ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಉದ್ಯಮಶೀಲತಾಭಿವೃದ್ದಿ ತರಬೇತಿ ನೀಡುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರು ಹೇಳಿದರು.ಮಂಗಳವಾರ ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರ ಟ್ಯಾಂಕ್ ಬಂಡ್ ರಸ್ತೆ ಸಾರ್ವಜನಿಕ ಉದ್ಯಾನವನ್ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕೌಶಲ್ಯಾಭಿವೃದ್ಧಿ, ಕೇಂದ್ರ (ಸಿಡಾಕ್) ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಉದ್ಯೋಗ ಅವಿಷ್ಕಾರ ಯೋಜನೆ ಅಡಿಯಲ್ಲಿ ಕಂಪ್ಯೂಟರ್ ಹಾರ್ಡವೇರ್ ಅನದ ನೆಟವರ್ಕಿಂಗ್ ಹಾಗೂ ಬ್ಯೂಟಿ ಪಾರ್ಲರ್ ಮ್ಯಾನೇಜಮೆಂಟ್ ಬಗ್ಗೆ ೩೦ ದಿನಗಳ ವಿಷಯಾಧಾರಿತ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮವನ್ನು ಉದ್ಪಾಟಿಸಿ ಕಲಿಕಾ ಸಾಮಾಗ್ರಿಗಳ ಬಿಡಗಡೆ ಹಾಗೂ ಶಿಬಿರಾರ್ಥಿಗಳಿಗೆ ವಿತರಣೆ ಮಾಡಿ ಮಾತನಾಡಿದರು.
ಸ್ವ-ಉದ್ಯೋಗ/ಉದ್ಯೊಮ ಸ್ಪಾಪಿಸಲು ಮುಂದೆ ಬರುವ ಹಾಗೂ ಬಯಸುವ ಆಸಕ್ತರಿಗೆ ಬೆಂಬಲದ ಸಹಾಯ ಹಸ್ತ ನೀಡುವ ಉದ್ದೇಶ ಕೆ ಕೆ ಆರ್ ಡಿ ಬಿ ಹಾಗೂ ಸಿಡಾಕ್ ಯೋಜನೆ ರೂಪಿಸಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಮಕ್ಕಳಿಗೆ ಈ ಯೋಜನೆ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಬಿ.ಎ, ಬಿ.ಕಾಂ ಮತ್ತು ಬಿ.ಎಸ್.ಸಿ ಕಷ್ಟಪಟ್ಟು ಕಲಿಸಿ ಉತ್ತಮವಾದ ಬದುಕನ್ನು ಕಟ್ಟಿಕೋಳ್ಳಲ್ಲಿ ಎಂದು ತಂದೆ-ತಾಯಿ ಆಸೆ ಪಡುತ್ತಾರೆ. ಅವರ ಆಸೆಗೆ ಪೂರಕವಾಗಿ ನಾವು ಕೆಲಸ ಮಾಡುತ್ತೇವೆ. ಅದನ್ನು ಯುವಕರು ಶ್ರದ್ದೆಯಿಂದ ಕಲಿಯಬೇಕು ಎಂದು ಕರೆ ನೀಡಿದರು.ಅಕ್ಷರ ಆವಿಷ್ಕಾರ ಯೋಜನೆಯಡಿ ವಿವಿಧ ತರಬೇತಿ ನೀಡಿ ಯುವಕರನ್ನು ಸ್ವಯಂ ಉದ್ಯೋಗಿಗಳಾಗಿ ಮಾಡಲಾಗುವುದು. ಈಗಾಗಲೇ, ರಾಜ್ಯ ಯುವನಿಧಿ ಯೋಜನೆ ಮೂಲಕ ಒಟ್ಟು ೩೮ ಕೋಟಿ ೫೪ ಲಕ್ಷ ಬಿಡುಗಡೆ ಮಾಡಿದೆ. ಪದವಿ ನಿರುದ್ಯೋಗಿ ಯುವಕರಿಗೆ 3000 ಸಾವಿರ ಹಾಗೂ ಡಿಪ್ಲೊಮಾ ಪದವಿ ನಿರುದ್ಯೋಗಿ ಯುವಕರಿಗೆ 1500 ರು. ಗಳನ್ನು ನೀಡಲಾಗುತ್ತಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದರು.
. ಉದ್ಯಮಶೀಲತೆ ಹುಟ್ಟಿನಿಂದ ಮಾತ್ರವಲ್ಲ, ಶಿಕ್ಷಣ-ತರಬೇತಿ-ಬೆಂಬಲಸೇವೆ ಮೂಲಕ ಉದ್ಯಮಶೀಲರನ್ನು ಸೃಷ್ಠಿಸಹುದು ಎನ್ನುವ ತತ್ವದ ಮೇಲೆ ಸೂಕ್ತ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಶಿಸ್ತುಬದ್ಧ ಉದ್ಯಮಶೀಲತಾ ತರಬೇತಿ ಹಾಗೂ ಬೆಂಬಲ ಸೇವೆ ನೀಡಿದ್ದಲ್ಲಿ ಉದ್ಯಮಶೀಲ (ಉದ್ಯೋಗದಾತ)ರನ್ನು ಸೃಷ್ಠಿಸಬಹುದು ಎಂದರು.ಅತಿಥಿಗಳಾಗಿ ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು ಅವರು ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ ಸಿಡಾಕ್ ಕಛೇರಿ ಇದೆ ಆದರೆ ಕೇಂದ್ರ ಕಛೇರಿ ಇರುವುದು ಧಾರವಾಡದಲ್ಲಿ ಪ್ರಸ್ತುತದಲ್ಲಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಕುಳಿತ ಯುವಕ/ಯುವತಿಯವರು ಈ ಯೋಜನೆ ಅಡಿಯಲ್ಲಿ ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಳ್ಳಲು ನಿಮಗೆ ಆಧಾರ ಸ್ತಂಭವಾಗಿ ಸಿಡಾಕ್ ನಿಲ್ಲುತ್ತದೆ ಎಂದರು.
ವಿದ್ಯಾವಂತರಿಗಾಗಿ ೩೫ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಅದರಲ್ಲಿ ಪ್ರತಿ ಜಿಲ್ಲೆಯಲ್ಲಿ ಐದು ಕಾರ್ಯಕ್ರಮ ಹಾಗೂ ಐದು ಬ್ಯಾಚ್ ಮಾಡಲಾಗಿದೆ. ತರಬೇತಿ ಹಮ್ಮಿಕೊಂಡ ತಾಲೂಕುಗಳು ಕಲಬುರಗಿ, ಆಳಂದ, ಜೇವರ್ಗಿ, ಯಡ್ರಾಮಿ ಮತ್ತು ಸೇಡಂ ಹಾಗೂ ತರಬೇತಿ ಕಾರ್ಯಕ್ರಮಗಳು ಕಂಪ್ಯೂಟರ್ ಹಾರ್ಡ್ವೇರ್ - ನೆಟ್ವರ್ಕಿಂಗ್, ಮೋಬೈಲ್ ಫೋನ್ಸ್ ರಿಪೇರಿ ಮತ್ತು ಸರ್ವೀಸಿಂಗ್, ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್(ಮಹಿಳೆಯರಿಗೆ ಮಾತ್ರ), ಎಲೆಕ್ಟ್ರಿಕಲ್ ಹೋಮ್ ಅಪ್ಲೈಯನ್ಸ್ ರಿಪೇರಿ, ಸರ್ವಿಸಿಂಗ್ ಮತ್ತು ಫ್ಯಾಷನ್ ಡಿಸೈನಿಂಗ್ (ಮಹಿಳೆಯರಿಗೆ ಮಾತ್ರ) ಈ ಯೋಜನೆ ಎಲ್ಲರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.ಧಾರವಾಡದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ನಿರ್ದೇಶಕ ಬಿ.ಎಂ. ಗೋಟೂರ, ಮಹಾನಂದಾ, ಸಿಡಾಕ್ ಸಂಪನ್ಮೂಲ ವ್ಯಕ್ತಿ ಸೈಯದ್ ಆಷ್ಫಕ್ ಅಹ್ಮದ್ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))