ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ವಿ.ವಿ.ಪುರಂನ ಡಾ.ಎಚ್.ಎನ್.ಕಲಾಭವನ ಮುಂಭಾಗ 10 ವರ್ಷಗಳ ಹಿಂದೆ ಅರಂಭಿಸಿದ್ದ ಕನ್ನಡ ಭವನ ಕಾಮಗಾರಿ ಅಪೂರ್ಣವಾಗಿದೆ. ನಿರ್ಮಾಣ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ವಹಿಸಿಕೊಂಡಿತ್ತು. ಸುಮಾರು 20ಲಕ್ಷ ರು.ಗಳ ವೆಚ್ಚದಲ್ಲಿ ನೆಲ ಅಂತಸ್ಥಿನ ಮೇಲ್ಚಾವಣಿ ನಿರ್ಮಾಣ ಮುಗಿದ ಬಳಿಕ ಕಾಮಾಗಾರಿಯನ್ನು ಕಾರಣಂತರಗಳಿಂದ ನಿಲ್ಲಿಸಲಾಗಿದೆ. ಈಗ ಅನಾಥವಾಗಿರುವ ಕಟ್ಟಡ ಜೂಜುಕೋರರ, ಕುಡುಕರ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.ಕನ್ನಡ ಕಾರ್ಯಕ್ರಮಗಳಿಗಾಗಿ ಅನುಕೂಲ ಕಲ್ಪಿಸಲು ಭವನ ನಿರ್ಮಾಣ ಆರಂಭಿಸಲಾಗಿತ್ತು. ಈ ಭವನದ ಮುಭಾಗದಲ್ಲಿ ಬಡಾವಣೆಯ ತ್ಯಾಜ್ಯವನ್ನೆಲ್ಲ ತಂದು ಸುರಿಯುವುದರಿಂದ ಗಬ್ಬು ನಾರುತ್ತಿದ್ದು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಡಾಡುವ ಪರಿಸ್ಥಿತಿ ಉಂಟಾಗಿದೆ. ಮತ್ತು ಕಟ್ಟಡದಲ್ಲಿ ಮತ್ತು ಸುತ್ತಲೂ ಜಾಲಿಗಿಡಗಳು, ಗಿಡ-ಗಂಟುಗಳು ಬೆಳೆದು ಪೊದೆಗಳಾಗಿವೆ. ಮೇಲ್ಚಾವಣಿಯಲ್ಲಿ ಮಳೆ ನೀರು ನಿಂತು ಪಾಚಿಕಟ್ಟಿಕೊಂಡಿದೆ. ಕಟ್ಟಡದಲ್ಲಿ ಅಲ್ಲಲ್ಲಿ ಸೀಮೆಂಟ್ ಉದುರುತ್ತಿದೆ. ಅನೈತಿಕ ಚಟುವಟಿಕೆಗಳ ತಾಣ
ಸಂಜೆ ಯಾಗುತ್ತಿದ್ದಂತ ಕಟ್ಟಡ ಮದ್ಯಪ್ರಿಯರು ಅಡ್ಡೆಯಾಗುತ್ತದೆ. ಕುಡಿದು ಅಲ್ಲೇ ಬಾಟಲಿಗಳನ್ನು ಎಸೆಯುತ್ತಾರೆ, ಮಲ-ಮೂತ್ರ ವಿಸರ್ಜನೆಯನ್ನೂ ಅಲಲ್ಲಿಯೇ ಮಾಡುತ್ತಿದ್ದ ಗಬ್ಬುನಾರುತ್ತಿದೆ. ಅಲ್ಲದೆ ಜೂಜುಕೋರರು ಜೂಜಾಡಲು ಿದೇ ಸ್ಥಳವನ್ನೇ ಬಳಸಿಕೊಳ್ಳುತ್ತಿದ್ದಾರೆ. ಕೆಲ ಅನಾಥರು ಖಾಲಿ ಇರುವ ಜಾಗವನ್ನೇ ಮನೆಯನ್ನಾಗಿಸಿ ಕೊಂಡು ವಾಸಿಸುತ್ತಿದ್ದಾರೆ. ದಿನನಿತ್ಯ ಇಂತಹ ಅಕ್ರಮ ಚಟುವಟಿಕೆಗಳಿ ಇಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ಮತ್ತು ಅಕ್ಕ-ಪಕ್ಕದ ಮನೆಯವರಿಗೆ ಕಿರಿಕಿರಿ ಉಂಟುಮಾಡುತ್ತಿದೆ.ಪಕ್ಕದಲ್ಲಿದೆ ಬಾಲಕಿಯರ ಹಾಸ್ಟೆಲ್
