ಸಾರಾಂಶ
ಕನಕಪುರ: ಮನುಷ್ಯ ಉಳಿಯಲು ಪ್ರಕೃತಿ ಕಾರಣ. ಆದ್ದರಿಂದ ನಮ್ಮ ಉಳಿವಿಗೆ ಅಗತ್ಯವಿರುವ ಪ್ರಕೃತಿಯನ್ನು ಬೆಳೆಸುವ ಶಕ್ತಿ ಹಾಗೂ ಹಂಬಲ ನಮ್ಮಲ್ಲಿರಬೇಕೇಂದು ಪರಿಸರ ಪ್ರೇಮಿ ಲಯನ್ ಮರಸಪ್ಪ ರವಿ ತಿಳಿಸಿದರು. ನಗರದ ಮಳಗಾಳಿನ ಪರಿಸರ ಪ್ರೇಮಿ ಸಂಘದ ಸದಸ್ಯ ಪರಿಸರ ರಕ್ಷಕ ಮಹದೇವ್ ಅವರ ಜನ್ಮದಿನದ ಆಚರಣೆ ಪ್ರಯುಕ್ತ ಮಳಗಾಳಿನಿಂದ ಜಾವನಮ್ಮನದೊಡ್ಡಿವರಗೆ ಗಿಡ ನೆಟ್ಟು ಅವುಗಳ ಹೊಣೆಗಾರಿಕೆ ತೆಗೆದುಕೊಂಡ ಮಹದೇವಯ್ಯ ಕಾರ್ಯವನ್ನು ಶ್ಲಾಘಿಸಿ ಮಾತನಾಡಿದ ಅವರು, ಗಿಡ ನೆಡುವುದು, ಅದನ್ನ ಬೆಳೆಸುವುದು ನಮ್ಮ ಆದ್ಯತೆಯಾಗಬೇಕು ಎಂದರು. ಜನ್ಮದಿನದ ಪ್ರಯುಕ್ತ ಮೋಜು ಮಸ್ತಿಗೆ ಆಸೆ ಪಡುವುದು ಇಂದು ಸಾಮಾನ್ಯ ಎನಿಸಿದೆ. ಆದರೆ, ಮಹದೇವ್ ಅವರು ಪರಿಸರ ಮತ್ತು ಸಮಾಜ ಸೇವೆಯ ಮೂಲಕ ಮನೆ ಮಾತಾಗಿದ್ದು ಇದು ಸಮಾಜದಲ್ಲಿ ಮತ್ತೊಬ್ಬರಿಗೆ ಅನುಕರಣೆಯಾಗಬೇಕೆಂದರು. ಇದೇ ವೇಳೆ ಮಳೆಗಾಳಿನ ಸರಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ, ಪೆನ್ನು, ಬಿಲ್ಟ್ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಡಿವೈಎಸ್ಪಿ ಶ್ರೀನಿವಾಸ್, ಜೈರಾಮ್, ವೆಂಕಟೇಶ್, ರಾಜು, ರಾಜೇಶ್, ದಾಸಪ್ಪ, ಶ್ರೀಧರ್, ಕೋರ್ಟ್ ಶೆಟ್ಟರು, ಕೃಷಿ ವೆಂಕಟೇಶ್, ಜೈಕುಮಾರ್, ವೆಂಕಟರಮಣ ಸ್ವಾಮಿ ಇತರರು ಉಪಸ್ಥಿತರಿದ್ದರು. ಪೊಟೋ೫ಸಿಪಿಟಿ೨:ಮಳಗಾಳಿನ ಪರಿಸರ ಪ್ರೇಮಿ ಸಂಘದ ಸದಸ್ಯ ಪರಿಸರ ರಕ್ಷಕ ಮಹದೇವ್ ಅವರ ಜನ್ಮದಿನದ ಪ್ರಯುಕ್ತ ಮಳಗಾಳಿನಿಂದ ಜಾವನಮ್ಮನದೊಡ್ಡಿವರಗೆ ಸಸಿ ನೆಟ್ಟು, ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನು ವಿತರಿಸಲಾಯಿತು. ಪರಿಸರ ಪ್ರೇಮಿಗಳಾದ ಲಯನ್ ಮರಸಪ್ಪ ರವಿ, ಮಹದೇವಯ್ಯ, ನಿವೃತ್ತ ಡಿವೈಎಸ್ಪಿ ಶ್ರೀನಿವಾಸ್, ಜೈರಾಮ್, ವೆಂಕಟೇಶ್ ಇತರರಿದ್ದರು.