ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಸ್ವತಂತ್ರ ಭಾರತದ ಸಮಸ್ತ ಪ್ರಜೆಗಳಿಗೆ ಪ್ರಜಾಪ್ರಭುತ್ವದ ದೀಕ್ಷೆ ನೀಡಿ, ಸರ್ವರಿಗೂ ಸಮಾನ ಪ್ರಗತಿ, ಸರ್ವರಿಗೂ ಸಮಾನ ರಕ್ಷಣೆ ಎಂದು ಸಂವಿಧಾನ ಘೋಷಣೆ ಮಾಡಿದೆ ಇದು ಅದ್ಭುತ ಕೊಡುಗೆಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್.ಸಿ ಮಹಾದೇವಪ್ಪ ನುಡಿದರು.ನಗರದ ಡಾ. ಬಿ.ಆರ್ ಅಂಬೇಡ್ಕರ ವೃತ್ತದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಹಾಗೂ ಜಿಲ್ಲಾ ಘಟಕದಿಂದ ನಡೆದ ಹಿಂದುತ್ವದ ಹುನ್ನಾರ ಹತ್ತಿಕ್ಕಲು ಜಾತ್ಯತೀತ ರಾಷ್ಟ್ರ ನಿರ್ಮಿಸಲು ಬೃಹತ್ ಸಮಾವೇಶ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈ ನೆಲದಲ್ಲಿರುವ ಎಲ್ಲಾ ಧರ್ಮಗಳಿಗೆ ಸಮಾನ ಸ್ಥಾನ ಮಾನ ಸನ್ಮಾನ ನೀಡಿದೆ. ಆದರೆ, ಅಸಮಾನತೆ ಸೃಷ್ಟಿ ಮಾಡುವ ಧರ್ಮಗಳ ಕಾರ್ಯಕ್ಕೆ ಶಿಕ್ಷೆ ನೀಡಿ ಎಂದು ಹೇಳಿಕೊಟ್ಟಿದೆ ಎಂದರು.
ಧರ್ಮದ ಅಂಧತ್ವ ದಬ್ಬಾಳಿಕೆ ದೌರ್ಜನ್ಯಗೆ ತಡೆ ಗೋಡೆಯಾಗಿದೆ. ವಿಶ್ವ ಸಂಸ್ಥೆ ಭಾರತದ ಸಂವಿಧಾನ ಶ್ರೇಷ್ಠವೆಂದು ಹೇಳಿಕೊಟ್ಟಿದೆ. ಭಾರತೀಯರಾದ ನಾವು ಪ್ರಶ್ನೆ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದ ಜನರಿಗೆ ಸಂವಿಧಾನದ 75 ವರ್ಷ ಜನ ಜಾಗೃತಿ ಜಾಥಾ ಮಾಡಿ ತಿಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಈ ನೆಲಕ್ಕೆ ಅಂಟಿಕೊಂಡಿರುವ ಬಡತನ, ಅಸಮಾನತೆ, ನಿರ್ಮೂಲನೆ ಮಾಡಲು ಎಲ್ಲರು ಶ್ರಮಿಸಬೇಕಾಗಿದೆ ಎಂದರು.ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಜೈವಿಕ ಪರಿಸರ ಸಚಿವರಾದ ಈಶ್ವರ ಖಂಡ್ರೆ ಮುಖ್ಯ ಅತಿಥಿಗಳಾಗಿ ಮಾತನಾಡಿ, 12ನೇ ಶತಮಾನದಲ್ಲಿ ಸಮ ಸಮಾಜಕ್ಕಾಗಿ ವಚನ ಸಾಹಿತ್ಯದ ಮೂಲಕ ಸಂಘರ್ಷ ಮಾಡಿದ ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕನೆಂದು ಸರ್ಕಾರ ಘೋಷಣೆ ಮಾಡಿದೆ. ಗ್ಯಾರಂಟಿಗಳ ಮೂಲಕ ಬಡ ಜನರ ಆಶಾಕಿರಣವಾಗಿದೆ. ಸಂವಿಧಾನ ಓದಿ ರಾಜಕಾರಣ ಮಾಡಬೇಕು. ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕು. ಧರ್ಮ ರಾಜಕಾರಣ ಕೈಬಿಡಬೇಕು ಎಂದರು.
ರಾಜ್ಯ ಸಂಚಾಲಕರಾದ ಡಾ. ಡಿ ಜಿ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ತು ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿದರು.ಜಿಲ್ಲಾ ಸಂಚಾಲಕರಾದ ಅರಣು ಪಟೇಲ್ ಸ್ವಾಗತಿಸಿದರು. ಬೀದರ್‌ನ ಯುವ ಸಾಹಿತಿ ಸುಬ್ಬಣ್ಣ ಕರಕನಳ್ಳಿ ಬರೆದಿರುವ ಸಂಘರ್ಷದ ಬೆಳಕು ಕೃತಿಯನ್ನು ನೀಡಿ ಸಚಿವರಿಗೆ ಗೌರವಿಸಲಾಯಿತು.
ಹಿರಿಯ ಸಾಹಿತಿಗಳಾದ ಎಂ ಎಸ್ ಮನೊಹರ ಬರೆದಿರುವ ಕ್ರಾಂತಿ ಗೀತೆಗಳನ್ನು ಶಿವರಾಜ ತಡಪಳ್ಳಿ ಸುನೀಲ ಕಡ್ಡೆ, ವಿಜಯಕುಮಾರ ಸೋನಾರೆ, ದೇವಿದಾಸ ಚಿಮಕೊಡ್ ವಿಣಾ ದೇವದಾಸ ಚಿಮಕೊಡ್ ಹರೀಶ ಚಕ್ರವರ್ತಿ ಹಾಡಿದರು.ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ವಿದ್ಯಾರ್ಥಿನಿಯರು ಸಂವಿಧಾನ ಜನಜಾಗೃತಿ ನೃತ್ಯ ಪ್ರದರ್ಶನ ಮಾಡಿದರು. ಸುಮಂತ ಕಟ್ಟಿಮನಿ ವಂದಿಸಿದರು. ವೇದಿಕೆಯಲ್ಲಿ ಅಬ್ದುಲ್ ಮನ್ನಾನ್‌ಸೇಠ, ಬಾಬುರಾವ್ ಹೊನ್ನಾ, ಅಮೃತರಾವ್ ಚಿಮಕೊಡ, ಫರ್ನಾಂಡಿಸ್ ಹಿಪ್ಪಳಗಾಂವ್, ಬಾಬು ಟೈಗರ್, ರಮೇಶ ಡಾಕುಳಗಿ, ಡಾ. ಕಾಶಿನಾಥ ಚಲುವಾ, ದಿಗಂಬರ ಮಡಿವಾಳ, ಗಾಲೀಬ ಹಾಸ್ಮಿ, ರಾಜಕುಮಾರ ಬನ್ನೇರ್, ಅಭಿಕಾಳೆ, ರಾಜಕುಮಾರ ವಾಘಮಾರೆ, ಸುಭಾಷ ಟಿಳ್ಳೆಕರ್, ಅಶೋಕ ಗಾಯಕವಾಡ, ರಮೇಶ ದುಮ್ಮಾಶಪೂರ, ವಾಮನ ಮೈಸಲಿಗೆ, ಮಲ್ಲಿಕಾರ್ಜುನ ಮಾಲೆ, ರಮೇಶ ಬೆಲ್ದಾರ, ದಯಾನಂದ ಚಿಟ್ಟಾ, ದಯಾಸಾಗರ ಬೇಂಡೆ ಮತ್ತಿತರರು ಇದ್ದರು.