ಕೆಲ ವರ್ಷಗಳು ಕಳೆದರೂ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿಲ್ಲ. ಕನ್ನಡ ಭವನವು ಹಾಳು ಕೊಂಪೆಯಾಗಿದೆ. ಈ ಭವನದ ಪಕ್ಕದಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯವಿದೆ. ಭವನ ಕುಡುಕರ ಅಡ್ಡೆಯಾಗಿರುವುದರಿಂದ ಹಾಸ್ಟೆಲ್‌ನಲ್ಲಿ ಬಾಲಕಿಯರು ಭಯದಲ್ಲೇ ಇರುವಂತಾಗಿದೆ. ಏನಾದರೂ ಅಪಾಯ ವಾಗುವುದಕ್ಕೂ ಮುನ್ನವೆ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಿ ಅನುಕೂಲ ಮಾಡಿಕೊಡಬೇಕೆಂದು ನೆರೆಹೋರೆ ಮನೆಯವರು ಒತ್ತಾಯಿಸಿದ್ದಾರೆ.ಕೆಲವು ದಿನಗಳ ಹಿಂದೆ ನಡೆದ ಕಾರ್ಯಕ್ರಮವೋಮದರಲ್ಲಿ ಶಾಸಕ ಕೆ.ಹೆಚ್. ಪುಟ್ಟಸ್ವಾಮಿಗೌಡರು ಸುಸಜ್ಜಿತ ಕನ್ನಡ ಭವನ ನಿರ್ಮಾಣಕ್ಕೆ ಮತ್ತು ವ್ಯವಸ್ಥಿತವಾದ ಗ್ರಂಥಾಲಯವನ್ನು ನಿರ್ಮಿಸಲು 40 ಲಕ್ಷ ರೂಗಳ ಅನುದಾನ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದ್ದು, ಅದು ಅನುಷ್ಠಾನಗೊಳ್ಳಬೇಕಿದೆ. ₹12 ಲಕ್ಷ ಅನುದಾನ ಬಿಡುಗಡೆಕಾಸಾಪಾ ಮಾಜಿ ಅಧ್ಯಕ್ಷ ನಂಜುಂಡಪ್ಪ ಮಾತನಾಡಿ, ಇತ್ತೀಚೆಗೆ ಜಿಲ್ಲಾಧಿಕಾರಿಗಳಿಂದ 12 ಲಕ್ಷ ರು.ಗಳ ಅನುದಾನವು ಬಿಡುಗಡೆಯಾಗಿದೆ. ಆ ಹಣದಲ್ಲಿ ಸಿಮೆಂಟ್ ಪ್ಲಾಸ್ಟಿಂಗ್, ಕಿಟಕಿ ಬಾಗಿಲುಗಳನ್ನು ಸರಿಪಿಡಿಸುವುದು ಮತ್ತು ಬಾಕಿ ಇರುವ ಕಾಮಗಾರಿಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.ಗಡಿಭಾಗದಲ್ಲಿ ಇಂತಹದ್ದೊಂದು ಭವನ ನಿರ್ಮಿಸಿ ಕನ್ನಡಪರ ಕಾರ್ಯಕ್ರಮಗಳು ಹಾಗೂ ಸಾಹಿತ್ಯ ಚಟುವಟಿಕೆನಡೆಸಲು ಉತ್ತೇಜನ ನೀಡಬೇಕು ಎಂಬ ಉದ್ದೇಶದಿಂದ ಪ್ರಾರಂಭವಾದ ಸಾಹಿತ್ಯಭವನದ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಕನ್ನಡಾಭಿಮಾನಿಗಳಲ್ಲಿ ನಿರಾಸೆಮೂಡಿಸಿದೆ. ಅಗತ್ಯ ಅನುದಾನ ಒದಗಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎದರಿಂದ ಗಡುನಾಡಿನಲ್ಲಿ ಕನ್ನಡದ ಹಿರಿಮೆಗೆ ಗರಿ ಮೂಡಲಿದೆ ಎಂಬುದು ಗಡಿನಾಡ ಕನ್ನಡಿಗರ ಅಭಿಲಾಷೆಯೂ ಹೌದು.