ಸಾರಾಂಶ
ಮಾನವ ಕುಲದ ಉಳಿವಿಗಾಗಿ ಪರಿಸರ ರಕ್ಷಣೆ ಹಾಗೂ ಸ್ವಚ್ಚತೆ ಕಾಪಾಡಿಕೊಳ್ಳಬೇಕಿದೆ ಎಂದು ಶಾಸಕ ಬಿ.ಪಿ.ಹರೀಶ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಹರಿಹರ
ಮಾನವ ಕುಲದ ಉಳಿವಿಗಾಗಿ ಪರಿಸರ ರಕ್ಷಣೆ ಹಾಗೂ ಸ್ವಚ್ಚತೆ ಕಾಪಾಡಿಕೊಳ್ಳಬೇಕಿದೆ ಎಂದು ಶಾಸಕ ಬಿ.ಪಿ.ಹರೀಶ್ ಅಭಿಪ್ರಾಯಪಟ್ಟರು.ನಗರದ ಮರಿಯ ನಿವಾಸ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಪ್ರಯುಕ್ತ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರವು ನಮಗೆ ಜೀವನಕ್ಕೆ ಅಗತ್ಯವಾದ ಗಾಳಿ ಮತ್ತು ನೀರನ್ನು ನೀಡುತ್ತದೆ. ಅವುಗಳ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ನೈಸರ್ಗಿಕ ಪರಿಸರವನ್ನು ನಾವು ಸಂರಕ್ಷಣೆ ಮಾಡುವ ಅವಶ್ಯಕತೆಯಿದೆ ಎಂದರು.ಅಭಿವೃದ್ದಿ ಹೆಸರಿನಲ್ಲಿ ಮರಗಳನ್ನು ಕಡಿಯುವುದು, ಗುಡ್ಡಗಳನ್ನು ತೆಗೆಯುವುದನ್ನು ಇಂದು ನಾವು ಹೆಚ್ಚಾಗಿ ಕಾಣುತ್ತಿದ್ದೆವೆ ಈ ಹಿನ್ನಲೆಯಲ್ಲಿ ವಿಧ್ಯಾರ್ಥಿಗಳಾಗದ ನೀವು ಮನೆಯ ಸುತ್ತ ಮುತ್ತ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಿ. ನಾವು ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳುತ್ತೇವೆಯೋ ಹಾಗೇಯೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಳಜಿಯಿಂದ ಜವಾದ್ದಾರಿಯುತವಾಗಿ ರಕ್ಷಣೆ ಮಾಡ ಬೇಕಾಗಿರುವುದು ನಮ್ಮೇಲ್ಲರ ಅಧ್ಯ ಕರ್ತವ್ಯವಾಗಿದೆ ಎಂದರು.
ಅನಾರೋಗ್ಯದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ನಮ್ಮ ಮನೆಯ ಸುತ್ತ ಮುತ್ತಲ ಸ್ವಚ್ಚತೆಗೆ ಅಧ್ಯತೆ ನೀಡುವುದು, ಇದರಿಂದ ವಿವಿಧ ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳವುದರ ಜೊತೆಗೆ ಉತ್ತಮ ಪರಿಸರವನ್ನು ನಿರ್ಮಾಣ ಮಾಡೋಣ ಎಂದರು.ಪರಿಸರ ಸಂರಕ್ಷಣೆಯ ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್, ಬಿಆರ್‌ಸಿ ಕೃಷ್ಣಪ್ಪ, ಟಿಎಚ್‌ಒ ಡಾ.ಅಬ್ದುಲ್ ಖಾದರ್, ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))