ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರುಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಎಲ್ಲರಿಗೂ ಸಮಾನತೆ ಸಿಕ್ಕಿದೆ ಎಂದು ರೋಟರಿ ಕಬ್ಲ್ ಆಫ್ ಗ್ರೀನ್‌ವೇ ಸಂಸ್ಥೆ ಅಧ್ಯಕ್ಷ ಡಾ.ಸಾಗರ್ ಹೇಳಿದರು. ಪಟ್ಟಣದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ರೋಟರಿ ಕಬ್ಲ್ ಆಫ್ ಗ್ರೀನ್ ವೇ, ಶಾಸ್ತ ಕಣ್ಣಿನ ಆಸ್ಪತ್ರೆ, ಅರ್ನಾಡೆಂಟಲ್ ಕೇರ್, ಪೂರ್ಣಟ್ರಸ್ಟ್, ಸುನಿತಾ ಕ್ಲಿನಿಕ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂವಿಧಾನ ರಚಿಸಿರುವದರಿಂದ ಎಲ್ಲಾ ವರ್ಗದ ಜನರಿಗೆ ಕಾನೂನಿನಲ್ಲಿ ಸಮಾನತೆ, ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ ಎಂದರು. ನಿವೃತ ಉಪನೋಂದಣಾಧಿಕಾರಿ ರುದ್ರಯ್ಯ ಮಾತನಾಡಿ, ಇಂದಿನ ಕಾಲಮಾನದಲ್ಲಿ ಜನರು ಕಾನೂನಿಗೆ ಹೆದರುವಷ್ಟು ಯಾವ ದೇವರಿಗೂ ಹೆದರುವುದಿಲ್ಲ ಏಕೆಂದರೆ ಕಾನೂನಿಗೆ ಅಂಥ ಶಕ್ತಿ ಇದೆ ಎಂದರು. ನ್ಯಾಯಾಲಯದಲ್ಲಿ ಬಡವ ಶ್ರೀಮಂತ ಎಂಬ ಭೇದ ಭಾವ ಇಲ್ಲದೆ ತಪ್ಪು ಮಾಡಿದವರು ಯಾರೆ ಆಗಲಿ ಅವರಿಗೆ ಶಿಕ್ಷೆಯಾಗುತ್ತಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರೋಟರಿ ಕಬ್ಲ್ ಆಪ್ ಗ್ರೀನ್ ವೇ ಸಂಸ್ಥೆ ವತಿಯಿಂದ ಯರಗಂಬಳ್ಳಿ ಅಂಗನವಾಡಿ ಕೇಂದ್ರಕ್ಕೆ ಪಿಠೋಪಕರಣ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಸ್ತ್ರೀ ರೋಗ ತಜ್ಞ ಸಚಿನ್, ನೇತ್ರ ತಜ್ಞ ನಟರಾಜು, ದಂತ ವೈದ್ಯ ಡಾ.ಸಾಗರ್ 200ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ತಪಾಸಣೆಗೆ ನಡೆಸಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಎಸ್.ಚಂದ್ರಶೇಖರ್, ರೋಟರಿ ಕಬ್ಲ್ ಆಫ್ ಗ್ರೀನ್ ವೇ ಸಂಸ್ಥೆ ಕಾರ್ಯದರ್ಶಿ ಬಂಗಾರು, ಪುಟ್ಟರಾಜು,ಜಯಣ್ಣ, ವೈ.ಡಿ.ಸೂರ್ಯನಾರಾಯಣ್, ಪ್ರಕಾಶ್, ನಿರಂಜನ್‌ಕುಮಾರ್, ಶಿವಕುಮಾರ್, ವೈ.ಟಿ.ಪರಮೇಶ್ ಸೇರಿದಂತೆ ಇತರರು ಹಾಜರಿದ್ದರು.