ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಮಂಗಳಾ ಎಂ

| Published : Jun 29 2024, 12:35 AM IST

ಸಾರಾಂಶ

ನಮ್ಮನ್ನು ಸುತ್ತುವರಿದಿರುವ ಪರಿಸರ ನಮ್ಮ ಬದುಕಿನ ಅವಿಭಾಜ್ಯ ಅಂಗ. ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಹಸೀಲ್ದಾರ್‌ ಮಂಗಳಾ ಎಂ. ಹೇಳಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ನಮ್ಮನ್ನು ಸುತ್ತುವರಿದಿರುವ ಪರಿಸರ ನಮ್ಮ ಬದುಕಿನ ಅವಿಭಾಜ್ಯ ಅಂಗ. ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಹಸೀಲ್ದಾರ್‌ ಮಂಗಳಾ ಎಂ. ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದಲ್ಲಿ ಗುರುವಾರ ನಡೆದ ಲಕ್ಷ ಸಸಿ ನೆಡುವ ಅಭಿಯಾನಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮರಗಿಡಗಳನ್ನು ಬೆಳೆಸಬೇಕು. ಮಕ್ಕಳನ್ನು ಹೇಗೆ ಬೆಳೆಸುತ್ತೇವೆಯೋ ಅದೇ ರೀತಿ ಮರ ಗಿಡಗಳನ್ನು ಪೋಷಿಸಿದರೆ ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಯುತ ಪರಿಸರ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪೊಲೀಸ್ ಠಾಣೆಯ ಪಿಎಐ ಲಕ್ಷ್ಮಣ ಆರಿ ಮಾತನಾಡಿ, ವಾಹನ ಸಂಚಾರ, ಕಾರ್ಖಾನೆ ಉಗುಳುವ ಹೊಗೆಯಿಂದ ಪರಿಸರ ಸಾಕಷ್ಟು ಹಾಳಾಗುತ್ತಿದೆ. ಪರಿಸರ ಮಾಲಿನ್ಯ ತಡೆಗಟ್ಟಬೇಕೆಂದರೆ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಬೆಳೆಸಬೇಕು ಎಂದರು. ಪುರಸಭೆ ಮುಖ್ಯಾಧಿಕಾರಿ ಎ.ಎಸ್. ಮುಜಾವರ್, ಕಾಲೇಜಿನ ಪ್ರಾಚಾರ್ಯ ಮಹೇಶ ಜಕ್ಕನ್ನವರ, ಉಪ ಪ್ರಾಚಾರ್ಯ ಎಂ.ಪಿ. ಮಾಗಿ, ಸಿ.ಎಂ.ಕುರುಬರ, ವೈ.ಜಿ.ತಳವಾರ ಸೇರಿದಂತೆ ಇತರರು ಇದ್ದರು.