ಮನದಲ್ಲಿ ನೊಂದು ಕಣ್ಣೀರು ಹಾಕಿದರೂ ಶಾಪವಾಗಲಿದೆ: ಗುಣಶ್ರೀ

| Published : Dec 26 2024, 01:03 AM IST

ಮನದಲ್ಲಿ ನೊಂದು ಕಣ್ಣೀರು ಹಾಕಿದರೂ ಶಾಪವಾಗಲಿದೆ: ಗುಣಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಇಳಿ ವಯಸ್ಸಿನಲ್ಲಿ ಅವರಿಗೆ ಅಭಯ ನೀಡಿ ಪ್ರೀತಿ-ವಿಶ್ವಾಸದಿಂದ ಆರೈಕೆ ಮಾಡಿ ಶಾಂತಿ, ನೆಮ್ಮದಿಯ ಜೀವನ ನಡೆಸುವಂತೆ ಪ್ರೇರಣೆ ನೀಡುವುದೇ ವಾತ್ಸಲ್ಯ ಯೋಜನೆಯ ಉದ್ದೇಶ. ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ಸೌಲಭ್ಯಗಳನ್ನು ನೀಡಿ ಅವರನ್ನು ಅರ್ಥಿಕವಾಗಿ ಸಬಲೀಕರಣ ಮಾಡುವ ಮೂಲಕ ಸಂಸ್ಥೆ ಹಲವು ಬಗೆಯ ಸೌಲಭ್ಯಗಳು ನೀಡಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹಿರಿಯರು ಮಾತಿನ ಶಾಪ ಕೊಡಬೇಕಾಗಿಲ್ಲ. ಮನದಲ್ಲಿ ನೊಂದು ಕಣ್ಣೀರು ಹಾಕಿದರೂ ಅದು ಶಾಪವಾಗಿ ಪರಿಣಮಿಸುತ್ತದೆ ಎಂದು ಕಿಕ್ಕೇರಿ ಶ್ರೀಧರ್ಮಸ್ಥಳ ಸಂಸ್ಥೆ ಮೇಲ್ವಿಚಾರಕಿ ಗುಣಶ್ರೀ ಅಭಿಪ್ರಾಯಪಟ್ಟರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಸಬಾ ವಲಯದ ಕಾರ್ಯ ಕ್ಷೇತ್ರದ ನಾಟನಹಳ್ಳಿಯಲ್ಲಿ ಮಾಸಾಶನ ಫಲಾನುಭವಿಗೆ ವಾತ್ಸಲ್ಯ ಕಿಟ್ ವಿತರಿಸಿ ಮಾತನಾಡಿ, ಆಧುನಿಕ ಸಮಾಜದಲ್ಲಿ ನಿರ್ಗತಿಕರು, ರೋಗಿಗಳು, ವೃದ್ಧರನ್ನು ಕಡೆಗಣಿಸುವುದು ಸಾಮಾನ್ಯವಾಗಿದೆ ಎಂದರು.

ಇಳಿ ವಯಸ್ಸಿನಲ್ಲಿ ಅವರಿಗೆ ಅಭಯ ನೀಡಿ ಪ್ರೀತಿ-ವಿಶ್ವಾಸದಿಂದ ಆರೈಕೆ ಮಾಡಿ ಶಾಂತಿ, ನೆಮ್ಮದಿಯ ಜೀವನ ನಡೆಸುವಂತೆ ಪ್ರೇರಣೆ ನೀಡುವುದೇ ವಾತ್ಸಲ್ಯ ಯೋಜನೆಯ ಉದ್ದೇಶ. ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ಸೌಲಭ್ಯಗಳನ್ನು ನೀಡಿ ಅವರನ್ನು ಅರ್ಥಿಕವಾಗಿ ಸಬಲೀಕರಣ ಮಾಡುವ ಮೂಲಕ ಸಂಸ್ಥೆ ಹಲವು ಬಗೆಯ ಸೌಲಭ್ಯಗಳು ನೀಡಿದೆ ಎಂದರು.

ಇತ್ತೀಚೆಗೆ ರಾಜ್ಯಾದ್ಯಂತ ನಿರ್ಗತಿಕರನ್ನು ಗುರುತಿಸಿ ಅವರ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ. ಮಾಸಾಶನದೊಂದಿಗೆ ಪಾತ್ರೆ, ತಲೆ ದಿಂಬು, ಹೊಂದಿಕೆ ಸೇರಿದಂತೆ ಮೂಲ ಅವಶ್ಯಕ ವಸ್ತುಗಳನ್ನು ಒಳಗೊಂಡಿರುವ ವಾತ್ಸಲ್ಯ ಕಿಟ್ ವಿತರಿಸುವ ಮಹತ್ವದ ಕಾರ್ಯಕ್ರಮವನ್ನು ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದರು.

ಈ ವೇಳೆ ಜ್ಞಾನವಿಕಾಸ ಸಮನ್ವಯಾಧಿಕಾರಿ ಮಾದಲಾಂಬಿಕ ಸೇವಾ ಪ್ರತಿನಿಧಿಗಳಾದ ಪೂರ್ಣಿಮ ಸುನಿತ ನೇತ್ರಾವತಿ ಸೇರಿದಂತೆ ಉಪಸ್ಥಿತರಿದ್ದರು.