂದು ಅಭಿಪ್ರಾಯಪಟ್ಟರು, ನಾವು ಹುಟ್ಟಿನಿಂದ ಹೊಲೆಯರೇ ಆಗಿದ್ದು ಜಾತಿ ಸಮೀಕ್ಷೆಯಲ್ಲಿಯೂ ಹೊಲೆಯ ಎಂದೇ ಬರೆಸಿದರೆ ಉತ್ತಮವೆಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿದೆ, ಜಿಲ್ಲೆಯಲ್ಲಿರುವ ಎಲ್ಲಾ ರೇಣುಕಾ ಯಲ್ಲಮ್ಮ ಬಳಗದವರು ಆದಿಕರ್ನಾಟಕದ ಜೊತೆ ಹೊಲೆಯ ಎಂದು ಬರೆಸಬೇಕು ಎಂದರು.
ಉಪಜಾತಿಗಳಿಂದಾಗಿ ಹಿನ್ನಡೆಈ ಹಿಂದೆ ಇದ್ದವರು ಪರಿಯ ಎಂದಿದ್ದರೆ ಅದನ್ನೇ ಮುಂದುವರೆಸಲಿ, ರಾಜ್ಯದಲ್ಲಿ ಹೊಲೆಯ ಸಮುದಾಯ ಬಹುಸಂಖ್ಯಾದಲ್ಲಿದ್ದರೂ ಉಪ ಜಾತಿಗಳಿಂದ ಹಿಂದುಳಿಯುವಂತಾಗಿದೆ, ಮತ್ತೆ ಹೊಲೆಯ ಸಮುದಾಯ ಸಮಾಜದ ಮುಂಚೂಣಿಗೆ ಬರಲು ಈ ಜಾತಿ ಸಮೀಕ್ಷೆ ಪೂರಕವಾಗಿದೆ ಆದ್ದರಿಂದ ಜಿಲ್ಲೆಯ ಎಲ್ಲರೂ ಗೊಂದಲಗಳಿಲ್ಲದೆ ಒಗ್ಗಟ್ಟಾಗಿ ಒಂದಾಗಿ ಹೊಲೆಯ ಎಂದು ಬರೆಸಿ ಎಂದು ಕರೆ ನೀಡಿದರು.
ಮೀಸಲಾತಿಗೆ ಅನುಕೂಲಜಿಪಂ ಮಾಜಿ ಸದಸ್ಯ ರಾಮಚಂದ್ರ ಮಾತನಾಡಿ, ಸಮಾಜದ ಬೆಳವಣಿಗೆ ಹಿತದೃಷ್ಟಿಯಿಂದ ಹಾಗೂ ಸರ್ಕಾರದ ಮೀಸಲಾತಿ ಪಡೆಯಲು ಸರ್ಕಾರ ಆರಂಭಿಸಿರುವ ಜಾತಿ ಸಮೀಕ್ಷೆಯಲ್ಲಿ ಆದಿ ಕರ್ನಾಟಕ ಉಪ ಜಾತಿ ಕಾಲಂನಲ್ಲಿ ಹೊಲೆಯ ಎಂದು ಬರೆಸಿ, ಗ್ರಾಮಗಳಲ್ಲಿ ಅರಿವಿಲ್ಲದವರು ಇತರೆ ಸಮಾಜದ ಮುಖಂಡರಲ್ಲಿ ಚರ್ಚಿಸಿ ಗೊಂದಲವಿಲ್ಲದೆ ಬರೆಸಬೇಕೆಂದು ಮನವಿ ಮಾಡಿದರು.ಈ ವೇಳೆ ಸಮಾಜದ ಮುಖಂಡರಾದ ಬಿ.ವಿ.ಮಹೇಶ್, ಜಯದೇವ್,ಪಿಚ್ಚಹಳ್ಳಿ ಗೋವಿಂದರಾಜು, ಕಾರಹಳ್ಳಿ ಸೂಲಿಕುಂಟೆ ಆನಂದ್, ರಮೇಶ್, ಹುಣಸನಹಳ್ಳಿ ವೆಂಕಟೇಶ್, ಎಸ್.ನಾರಾಯಣ್, ಕಾರಹಳ್ಳಿ ಪ್ರತಾಪ್, ಅ.ನಾ.ಹರೀಶ್, ಲಕ್ಷ್ಮೀನಾರಾಯಣಪ್ರಸಾದ್, ಯಲ್ಲಪ್ಪ, ಟ್ರೀಸ್ ನಾರಾಯಣಸ್ವಾಮಿ ಇತರರು ಇದ್ದರು.