ಸಾರಾಂಶ
ನಗರದ ಅರಮನೆ ಉತ್ತರ ದ್ವಾರದಿಂದ ಆರಂಭವಾದ ಬೈಸಿಕಲ್ ರ್ಯಾಲಿಯು ಅರಸು ರಸ್ತೆ, ಮೈಸೂರು ವಿವಿ ಕಾರ್ಯಸೌಧದ ಮಾರ್ಗವಾಗಿ ಮಾನಂದ ವಾಡಿ ರಸ್ತೆಯ ರೈಲ್ವೆ ಕಾರ್ಯಾಗಾರ ತಲುಪಿತು.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ನೈಋತ್ಯ ರೈಲ್ವೆ ಕಾರ್ಯಾಗಾರವು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೈಸಿಕಲ್ ರ್ಯಾಲಿ ಆಯೋಜಿಸಿತ್ತು.ನಗರದ ಅರಮನೆ ಉತ್ತರ ದ್ವಾರದಿಂದ ಆರಂಭವಾದ ಬೈಸಿಕಲ್ ರ್ಯಾಲಿಯು ಅರಸು ರಸ್ತೆ, ಮೈಸೂರು ವಿವಿ ಕಾರ್ಯಸೌಧದ ಮಾರ್ಗವಾಗಿ ಮಾನಂದ ವಾಡಿ ರಸ್ತೆಯ ರೈಲ್ವೆ ಕಾರ್ಯಾಗಾರ ತಲುಪಿತು.
ಈ ವೇಳೆ ಮುಖ್ಯ ವ್ಯವಸ್ಥಾಪಕ ಒ.ಪಿ. ಶಾ, ಉಪ ಮುಖ್ಯ ವ್ಯವಸ್ಥಾಪಕ ಬಿ. ಆಂಜನೇಯಲು, ಉಪ ಸಿಇಇ ಆರ್. ನಾಗರಾಜ್, ಷಣ್ಮುಗಂ, ಸುಬ್ರಮಣ್ಯಂ, ಕೃಪೇಷ್, ಎಂ.ಆರ್. ಚಂದ್ರಶೇಖರ್, ಸಂತೋಷ್, ಮುರುಘನ್, ಮುರಳಿ ಮೊದಲಾದವರು ಇದ್ದಾರೆ.