ಸಾರಾಂಶ
- ಛಾಯಾಗ್ರಾಹಕರ ರಾಜ್ಯ ಸಮಾವೇಶದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಭರವಸೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕಟ್ಟಡ ಮತ್ತು ಕೃಷಿ ಕಾರ್ಮಿಕರು ಸೇರಿದಂತೆ ಹಲವಾರು ವಿಭಾಗದ ಕಾರ್ಮಿಕರಿಗೆ ಹಲವು ಯೋಜನೆಗಳನ್ನು ನಮ್ಮ ಸರ್ಕಾರ ನೀಡಿದೆ. ಛಾಯಾಗ್ರಾಹಕರು ತಮಗೆ ಬೇಕಿರುವ ಮಂಡಳಿ, ಸಮುದಾಯ ಭವನ ಸೇರಿದಂತೆ ಇನ್ನಿತರೆ ಬೇಡಿಕೆಗಳ ಮನವಿ ನೀಡಿದರೆ ಸರ್ಕಾರ ಗಮನ ಸೆಳೆಯುತ್ತೇನೆ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕರ್ನಾಟಕ ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್ ಅಸೋಸಿಯೇಷನ್ ರಾಜ್ಯ, ಜಿಲ್ಲಾ, ತಾಲೂಕು ಸಮಿತಿಯಿಂದ 186ನೇ ವಿಶ್ವ ಛಾಯಾಗ್ರಹಣ ದಿನ ಅಂಗವಾಗಿ ಛಾಯಾಗ್ರಾಹಕರ ರಾಜ್ಯ ಸಮಾವೇಶ, ಸಂಸ್ಥೆಯ 13ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವರ್ಷದಲ್ಲಿ ಕೆಲವೇ ತಿಂಗಳು ಕೆಲಸ ಲಭ್ಯವಿರುವ ಕಾರಣಕ್ಕೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಛಾಯಾಗ್ರಾಹಕರ ಹಿತರಕ್ಷಣೆಗೆ ನಿಗಮವೊಂದನ್ನು ಸ್ಥಾಪಿಸುವ ಅಗತ್ಯವಿದೆ. ಕಾರ್ಮಿಕ ಸಚಿವರಾಗಿ ಸಂತೋಷ್ ಲಾಡ್ ಬಂದ ತರುವಾಯ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಎಲ್ಲ ವರ್ಗದ ಕಾರ್ಮಿಕರನ್ನು ಮಂಡಳಿಗೆ ಸೇರಿಸಿ ಅವರಿಗೂ ಸೌಲಭ್ಯ ಸಿಗುವಂತೆ ಮಾಡಿದ್ದಾರೆ. ಅಪಘಾತದ ಸಾವಿಗೆ ₹1 ಲಕ್ಷ, ಸಹಜ ಸಾವಿಗೆ ₹25 ಸಾವಿರ ಕೊಡುವ ಯೋಜನೆಯೂ ಜಾರಿಯಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಛಾಯಾಗ್ರಹಣ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ದಾವಣಗೆರೆಯ ವಿ.ಆರ್. ಅರುಣಕುಮಾರ, ಮುಸ್ತಾಕ್ ಅಹಮ್ಮದ್, ಎಸ್.ರಂಗಸ್ವಾಮಿ, ಎಂ.ರಾಘವೇಂದ್ರ, ಎಸ್.ವಿ.ವೀರೇಶ, ಪಿ.ಆರ್.ಪ್ರಭಾಕರ, ಪಿ.ಮಧು, ಪಿ.ಎಸ್.ಯೋಗೇಶ, ಮಹಿಳಾ ವಿಭಾಗದಿಂದ ಎಂ.ಚನ್ನಮ್ಮ, ಜ್ಯೋತಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಯನ್ನು ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಕರುನಾಡ ಸಮರ ಸೇನೆ ರಾಜ್ಯಾಧ್ಯಕ್ಷ ಐಗೂರು ಬಿ.ಕೆ.ಸುರೇಶ, ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ, ಶ್ರೀ ತರಳಬಾಳು ಜ್ಯುಯಲರ್ಸ್ ಮಾಲೀಕ ಬಿ.ಆರ್.ಮಂಜುನಾಥ, ಸಮಾಜ ಸೇವಕರಾದ ಎಂ.ಜಿ.ಶ್ರೀಕಾಂತ, ಗುಮ್ಮನೂರು ಶ್ರೀನಿವಾಸ, ಸಹಾಯಕ ಪ್ರಾಧ್ಯಾಪಕ ತಿಮ್ಮೇನಹಳ್ಳಿ ಎಚ್.ವಿ. ಹನುಮಂತು ಅವರಿಗೆ ಪ್ರದಾನ ಮಾಡಲಾಯಿತು.ಮಾಧ್ಯಮ ಸಲಹೆಗಾರ ಮಾಲತೇಶ್ ಅರಸ್ ಹರ್ತಿಕೋಟೆ ಪ್ರಾಸ್ತಾವಿಕ ಮಾತನಾಡಿದರು. ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ದಿವ್ಯ ಸಾನ್ನಿಧ್ಯ ಮತ್ತು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮನು ಎಂ. ದೇವನಗರಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಸಂಘದ ಗೌರವ ಸಲಹೆಗಾರ ಖಾಜಾಪೀರ್, ಸಂಘದ ಜಿಲ್ಲಾಧ್ಯಕ್ಷ ಬಿ.ಮಂಜುನಾಥ್, ಆರ್.ಎಸ್.ವಿನೋದ್ ಕುಮಾರ್, ಕೊಂಡಜ್ಜಿ ರಾಜಶೇಖರ, ಡಿ.ರಂಗನಾಥ, ಸುಮಾ, ಎಚ್.ಎಫ್. ಸಂಜಯ್, ರಾಮು, ದೇವೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
- - --17ಕೆಡಿವಿಜಿ35: ಛಾಯಾಗ್ರಾಹಕರ ರಾಜ್ಯ ಸಮಾವೇಶವನ್ನು ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು.