ಮುಳಗುಂದ: ಪರಿಸರ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಮರಗಳ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಹಾಗೂ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಪ್ರಾ. ಎ.ಎಂ. ಅಂಗಡಿ ತಿಳಿಸಿದರು.
ಪಟ್ಟಣದ ಎಸ್‌ಜೆಜೆಎಂ ಪಪೂ ಮಹಾವಿದ್ಯಾಲಯದಲ್ಲಿ ಶುಕ್ರವಾರ ಎನ್‌ಎಸ್‌ಎಸ್ ಘಟಕದಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿ, ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶವಾಗುತ್ತಿದ್ದು, ಇದನ್ನು ನಿಯಂತ್ರಿಸಲು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಆದಷ್ಟು ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಮಾಡಿ, ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕು. ಮರ-ಗಿಡಗಳನ್ನು ಸಂರಕ್ಷಣೆ ಮಾಡಿ, ಪ್ರಕೃತಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.ಈ ವೇಳೆ ಸ್ಥಳೀಯ ಪಪಂ ಕಾರ್ಯಾಲಯದಿಂದ ನೀಡಿದ ಸಸಿಗಳನ್ನು ಮಹಾವಿದ್ಯಾಲಯದ ಆವರಣದಲ್ಲಿ ನೆಡಲಾಯಿತು. ಬಾ.ಲಿ.ಮ.ಶಿ. ಸಮಿತಿ ಸದಸ್ಯ ಎಂ.ಎಂ. ಅದರಗುಂಚಿ, ಉಪನ್ಯಾಸಕರಾದ ಆರ್.ಆರ್. ಪಟ್ಟಣ, ಎನ್.ಎಸ್. ಸಂಗೇರಿ, ವಿ.ಎಂ. ಕೊಪ್ಪಳ, ಸುಷ್ಮಾ ರಡ್ಡೆರ, ಸವಿತಾ ನಡುಗೇರಿ, ಎಸ್.ಪಿ. ಶಿರೂರ, ಇ.ಎಂ. ಗುಳೇದಗುಡ್ಡ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.ಪರಿಸರ ಸ್ವಚ್ಛತೆಗೆ ಆದ್ಯತೆ ನೀಡೋಣಗದಗ: ನಾವು ಮನೆಯನ್ನಷ್ಟೇ ಸ್ವಚ್ಛವಾಗಿಟ್ಟುಕೊಳ್ಳದೇ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಗದಗ- ಬೆಟಗೇರಿ ನಗರಸಭೆಯಿಂದ ಜರುಗುತ್ತಿರುವ ಹೊಸ ಘನತ್ಯಾಜ್ಯ ನಿರ್ವಹಣಾ ನಿಯಮ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಕೈಜೋಡಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ತಿಳಿಸಿದರು.ಗದಗ- ಬೆಟಗೇರಿ ನಗರಸಭೆಯಿಂದ ಆಯ್ದ ಶಾಲೆಗಳಾದ ಸಿದ್ಧಲಿಂಗ ನಗರದ 15ನೇ ನಂಬರ ಶಾಲೆಯ ಹೊರಗಿನ ಗೋಡೆಗಳಿಗೆ ಚಿತ್ರಗಳನ್ನು ಬಿಡಿಸಿ ಮಕ್ಕಳಿಗೆ ಸ್ವಚ್ಛತೆಯ ಅರಿವು, ಹೊಸ ಘನತ್ಯಾಜ್ಯ ನಿರ್ವಹಣಾ ನಿಯಮ- 2026 ಕುರಿತು ಮಾಹಿತಿ ನೀಡುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವೆಲ್ಲರೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮನೆಕಸ ಸಂಗ್ರಹಣೆಯಲ್ಲಿ ಕಸವನ್ನು ಬೇರೆ ಮಾಡಿ ಕಾಂಪೋಸ್ಟ್ ಮಾಡುವ ವಿಧಾನದೊಂದಿಗೆ ನಾವು ಕಸದಿಂದ ರಸವನ್ನು ಕಂಡುಕೊಳ್ಳಬಹುದು. ಗದಗ- ಬೆಟಗೇರಿ ನಗರಸಭೆಯ ಪೌರಾಯುಕ್ತರು ವಿಶೇಷ ಕಾರ್ಯಕ್ರಮ ಮೂಲಕ ತಮ್ಮ ತಂಡದೊಂದಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು.ಶಿಕ್ಷಣ ಸಂಯೋಜಕ ಮುರಳಿ ಸೋಲ್ಲಾಪೂರ ಮಾತನಾಡಿ, ಈ ಕಾರ್ಯಕ್ರಮವು ಅತ್ಯಂತ ಉಪಯುಕ್ತವಾಗಿದ್ದು, ಶಾಲೆಯ ಮಕ್ಕಳಿಗೆ ಉದಾಹರಣೆ ಸಮೇತ ಕಸ ವಿಲೇವಾರಿ, ಸ್ವಚ್ಛತೆ, ವಿಂಗಡಣೆ, ಕಸದಿಂದ ಸಂಪನ್ಮೂಲ ಸೃಷ್ಟಿಯಾಗಿ ತೊಂದರೆ ಆಗುವುದು. ಅದಕ್ಕಾಗಿ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಕಸವನ್ನು ವಿಂಗಡಣೆ ಮಾಡಿ ಪೌರಕಾರ್ಮಿಕರಿಗೆ ನೀಡಿ ಅವರ ಶ್ರಮಕ್ಕೆ ಕೈಜೋಡಿಸೋಣ ಎಂದರು.
ಈ ಸಂದರ್ಭದಲ್ಲಿ ಪೌರಾಯುಕ್ತರು, ಪರಿಸರ ಅಭಿಯಂತರರು, ನಗರಸಭೆ ಸದಸ್ಯರಾದ ವಿದ್ಯಾವತಿ ಗಡಗಿ, ಸೂಪರವೈಸರ್, ಕಮ್ಯುನಿಟಿ ಮೊಬೈಲೈಸರ್‌ಗಳು, ಪೌರಕಾರ್ಮಿಕರು, ಶಾಲಾ ಮಕ್ಕಳು, ಶಿಕ್ಷಕರು ಭಾಗವಹಿಸಿದ್ದರು.