ಸಾರಾಂಶ
ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಿನ್ನಿಮೂಲ್ಕಿಯ ಅಗ್ನಿಶಾಮಕ ದಳ ಕಚೇರಿ ಆವರಣದಲ್ಲಿ ವಿವಿಧ ಬಗೆಯ ಫಲಪುಷ್ಪ ಸಸ್ಯಗಳನ್ನು ನೆಡಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಿನ್ನಿಮೂಲ್ಕಿಯ ಅಗ್ನಿಶಾಮಕ ದಳ ಕಚೇರಿ ಆವರಣದಲ್ಲಿ ವಿವಿಧ ಬಗೆಯ ಫಲಪುಷ್ಪ ಸಸ್ಯಗಳನ್ನು ನೆಡಲಾಯಿತು.ಮುಖ್ಯ ಅತಿಥಿಯಾಗಿ ಯೋಗ ಮಾಸ್ಟರ್ ದಯಾನಂದ ಕೆ. ಶೆಟ್ಟಿ ಮಾತನಾಡಿ, ಈಗ ನಾವು ಪರಿಸರವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊರಬೇಕಾಗಿದೆ. ಇಲ್ಲವಾದಲ್ಲಿ ನಮ್ಮ ಮುಂದಿನ ಜನಾಂಗ ನಮ್ಮನ್ನು ಕ್ಷಮಿಸಲಾರದು. ಪ್ರಪಂಚವನ್ನು ಬದಲಾಯಿಸುವ ಮೊದಲು ನಾವು ಬದಲಾವಣೆಗೆ ನಾಂದಿಯಾಗಬೇಕು. ನಾನು ಸಾಧ್ಯವಾದಷ್ಟು ಪರಿಸರಕ್ಕೆ ಹಾನಿಯಾಗುವ ಕೆಲಸವನ್ನು ಮಾಡುವುದಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ಕನಿಷ್ಟಗೊಳಿಸುತ್ತಾ, ಪ್ರತಿದಿನ ಪರಿಸರ ಕಾಳಜಿಯೊಂದಿಗೆ ಬದಕುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಯಶವಂತ್ ಸಾಲಿಯಾನ್, ಕೇಂದ್ರ ಸಮಿತಿಯ ದಿನಕರ್ ಅಮೀನ್, ಅಗ್ನಿಶಾಮಕ ದಳ ಅಧಿಕಾರಿಗಳಾದ ಕೇಶವ್, ಸತೀಶ್, ಜಯಂಟ್ಸ್ ಮಾಜಿ ಅಧ್ಯಕ್ಷರಾದ ಇಕ್ಬಾಲ್ ಮನ್ನ, ತೇಜಶ್ವರ ರಾವ್, ರಾಜೇಶ್ ಶೆಟ್ಟಿ, ಜಗದೀಶ್ ಅಮೀನ್, ಲಕ್ಷ್ಮಿಕಾಂತ್ ಬೆಸ್ಕೂರ್, ದಯಾನಂದ ಕಲ್ಮಾಡಿ, ದೇವದಾಸ್ ಕಾಮತ್, ವಾದಿರಾಜ್ ಸಾಲಿಯಾನ್, ಅಗ್ನಿಶಾಮಕ ದಳದ ಸಿಬ್ಬಂದಿ ಉಪಸ್ಥಿತರಿದ್ದರು.