ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಎಸ್ಸೆಸ್ಸೆಲ್ಸಿ ಪರೀಕ್ಷೆ ಮರುಮೌಲ್ಯ ಮಾಪನದಲ್ಲಿ ಪಟ್ಟಣದ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ವಿದ್ಯಾರ್ಥಿನಿ ಎಸ್.ಖುಷಿ ತಾಲೂಕಿಗೆ ಪ್ರಥಮ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಪರೀಕ್ಷೆಯಲ್ಲಿ 619 ಅಂಕ ಪಡೆದಿದ್ದ ಎಸ್.ಖುಷಿ ಮರು ಮೌಲ್ಯಮಾಪನದಲ್ಲಿ ಹಿಂದಿ ವಿಷಯದಲ್ಲಿ ಮೂರು ಅಂಕ ಕನ್ನಡದಲ್ಲಿ 125, ಇಂಗ್ಲಿಷ್‌ನಲ್ಲಿ 98, ಹಿಂದಿಯಲ್ಲಿ 99, ಗಣಿತದಲ್ಲಿ 100, ವಿಜ್ಞಾನದಲ್ಲಿ 100 ಹಾಗೂ ಸಮಾಜದಲ್ಲಿ 100 ಸೇರಿ ಒಟ್ಟು 622 (ಶೇ.99.52) ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಮತ್ತು ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳಿರಯ್ಯ, ವಿದ್ಯಾ ಸಂಸ್ಥೆ ಅಧ್ಯಕ್ಷ ಕಸ್ತೂರಿ ಅನಂತೇಗೌಡ, ಮುಖ್ಯಶಿಕ್ಷಕ ಎಚ್. ಆರ್.ಅನಂತೇಗೌಡ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.6 ಹೆಚ್ಚುವರಿ ಅಂಕ ಪಡೆದ ಹೆಚ್.ಎಸ್.ರೇಷ್ಮಾ ಜಿಲ್ಲೆಗೆ ತೃತೀಯ ಸ್ಥಾನ
ಹಲಗೂರು:2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಜೆ.ಜೆ.ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ ಎಚ್.ಎನ್.ರೇಷ್ಮಾ ಕನ್ನಡ ವಿಷಯದಲ್ಲಿ ಮೂರು ಮತ್ತು ವಿಜ್ಞಾನ ವಿಷಯದಲ್ಲಿ ಮೂರು ಅಂಕ ಸೇರಿ ಒಟ್ಟು ಆರು ಹೆಚ್ಚು ಅಂಕ ಪಡೆದು 621/625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 5ನೇ ಹಾಗೂ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.ಫಲಿತಾಂಶ ಬಂದ ನಂತರ ಎಚ್.ಎನ್.ರೇಷ್ಮಾ ನನಗೆ 620ಕ್ಕಿಂತ ಹೆಚ್ಚು ಅಂಕಗಳು ಬರಬೇಕಾಗಿತ್ತು ಎಂದು ತಮ್ಮ ಅಭಿಪ್ರಾಯವನ್ನು ಮುಖ್ಯ ಶಿಕ್ಷಕಿ ಹಾಗೂ ಅವರ ಪೋಷಕರಿಗೆ ತಿಳಿಸಿದ್ದರು.ಇವರ ಅಭಿಪ್ರಾಯದ ಮೇರೆಗೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ಅದರಲ್ಲಿ ಆರು ಅಂಕಗಳು ಹೆಚ್ಚುವರಿ ಪಡೆದಿರುವುದಕ್ಕೆ ವಿದ್ಯಾರ್ಥಿ ರೇಷ್ಮಾ ಅವರನ್ನು ಶಾಲಾ ಮುಖ್ಯ ಶಿಕ್ಷಕಿ ಲಲಿತಾಂಬ ಸೋಮಶೇಖರ್ ಮತ್ತು ಶಾಲೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದೆ.