ಸಾರಾಂಶ
ತಂತ್ರಜ್ಞಾನದ ಬೆಳವಣಿಗೆಯ ಭರದಲ್ಲಿ ಪರಿಸರ ಕಾಳಜಿ ಮರೆಯಬಾರದು. ಸ್ಥಿರತೆ ಇಲ್ಲದ ಅಭಿವೃದ್ಧಿ ಪರಿಸರಕ್ಕೆ ಮಾರಕ ಎಂಬುದನ್ನು ಎಲ್ಲರೂ ತಿಳಿಯಬೇಕು ಎಂದು ಗೋಕುಲ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಾ.ಎಂ.ಆರ್. ಸೀತಾರಾಂ ಹೇಳಿದರು.
ಬೆಂಗಳೂರು: ತಂತ್ರಜ್ಞಾನದ ಬೆಳವಣಿಗೆಯ ಭರದಲ್ಲಿ ಪರಿಸರ ಕಾಳಜಿ ಮರೆಯಬಾರದು. ಸ್ಥಿರತೆ ಇಲ್ಲದ ಅಭಿವೃದ್ಧಿ ಪರಿಸರಕ್ಕೆ ಮಾರಕ ಎಂಬುದನ್ನು ಎಲ್ಲರೂ ತಿಳಿಯಬೇಕು ಎಂದು ಗೋಕುಲ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಾ.ಎಂ.ಆರ್. ಸೀತಾರಾಂ ಹೇಳಿದರು. ಅವರು ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ‘ಸುಸ್ಥಿರ ಅಭಿವೃದ್ಧಿಯಲ್ಲಿ ನೂತನ ತಂತ್ರಜ್ಞಾನ’ ಕುರಿತು ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಮಾತನಾಡಿದರು.ವಿದೇಶಗಳಲ್ಲಿ ಪರಿಸರ ಉಳಿವಿವಾಗಿ ಸುಸ್ಥಿರ ಅಭಿವೃದ್ಧಿಗೆ ಪಣತೊಟ್ಟಿವೆ. ಕಡಿಮೆ ಕಾರ್ಬನ್ ಹೊರಹಾಕುವಂತಹ ಉತ್ಪನ್ನಗಳನ್ನು ಹೆಚ್ಚು ಬಳಕೆ ಮಾಡಬೇಕು ಎಂದರು.
ಗೋಕುಲ ಶಿಕ್ಷಣ ಸಂಸ್ಥೆಯ ಮುಖ್ಯಶೈಕ್ಷಣಿಕ ಸಲಹೆಗಾರ ಡಾ.ಕರಿಸಿದ್ದಪ್ಪ, ರಾಮಯ್ಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ತರುಣ್‌ಶೌರ್ಯದೀಪ್, ಬ್ಯಾಂಕಾಕ್ ಕಿಂಗ್ ಮೊಂಗ್‌ಕುಟ್‌ನ ತಂತ್ರಜ್ಞಾನ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ತಂತ್ರಗಾರಿಕೆಯ ಅಧ್ಯಕ್ಷ ಮ್ಯಾಲೈನ್ ಅರಿಯನುಂ, ಪ್ರಾಚಾರ್ಯ ಡಾ. ಎನ್.ವಿ.ಆರ್.ನಾಯ್ಡು ಇದ್ದರು.