ಪೌರಕಾರ್ಮಿಕರಿಗೆ ಕಾಯಂ ಭಾಗ್ಯ: ವಿಜಯೋತ್ಸವ

| Published : Feb 18 2024, 01:31 AM IST

ಸಾರಾಂಶ

. ಇದೀಗ ಸಿದ್ದರಾಮಯ್ಯ ಸರ್ಕಾರ ಕಾಯಂ ಮಾಡಿಕೊಳ್ಳಲು ನಿರ್ಧರಿಸಿದ್ದು, ಸಂತಸಕರ ಎಂದು ಪೌರಕಾರ್ಮಿಕರು ಸಂತಸ ವ್ಯಕ್ತಪಡಿಸಿದರು

ಹುಬ್ಬಳ್ಳಿ: ನೇರ ವೇತನ ಪಾವತಿಯಡಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದಕ್ಕೆ ನಗರದಲ್ಲಿ ಶನಿವಾರ ಪೌರಕಾರ್ಮಿಕರು ವಿಜಯೋತ್ಸವ ಮಾಡಿದರು.

ಇಲ್ಲಿನ ಅಂಬೇಡ್ಕರ್‌ ಸರ್ಕಲ್‌ನಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

2017ರಲ್ಲಿ ನೇರ ವೇತನ ಪಾವತಿಯಡಿ ಈ ಎಲ್ಲ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಸಿದ್ದರಾಮಯ್ಯ ಸರ್ಕಾರ ಕಾಯಂ ಮಾಡಿಕೊಳ್ಳಲು ನಿರ್ಧರಿಸಿದ್ದು, ಸಂತಸಕರ ಎಂದು ಸಂತಸ ವ್ಯಕ್ತಪಡಿಸಿದರು. 3 ದಶಕಗಳ ಹೋರಾಟಕ್ಕೆ ಈಗ ಜಯಸಿಕ್ಕಂತಾಗಿದೆ ಎಂದು ತಿಳಿಸಿದರು.

ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಡಾ. ವಿಜಯ ಎಂ. ಗುಂಟ್ರಾಳ, ಗಂಗಮ್ಮ ಸಿದ್ರಾಮಪುರ, ಅನಿತಾ ಎನಗೊಂಡ, ಪ್ರೇಮಾ ಕಣೆಕಲ್, ಕನಕಪ್ಪ ಕೊಟಬಾಗಿ, ದತ್ತಪ್ಪ ಆಪುಸಪೇಟ, ನಿಂಗಪ್ಪ ರಾಮಯ್ಯನವರ, ಸೋಮು ಮೊರಬದ, ಶರಣಪ್ಪ ಅಮರಾವತಿ, ಕಿರಣಕುಮಾರ ಸೋಮರಡ್ಡಿ ಸೇರಿದಂತೆ ಹಲವರಿದ್ದರು.