ಬೆಂಗಳೂರು ಸೇರಿದಂತೆ ಇತರೆ ಹೊರ ರಾಜ್ಯಗಳಿಂದ ಭೂಮಾಪಿಯಾದವರು ಬಂದು ಈ ಭಾಗದಲ್ಲಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ ಅವರಿಗೆ ಕೆಲ ಅಧಿಕಾರಿಗಳು ಸಾತ್ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಲೋಕಾಯುಕ್ತ ಅಧಿಕಾರಿಗಳು ತಾಲೂಕು ಕಚೇರಿಗೆ ಬಂದು ಭೂ ಮಾಫಿಯ ಕುರಿತು ಪರಿಶೀಲನೆ ಮಾಡಿದಾಗ ಒಂದೇ ಒಂದೂ ಫೈಲ್ ಸಹ ಸಿಗುದಂತೆ ಮುಚ್ಚಿಟ್ಟಿದ್ದರು.
ಕನ್ನಡಪ್ರಭ ವಾರ್ತೆ ಮುಳಬಾಗಿಲು
ದೇವರಾಯ ಸಮುದ್ರ ಭಾಗದಲ್ಲಿ ೭೦೦ ಎಕರೆ ಕೈಗಾರಿಕೆ ಅಭಿವೃದ್ಧಿಪಡಿಸಿ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿ ಮಾಡಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರದ ಮಟ್ಟದಲ್ಲಿ ಮಾಡಲಾಗುತ್ತಿದೆ. ಇದರಿಂದ ತಾಲೂಕು ರಾಜ್ಯದಲ್ಲೇ ಮಾದರಿ ಆಗಲಿದೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು.ರಾಷ್ಟ್ರೀಯ ಹೆದ್ದಾರಿ ೭೫ ರ ದೇವರಾಯ ಸಮುದ್ರ ಗೇಟ್ ಬಳಿ ನಾಲ್ಕುವರೆ ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಲಿರುವ ಅಂಬೇಡ್ಕರ್ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಿಸಿ, ೨೦೨೮ರ ಏ.೧೪ರಂದು ತಾವೇ ಅದರ ಉದ್ಘಾಟನೆ ನೆರವೇರಿಸುವುದಾಗಿ ತಿಳಿಸಿದರು.ಶೀಘ್ರದಲ್ಲೇ ಹಾಸ್ಟೆಲ್ ಉದ್ಘಾಟನೆ
ಈ ಭಾಗದಲ್ಲಿ ಎಂಟು ಕಾಲು ಕೋಟಿ ರು.ಗಳ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಹಾಸ್ಟೆಲ್ ಕಟ್ಟಡವನ್ನು ನಿರ್ಮಿಸಲಾಗಿದ್ದು ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುವುದು ಎಂದರಲ್ಲದೆ ನಾನು ಎಂಎಲ್‌ಎ ಆಗಬೇಕು ಅಂತ ಕನಸು ಕೂಡ ಕಂಡಿರ್ಲಿಲ್ಲ ತಾಲೂಕಿನ ಜನತೆ ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಶಾಸಕರನ್ನಾಗಿ ಮಾಡಿರುವುದಕ್ಕೆ ಈ ತಾಲೂಕಿನ ಜನತೆಯ ಋಣ ತೀರಿಸಲು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಜೊತೆಗೆ ಶಾಶ್ವತ ಕಾಮಗಾರಿಗಳನ್ನು ಮಾಡಿಸುತ್ತೇನೆ ಎಂದು ತಿಳಿಸಿದರು.ಭೂಮಾಫಿಯಾ ಹಾವಳಿ
ಬೆಂಗಳೂರು ಸೇರಿದಂತೆ ಇತರೆ ಹೊರ ರಾಜ್ಯಗಳಿಂದ ಭೂಮಾಪಿಯಾದವರು ಬಂದು ಈ ಭಾಗದಲ್ಲಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ ಅವರಿಗೆ ಕೆಲ ಅಧಿಕಾರಿಗಳು ಸಾತ್ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಲೋಕಾಯುಕ್ತ ಅಧಿಕಾರಿಗಳು ತಾಲೂಕು ಕಚೇರಿಗೆ ಬಂದು ಭೂ ಮಾಫಿಯ ಕುರಿತು ಪರಿಶೀಲನೆ ಮಾಡಿದಾಗ ಒಂದೇ ಒಂದು ಫೈಲ್ ಸಹ ಸಿಗುದಂತೆ ಮುಚ್ಚಿಟ್ಟಿದ್ದಾರೆಂದು ದೂರಿದರಲ್ಲದೆ ಇಂಥದಕ್ಕೆಲ್ಲ ತಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.ಅಂಬೇಡ್ಕರ್ ಭವನ ಹೈಟೆಕ್ ನಿರ್ಮಾಣಕ್ಕೆ ನನಗೂ ಮತ್ತು ಬಂಗಾರಪೇಟೆ ಶಾಸಕ ಎಸ್‌ಎನ್ ನಾರಾಯಣಸ್ವಾಮಿ ರವರಿಗೆ ಪೈಪೋಟಿ ಬಿದ್ದಿದೆ ಎಂದರಲ್ಲದೆ ಬಂಗಾರಪೇಟೆಗಿಂತ ಮುಳಬಾಗಿನಲ್ಲಿ ಎಲ್ಲ ಸೌಲಭ್ಯಗಳು ಇರುವ ಹೈಟೆಕ್ ಅಂಬೇಡ್ಕರ್ ಭವನ ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು.ಎಸ್ಸಿ ವಾರ್ಡ್ ಸಂಖ್ಯೆ 7ಕ್ಕೆ ಹೆಚ್ಚಿಸಿ
ನಗರದಲ್ಲಿ ಎಸ್.ಸಿ ಜನಸಂಖ್ಯೆಗೆ ಅನುಗುಣವಾಗಿ ನಗರಸಭೆ ವಾರ್ಡ್ ಗಳನ್ನು ರಚನೆ ಮಾಡಿಲ್ಲ. ಕೇವಲ ಮೂರು ವಾರ್ಡ್ ಗಳಿಗೆ ಎಸ್ಸಿ ಮೀಸಲಾತಿ ನೀಡಿರುವುದು ಸರಿಯಲ್ಲ ಸರ್ಕಾರದ ಮಟ್ಟದಲ್ಲಿ ಪ್ರಶ್ನೆ ಮಾಡಿ ಎಸ್ಸಿಗಳಿಗೆ ಏಳು ವಾರ್ಡ್‌ಳನ್ನು ಮೀಸಲು ಮಾಡಿಸಿದ್ದೇನೆ ಎಂದು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷ ಕುಸುವು ಎಮ್ ವೆಂಕಟರಮಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುಪತಿ ರೆಡ್ಡಿ, ಡಾ ಸಿ ಎನ್ ಪ್ರಕಾಶ್, ಕೋಲಾರ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಬಂಡಹಳ್ಳಿ ಲಕ್ಷ್ಮೀನಾರಾಯಣ್, ಡೆಕನ್ ಶ್ರೀನಿವಾಸ್, ಗೊಲ್ಲಹಳ್ಳಿ ಜಗದೀಶ್ ಮತ್ತಿತರರು.