ಸಾರಾಂಶ
ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಐ.ಆರ್.ಕಟಗೋಳ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಕಬ್ಬೂರತಾಯಿ ತನ್ನ ಮಗುವನ್ನು ಹೇಗೆ ರಕ್ಷಿಸುತ್ತಾಳೋ ಹಾಗೆಯೇ ಪರಿಸರವನ್ನು ನಾವು ರಕ್ಷಿಸಬೇಕು ಎಂದು ಓಂ ಸೆಂಟ್ರಲ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಮಹೇಂದ್ರ ಕೆ.ಆರ್ ಹೇಳಿದರು.
ಪಟ್ಟಣದ ಓಂ ಸೆಂಟ್ರಲ್ ಪಬ್ಲಿಕ್ ಸ್ಕೂಲ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಡು ಕಡಿಯುವುದರಿಂದ ಬರ ಬರುತ್ತದೆ. ಇದರಿಂದ ಮನುಷ್ಯ ಮತ್ತು ಪ್ರಾಣಿಗಳ ಮೇಲೆ ವ್ಯರಿತಿಕ್ತವಾದ ಪರಿಣಾಮ ಉಂಟಾಗುತ್ತದೆ ಎಂದರು.ಸಮುದಾಯ ಆರೋಗ್ಯ ಕೇಂದ್ರ ಕಬ್ಬೂರ ಮುಖ್ಯ ವೈದ್ಯಾಧಿಕಾರಿ ಐ.ಆರ್.ಕಟಗೋಳ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಸ್.ಎಂ.ಕರಗಾಂವೆ ಮಾತನಾಡಿ, ಇವತ್ತಿನ ದಿನಮಾನದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತದೆ ಅನೇಕ ತೊಂದರೆಗಳು ಉಂಟಾಗುತ್ತವೆ. ನಾವು ನೀವೆಲ್ಲ ಪರಿಸರವನ್ನು ಸಮತೋಲನದಿಂದ ಇರುವಂತೆ ಕಾಪಾಡಿಕೊಂಡು ಹೋಗಬೇಕು. ಪ್ರತಿಯೊಬ್ಬರು ಮನೆಗೊಂದು ಸಸಿ ನೆಡುವುದರ ಮೂಲಕ ಪರಿಸರ ಹೆಚ್ಚೆಚ್ಚು ಬೆಳೆಸಬೇಕು. ಇದರಿಂದ ಪ್ರತಿಕೂಲವಾದ ವಾತಾವರಣ ನಿರ್ಮಿಸಲು ಸಾಧ್ಯವಿದೆ ಎಂದು ವಿವರಿಸಿದರು.ಈ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಪ್ರಕಾಶ ಬ.ಬೆಲ್ಲದ, ಉಪಪ್ರಾಂಶುಪಾಲ ರಾಜು ಮಹಿಪತಿ, ಪ್ರಿಯಾಂಕಾ ಇಂಚಲ, ಕಿಶೋರಿ ನಿಂಬಾಳಕರ, ರಾಜು ಟೋಳೆ ಮತ್ತಿತರ ಉಪನ್ಯಾಸಕರು ಉಪಸ್ಥಿತರಿದ್ದರು.
ಆಶಿತಾ ಕಿವಡ ನಿರೂಪಿಸಿದರು. ಅಪೇಕ್ಷಾ ಚಿಮ್ಮಟ ಸ್ವಾಗತಿಸಿದರು. ವಿನಿತ್ ಜಿನಗಿ ವಂದಿಸಿದರು.