ಧಾರವಾಡ:

ಇಲ್ಲಿಯ ಐತಿಹಾಸಿಕ ಹೆಬಿಕ್ ಸ್ಮಾರಕದ ದೇವಾಲಯದಲ್ಲಿ “ಪರಿಸರ ಭಾನುವಾರ”ವನ್ನು ಅರ್ಥಪೂರ್ಣ ಹಾಗೂ ಜಾಗೃತಿ ಮೂಡಿಸುವ ರೀತಿಯಲ್ಲಿ ಆಚರಿಸಲಾಯಿತು.

ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಲಾಯಿತು. ಅಲ್ಲದೇ ಪ್ಲಾಸ್ಟಿಕ್ ಬಳಕೆಯ ದುಷ್ಮರಿಣಾಮ, ನೀರಿನ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಜೀವನಶೈಲಿಯ ಅಗತ್ಯತೆಯ ಕುರಿತು ಭಿತ್ತಿಚಿತ್ರ ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಭಕ್ತರಲ್ಲಿ ಅರಿವು ಮೂಡಿಸಲಾಯಿತು.

ಹೆಬಿಕ್ ಸ್ಮಾರಕ ದೇವಾಲಯದ ಹಿರಿಯ ಸಭಾಪಾಲಕ ಸ್ಯಾಮುವೇಲ್ ಕ್ಯಾಲ್ವಿನ್ ಮಾತನಾಡಿ, ಪರಿಸರವು ದೇವರು ಮಾನವಕುಲಕ್ಕೆ ನೀಡಿರುವ ಅಮೂಲ್ಯ ದಾನ. ಅದನ್ನು ಕಾಪಾಡುವುದು, ಪೋಷಿಸುವುದು ಹಾಗೂ ಮುಂದಿನ ಪೀಳಿಗೆಗಳಿಗೆ ಉಳಿಸುವುದು ನಮ್ಮ ಜವಾಬ್ದಾರಿ ಎಂದರು.

ಹುಬ್ಬಳ್ಳಿಯ ಸೇಂಟ್ ಪೀಟರ್ಸ್ ದೇವಾಲಯದ ಸಹಾಯಕ ಪಾದ್ರಿಗಳಾದ ಸ್ಟ್ಯಾಂನ್ಲಿ ಘಂಟಾ, ಬೈಬಲ್‌ನಲ್ಲಿ ಪರಿಸರ ಮತ್ತು ಸೃಷ್ಟಿ ಸಂರಕ್ಷಣೆಯ ಕುರಿತು ಉಲ್ಲೇಖವಾಗಿರುವ ಅನೇಕ ಸತ್ಯಗಳನ್ನು ವಿವರಿಸಿದರು.


ಬಾಸೆಲ್ ಮಿಶನ್ ಬಾಲಕಿಯರ ನಿಲಯದ ವಿದ್ಯಾರ್ಥಿನಿಯರು ಪರಿಸರ ಜಾಗೃತಿ ಗೀತೆ ಪ್ರಸ್ತುತಪಡಿಸಿದರು. ಹೆಬಿಕ್ ಸ್ಮಾರಕ ದೇವಾಲಯದ ಮಹಿಳಾ ಅನ್ಯೋನ್ಯ ಕೂಟದ ಸದಸ್ಯೆಯರು ದೇವಾಲಯದ ಭಕ್ತರಿಗೆ ಸಸಿ ವಿತರಿಸುವ ಜತೆಗೆ ಪ್ಲಾಸ್ಟಿಕ್ ಚೀಲಗಳ ಬದಲಾಗಿ ಬಟ್ಟೆಯ ಚೀಲಗಳ ಬಳಕೆಯ ಮಹತ್ವ ಸಾರಿದರು. ಪರಿಸರ ಸ್ನೇಹಿ ಜೀವನದ ಸಂದೇಶ ಸಾರಿದರು. ವಿಲ್ಸನ್ ಮೈಲಿ, ಪ್ರೇಮಲತಾ ಕ್ಯಾಲ್ವಿನ್, ಪ್ರಕಾಶ ಹುಗ್ಗಿ, ದೇವದಾನ ದೊಡ್ಡಮನಿ, ಸುರೇಶ ದಂಡಿನ್, ಸ್ಟೀಫನ್ ಜಯಚಂದ್ರ, ಜೋಸೆಫ್ ಹೂಲಗೇರಿ, ಡಾ. ಸುಜಯ ಹೊಂಗಲ್, ಆರತಿ ಕತ್ತೆಬೆನ್ನೂರು, ಎಸ್ತೇರ ಬಾರಟಕ್ಕೆ, ಯಾಕೀನ್ ಮಳೇಕಾರ್, ತೆರೆಸ್ಸಾ ದಂಡಿನ್ ಇದ್ದರು.