ಸಾರಾಂಶ
ಬೆಂಗಳೂರಿನಲ್ಲಿ ಮಂಗಳವಾರ ಟೆಕ್ ಸಮ್ಮಿಟ್-2025ರಲ್ಲಿ ದಾವಣಗೆರೆ ಮಹಾನಗರದಲ್ಲಿ ಸಾಫ್ಟ್‌ವೇರ್ ಕಂಪನಿಗಳನ್ನು ಸ್ಥಾಪಿಸುವಂತೆ ದೇಶ, ವಿದೇಶಗಳ ಸಾಫ್ಟ್‌ವೇರ್ ಕಂಪನಿಗಳು, ಕಂಪನಿಗಳ ಪ್ರತಿನಿಧಿಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮುಕ್ತವಾಗಿ ಸ್ವಾಗತಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಂಗಳೂರಿನಲ್ಲಿ ಮಂಗಳವಾರ ಟೆಕ್ ಸಮ್ಮಿಟ್-2025ರಲ್ಲಿ ದಾವಣಗೆರೆ ಮಹಾನಗರದಲ್ಲಿ ಸಾಫ್ಟ್‌ವೇರ್ ಕಂಪನಿಗಳನ್ನು ಸ್ಥಾಪಿಸುವಂತೆ ದೇಶ, ವಿದೇಶಗಳ ಸಾಫ್ಟ್‌ವೇರ್ ಕಂಪನಿಗಳು, ಕಂಪನಿಗಳ ಪ್ರತಿನಿಧಿಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮುಕ್ತವಾಗಿ ಸ್ವಾಗತಿಸಿದರು.ಟೆಕ್ ಸಮ್ಮಿಟ್-2025ನಲ್ಲಿ ದಾವಣಗೆರೆ ಮಹಾನಗರದಲ್ಲಿ ದಾವಣಗೆರೆ ವಿಜ್ಹನ್ ಗ್ರೂಪ್‌ನಿಂದ ಸಾಫ್ಟ್‌ವೇರ್ ಕಂಪನಿಗಳನ್ನು ಆಕರ್ಷಿಸಲು ವಿಶೇಷ ಮಳಿಗೆಯೊಂದನ್ನು ಸ್ಥಾಪಿಸಿದ್ದು, ಅಲ್ಲಿ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಜೊತೆಗೂ ಸಾಫ್ಟ್‌ವೇರ್ ಪಾರ್ಕ್ ಅನ್ನು ನಮ್ಮ ದಾವಣಗೆರೆಯಲ್ಲಿ ಸ್ಥಾಪಿಸಲು, ಕಂಪನಿಗಳನ್ನು ಆಹ್ವಾನಿಸುವ ಬಗ್ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚರ್ಚಿಸಿದರು.
ದಾವಣಗೆರೆಯಲ್ಲಿ ನಡೆದ ಟೆಕ್ ರೈಸ್ ಕಾರ್ಯಕ್ರಮದ ಬಗ್ಗೆ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ರಿಂದ ಮಾಹಿತಿ ಪಡೆದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಮಧ್ಯ ಕರ್ನಾಟಕದಲ್ಲಿ ಐಟಿ ಬಿಟಿ ಪಾರ್ಕ್ ಸ್ಥಾಪನೆಯ ಅಗತ್ಯತೆ, ಇಲ್ಲಿ ಕಂಪನಿಗಳು ತಮ್ಮ ಸಾಫ್ಟ್‌ವೇರ್ ಕಂಪನಿಗಳನ್ನು ಸ್ಥಾಪಿಸಲು ಸಿಗುವ ಅನುಕೂಲ, ನೆರವಿನ ಬಗ್ಗೆ ಹಾಗೂ ಕಂಪನಿಗಳ ಸ್ಥಾಪಿಸಲು ನೀಡುವ ಸೌಕರ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.ದೇಶ, ವಿದೇಶಗಳ ಕಂಪನಿಗಳು, ಅವುಗಳ ಪ್ರತಿನಿಧಿಗಳು, ಕಂಪನಿಗಳ ಆಡಳಿತ ವರ್ಗದವರ ಜತೆಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಬಿಐಇಟಿ ಕಾಲೇಜು ಪ್ರಾಚಾರ್ಯ ಡಾ.ಎಚ್.ಬಿ.ಅರವಿಂದ್, ದಾವಣಗೆರೆ ವಿಜ್ಹನ್ ಟೀಂ ಸದಸ್ಯರಾದ ಕಕ್ಕರಗೊಳ್ಳ ವೀರೇಶ ಪಟೇಲ್, ಡಾ.ಎನ್.ಸಿ.ಪ್ರಶಾಂತ, ಸತೀಶಕುಮಾರ, ಡಾ.ಎಂ.ಟಿ.ವಿನಯ್, ಡಾ.ಫನಿಕೃಷ್ಣ ಇತರರು ಇದ್ದರು.
)
)
;Resize=(128,128))
;Resize=(128,128))
;Resize=(128,128))
;Resize=(128,128))