ಅನ್ನದಾನೇಶ್ವರ ಮಠದ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದು

| Published : Nov 22 2024, 01:21 AM IST

ಸಾರಾಂಶ

ಗ್ರಾಮದ ಹಾಳಕೇರಿ ಶ್ರೀ ಅನ್ನದಾನೇಶ್ವರ ಶಾಖಾ ಮಠದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿದ್ದನ್ನು ತೆಗೆದು ಹಾಕುವಂತೆ ಸ್ಥಳೀಯ ವೀರಶೈವ ಲಿಂಗಾಯತ ಸಮುದಾಯ ಒತ್ತಾಯಿಸಿದೆ.

ವಕ್ಫ್‌ ಆಸ್ತಿ ತೆಗೆದು ಹಾಕಲು ಭಕ್ತರ ಆಗ್ರಹ, ಹೋರಾಟದ ಎಚ್ಚರಿಕೆಕನ್ನಡಪ್ರಭ ವಾರ್ತೆ ಹನುಮಸಾಗರ

ಗ್ರಾಮದ ಹಾಳಕೇರಿ ಶ್ರೀ ಅನ್ನದಾನೇಶ್ವರ ಶಾಖಾ ಮಠದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿದ್ದನ್ನು ತೆಗೆದು ಹಾಕುವಂತೆ ಸ್ಥಳೀಯ ವೀರಶೈವ ಲಿಂಗಾಯತ ಸಮುದಾಯ ಒತ್ತಾಯಿಸಿದೆ.

ಗ್ರಾಮದ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಗುರುವಾರ ಪ್ರಮುಖರು ಸಭೆ ನಡೆಸಿದರು.

ಹಿಂದೂ-ಮುಸ್ಲಿಂ ಧರ್ಮದವರು ಭಾವೈಕ್ಯತೆಯಿಂದ ನಡೆದುಕೊಳ್ಳುತ್ತೇವೆ. ವಕ್ಫ್ ಅದಕ್ಕೆ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿದೆ. ಅನ್ನದಾನೇಶ್ವರ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಠದಲ್ಲಿ ಸಾವಿರಾರು ವರ್ಷಗಳಿಂದ ಶಿಕ್ಷಣ ಹಾಗೂ ದಾಸೋಹ ನಡೆಯುತ್ತಿದೆ. ಇಲ್ಲಿಯ ಸರ್ವೆ ನಂಬರ್ 17ರ ಆಸ್ತಿಯಲ್ಲಿ ವಕ್ಫ್ ಹೆಸರು ಸೇರಿದೆ. ಸಾರ್ವಜನಿಕರ ಮನೆಗಳಿದ್ದು, 35 ಗುಂಟೆಯಲ್ಲಿ ಅನ್ನದಾನೇಶ್ವರ ಮಠ ಮತ್ತು ಶಾಲೆ ಇದೆ. 18 ಗುಂಟೆ ದರ್ಗಾ ಹಾಗೂ ಕಬರಸ್ಥಾನಕ್ಕೆ ಸೇರಿದೆ ಎಂದು ನಮೂದಾಗಿದೆ. ಆದರೆ ಜನವರಿ 29, 2021ರಿಂದ ಸರ್ವೆ ನಂಬರ್ 17ರ ಎಲ್ಲಾ ಆಸ್ತಿಯು ವಕ್ಫ್ ಬೋರ್ಡ್‌ಗೆ ಸೇರಿದೆ ಎಂದು ಪಹಣಿಯಲ್ಲಿ ಬರುತ್ತಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರನ್ನು ತೆಗೆದು ಹಾಕಬೇಕು. ಮಠದ ಆಸ್ತಿಗೆ ಪ್ರತ್ಯೇಕ ಪಹಣಿ ಇದೆ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ನಾವು ಉಗ್ರವಾದ ಹೋರಾಟ ನಡೆಯಲಿದೆ ಎಂದು ಮುಖಂಡರು ಒತ್ತಾಯಿಸಿದರು.

ವೀರಶೈವ ಪಂಚಮಸಾಲಿ ಮುಖಂಡರಾದ ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಬಸವರಾಜ ಹಳ್ಳೂರ, ಮಹಾಂತೇಶ ಅಗಸಿಮುಂದಿನ, ವಿಶ್ವನಾಥ ಕನ್ನೂರ, ಮಲ್ಲಯ್ಯ ಕೋಮಾರಿ, ಸಿದ್ಧಯ್ಯ ಬಾಳಿಹಳ್ಳಿಮಠ, ಮಹಾಂತಯ್ಯ ಕೊಮಾರಿ, ಬಸವರಾಜ ಹಳ್ಳೂರ, ಸಂಗಯ್ಯ ವಸ್ತ್ರದ, ಶ್ರೀಶೈಲ ಬಾಟಗಿ, ಅಂದಾನಯ್ಯ ಸೊಪ್ಪಲ ಮೊಚಪ್ಪ, ಅಂದಾನಯ್ಯ ಸೊಪ್ಪಪ್ಪ ಚಿನಿವಾಲರ, ಬಸವರಾಜ ಬಾಚಲ, ರಾಚಪ್ಪ ಚಿನಿವಾಲರ, ಸ್ಥಾವರಮಠ, ಚಂದಪ್ಪ ಬಳೂಟಗಿ, ಶರಣಪ್ಪ ಹುಣಸಿಹಾಳ, ಈರಣ್ಣ ಹುನಗುಂಡಿ, ಉಮೇಶ ಬಾಚಲಾಪೂರ, ಶೇಕಪ್ಪ ಸಜ್ಜನ, ಶಿವನಗೌಡ್ರ ಪಾಟೀಲ, ಚೋಳನಗೌಡ್ರ ಸಿಂಹಾಸನ, ವಿದ್ಯಾಧರ ಸೊಪ್ಪಿಮಠ, ಯಮನೂರ ಮಡಿವಾಳರ ಇತರರಿದ್ದರು.