ಸಾರಾಂಶ
ಕೊಟ್ಟಮುಡಿಯ ಮರ್ಕಜುಲ್ ಶಾಲೆಯಲ್ಲಿ ಮರ್ಕಜುಲ್ ಹಿದಾಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವತಿಯಿಂದ ಗೈಡಿಂಗ್ ಗ್ರೇಸ್ ಎಂಬ ಶೀರ್ಷಿಕೆಯಲ್ಲಿ ನಡೆದ ಪೋಷಕರ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಶಾಲಾ ಪರಿಸರ ಹಾಗೂ ವಿದ್ಯಾರ್ಥಿಗಳ ಸಾಧನೆ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಪ್ರಗತಿಯನ್ನು ಮೌಲ್ಯಮಾಪನ ಮಾಡುವಂತಹದ್ದು ಬಹುಮುಖ್ಯವಾಗಿದೆ ಎಂದು ಮರ್ಕಜುಲ್ ಗ್ಲೋಬಲ್ ಕೌನ್ಸಿಲ್ ನ ಸಹಾಯಕ ನಿರ್ದೇಶಕ ಮರ್ಜೂಕ್ ಸಹದಿ ಹೇಳಿದರು.ಇಲ್ಲಿಗೆ ಸಮೀಪದ ಕೊಟ್ಟಮುಡಿಯ ಮರ್ಕಜುಲ್ ಶಾಲೆಯಲ್ಲಿ ಮರ್ಕಜುಲ್ ಹಿದಾಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವತಿಯಿಂದ ಗೈಡಿಂಗ್ ಗ್ರೇಸ್ ಎಂಬ ಶೀರ್ಷಿಕೆಯಲ್ಲಿ ನಡೆದ ಪೋಷಕರ ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಶಿಸ್ತು ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರವೂ ಕೂಡ ಪ್ರಮುಖವಾದದಾಗಿದೆ ಮಕ್ಕಳ ಮಾನವ ವೈಜ್ಞಾನಿಕ ಬೆಳವಣಿಗೆಗೆ ಪೋಷಕರು ಹಾಗೂ ಶಿಕ್ಷಕರು ಸಮಾನ ಪಾತ್ರ ವಹಿಸಬೇಕು ಎಂದರು. ಶೈಕ್ಷಣಿಕ ನಿರ್ದೇಶಕ ಅಬ್ದುಲ್ ಖಾದರ್ ಮಾತನಾಡಿ, ನವೀನ ಶೈಕ್ಷಣಿಕ ತಂತ್ರಗಳು ಮೂಲಕ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಕೈಗೊಳ್ಳುವ ಕಾರ್ಯಕ್ರಮಗಳಲ್ಲಿ ಪೋಷಕರ ಸಹಕಾರ ಅಗತ್ಯ ಎಂದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾರ್ಕಸ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಮಹಮ್ಮದ್ ಹಾಜಿ ಕುಂಜಿಲ ವಹಿಸಿದ್ದರು. ಸಭೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಾಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು .
ಈ ಸಂದರ್ಭ ಉಪ ಅಧ್ಯಕ್ಷ ಅಹಮದ್ ಹಾಜಿ, ಹಮೀದ್ ಹಾಜಿ, ಮೊಯಿ ದಿನ್ ಕುಟ್ಟಿ ಹಾಜಿ ಕೊಳಕೇರಿ, ಅಬ್ದು ಹಾಜಿ, ಯೂಸುಫ್ ಹಾಜಿ, ಹುಸೇನ್ ನೂರಾನಿ, ಅಶ್ರಫ್ ಸಖಾಫಿ ಹಾಗೂ ಮರ್ಕಜುಲ್ ಹಿದಾಯ ಅಧೀನದಲ್ಲಿರುವ ವಿವಿಧ ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.