ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು ಅದನ್ನು ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಠ ಮಾನ್ಯಗಳು, ಸಂಘ-ಸಂಸ್ಥೆಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡಬೇಕು. ಆಗ ಮಾತ್ರ ಪರಿಸರ ದಿನಾಚರಣೆಗೆ ಅರ್ಥ ಮೂಡುತ್ತದೆ ಎಂದು ಜಡೆ ಸಂಸ್ಥಾನ ಮಠದ ಡಾ. ಮ.ನಿ.ಪ್ರ. ಮಹಾಂತ ಸ್ವಾಮೀಜಿ ಹೇಳಿದರು.ಪಟ್ಟಣದ ಮುರುಘಾ ಮಠದಲ್ಲಿ ಕಾಂತಾರ ಯಜ್ಞ ಕೊಪ್ಪಲು, ಭಾರತೀ ಸಂಪದ ವಡ್ಡಿನಗದ್ದೆ, ಪರಿಸರ ಜಾಗೃತಿ ಟ್ರಸ್ಟ್, ವಿನಾಯಕ ಮೋಟಾರ್ಸ್ ಕೋಟೇಶ್ವರ, ಕಲಾದ್ವಯ ಟೀ ನರ್ಸರಿ ತಲಕಾಲಕೊಪ್ಪ. ಅಕ್ಕನ ಬಳಗ ಮತ್ತು ಮುರುಘಾ ಮಠದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಮಾಸಿಕ ಶಿವಾನುಭವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪರಿಸರದಲ್ಲಿ ಪ್ರಾಣಿ, ಪಕ್ಷಿ, ಸಸ್ಯ ಜಲಚರ ಸಂಕುಲಗಳಿವೆ ಅವುಗಳು ಇರುವುದರಿಂದಲೇ ಮನುಷ್ಯನಿದ್ದಾನೆ ಹೊರತು ಅವುಗಳ ಹೊರತಾಗಿ ಮನುಷ್ಯ ನಿರಲು ಸಾಧ್ಯವಿಲ್ಲ. ಆಧುನಿಕ ಸಂಸ್ಕೃತಿಯ ಪ್ರಭಾವದಿಂದಾಗಿ ಪರಿಸರ ವಿನಾಶದ ಅಂಚಿಗೆ ತಲುಪುತ್ತಿದೆ ಎಂದರು.ನವಲಗುಂದದ ಗವಿಮಠದ ಬಸವಲಿಂಗ ಮಹಾ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿ ಪರಿಸರದ ಬಗ್ಗೆ ಪರಿಜ್ಞಾನ ಮೂಡಿಸಬೇಕಿದೆ. ಪ್ಲಾಸ್ಟಿಕ್‌ಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಮುಂದಾಗಬೇಕು ಎಂದರು.ಬೆಂಗಳೂರು ಸೆಂಟರ್ ಫಾರ್ ಸಿಂಬಿಯೋಸಿನ್ ಸಂಸ್ದಾಪಕಿ ಡಾ ಸೀಮಾ.ಎಸ್.ಅರ್. ಮಾತನಾಡಿ, ಕೊಳ್ಳು ಬಾಕ ಸಂಸ್ಕೃತಿಯಿಂದ ಪರಿಸರ ದಿನ ನಿತ್ಯವೂ ಹಾಳಾಗುತ್ತಿದೆ. ಹಳೇ ವಸ್ತುಗಳನ್ನು ಕೊಟ್ಟು ಹೊಸ ವಸ್ತುಗಳನ್ನು ಕೊಳ್ಳಿ ಎಂದು ಆಮಿಷ ತೋರಿಸಿ ಹೊಸ ಹೊಸ ವಸ್ತುಗಳನ್ನು ಕೈಗಾರಿಕೋದ್ಯಮಿಗಳು ಉತ್ಪಾದನೆಗೆ ಮುಂದಾಗಿದ್ದರಿಂದ ಉತ್ಪಾದನೆ ಹೆಚ್ಚಳಕ್ಕಾಗಿ ಪರಿಸರ ನಾಶ ಮಾಡಲಾಗುತ್ತಿದೆ. ನಿತ್ಯ ಉಪಯೋಗಿಸಿ ಎಸೆಯುವ ಅನುಪಯುಕ್ತ ಎಲ್ಲಾ ವಸ್ತುಗಳು ನದಿ, ಗಾಳಿಯಲ್ಲಿ ಸೇರಿ ಪರಿಸರ ಕಲುಷಿತಗೊಳ್ಳುತ್ತದೆ. ಪ್ರಪಂಚ ಮನುಷ್ಯನಿಲ್ಲದೆ ಇರಬಹುದು ಆದರೆ ಜೀವ ಸಂಕುಲಗಳಿಲ್ಲದೆ ಇರಲು ಸಾಧ್ಯವಿಲ್ಲ ಎಂದರು. ದಂತ ವೈದ್ಯ ಡಾ. ಜ್ಞಾನೇಶ್ ಮಾತನಾಡಿ, ಗಿಡ ನೆಡೆವುದರ ಮೂಲಕ ಪರಿಸರ ದಿನಾಚರಣೆ ಆಚರಿಸುವ ನಾವುಗಳು ನೆಟ್ಟ ಗಿಡವನ್ನು ಬೆಳೆಸಲು ಮುಂದಾಗಬೇಕು. ಪರಿಸರ ನಾಶಕ್ಕೆ ಮಾನವನೇ ಮೂಲ ಕಾರಣನಾಗಿದ್ದಾನೆ. ಮನುಷ್ಯ ಮಾಡುವ ಕಾರ್ಯಗಳು ಪ್ರಕೃತಿಗೆ ಪೂರಕವಾಗಿರದೆ ಮಾರಕವಾಗಿವೆ ಎಂದರು. ಭಾಷಣ, ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಸಿರಿಗೌರಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು.ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ವಕೀಲ ಎಂ.ಅರ್.ಪಾಟೀಲ್ ಮಾತನಾಡಿದರು. ಈ ಸಂದರ್ಭದಲ್ಲಿ ಸಾಗರ ಸೈನ್ಸ್ ಪೋರಂ ಅಧ್ಯಕ್ಷ ಡಾ. ಹೆಚ್.ಎಸ್. ಜೀವನ್, ಕಾಂತರ ಯಜ್ಞದ ಮಂಜುನಾಥ್ ಕೆರೆಕೊಪ್ಪ, ಉಪ ವಲಯ ಅರಣ್ಯಾಧಿಕಾರಿ ಭದ್ರೇಶ್, ಡಾ. ಹೆಚ್.ಎಸ್.ಜೀವನ್, ಡಾ. ಜಾಹ್ನವಿ, ಪ್ರಶಾಂತ್ ದೊಡ್ಡಮನೆ, ಕದಂಬ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ವಸುಮತಿ, ಪ್ರಿಯದರ್ಶಿನಿ, ಮಠದ ಕಾರ್ಯದರ್ಶಿ ಡಿ.ಶಿವಯೋಗಿ, ನಾಗಪ್ಪ ವಕೀಲ, ನಾಗರಾಜ ಗೌಡ ಸೇರಿದಂತೆ ಮೊದಲಾದವರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))