ಸಾರಾಂಶ
ಲಕ್ಷ್ಮೇಶ್ವರ ಸಮೀಪದ ಹೂವಿನ ಶಿಗ್ಲಿ ವಿರಕ್ತಮಠದಲ್ಲಿ ಬೇಸಿಗೆ ರಜೆಯಲ್ಲಿ ಜಂಗಮ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಶಿಬಿರ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಜರುಗಿತು.
ಲಕ್ಷ್ಮೇಶ್ವರ: ಸಮೀಪದ ಹೂವಿನ ಶಿಗ್ಲಿ ವಿರಕ್ತಮಠದಲ್ಲಿ ಬೇಸಿಗೆ ರಜೆಯಲ್ಲಿ ಜಂಗಮ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಶಿಬಿರ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಜರುಗಿತು.
ಈ ವೇಳೆ ವಿರಕ್ತ ಮಠದ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಸಂಸ್ಕಾರ ಅವಶ್ಯವಾಗಿ ಬೇಕು. ಮದುವೆ, ಮುಂಜಿ ಹಾಗೂ ಮರಣದ ಸಮಯಕ್ಕೆ ಜಂಗಮರು ಅವಶ್ಯವಾಗಿ ಬೇಕು. ಹಾಗಾಗಿ ಜಂಗಮರ ಮಕ್ಕಳಿಗೆ ಸಂಸ್ಕಾರ ಪೂಜೆ ಪುನಸ್ಕಾರದ ಅರಿವು ನೀಡಬೇಕಾಗಿದೆ. ಅದಕ್ಕಾಗಿ ಈ ಶಿಬಿರ ಆಯೋಜಿಸಲಾಗಿದೆ. ಪ್ರತಿ ವರ್ಷ ಬೇಸಿಗೆಯ ರಜೆಯನ್ನು ಹಾಳು ಮಾಡಿಕೊಳ್ಳಬಾರದು. ಇಂತಹ ಧಾರ್ಮಿಕ ಸಂಸ್ಕಾರ ನೀಡುವ ಶಿಬಿರಗಳು ಅವಶ್ಯವಾಗಿ ಬೇಕು. ಪ್ರತಿ ವರ್ಷ ನಮ್ಮ ಶ್ರೀಮಠದಲ್ಲಿ ಮಾಡಿಕೊಂಡು ಬರುತ್ತಿದ್ದೇವೆ ಎಂದು ನುಡಿದರು.ಶಿಬಿರದ ಉದ್ಘಾಟನೆ ನೆರವೇರಿಸಿದ ಹತ್ತಿಮತ್ತೂರಿನ ಪ್ರಭುಲಿಂಗಯ್ಯ ಆರಾಧ್ಯಮಠ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಅವಶ್ಯ ಬೇಕು. ಸಮಾಜದಲ್ಲಿ ಚೆನ್ನಾಗಿ ಬಾಳಬೇಕಾದರೆ ಜಂಗಮ ವಟುಗಳು ಅನೇಕ ಧರ್ಮ ಕಾರ್ಯಗಳಲ್ಲಿ ಮದುವೆ ಮುಂತಾದ ಕಾರ್ಯಗಳಲ್ಲಿ ನೆರವೇರಿಸಿ ಕೊಡಬೇಕಾಗುತ್ತದೆ. ಆ ಕಾರಣ ಜಂಗಮರಿಗೆ ಧಾರ್ಮಿಕ ಸಂಸ್ಕಾರ ನೀಡುವ ಶ್ರೀಮಠದ ಕಾರ್ಯ ತುಂಬಾ ಉತ್ತಮವಾದದ್ದು ಎಂದು ಹೇಳಿದರು.
ಕೂಡಲಯ್ಯ ಹಿರೇಮಠ ಹುಬ್ಬಳ್ಳಿ ಮೂರು ಸಾವಿರ ಮಠದ ಸಂಸ್ಕೃತ ಶಿಕ್ಷಕರು ಮಾತನಾಡಿ, ಶಿಬಿರದ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು. ಆರಾಧಿಮಠ ಹಾಗೂ ಹಿರೇಮಠ ಅವರನ್ನು ಸತ್ಕರಿಸಲಾಯಿತು. ಗ್ರಾಮದ ನಿಂಗಣ್ಣ ಎನ್. ಹೆಬಸೂರ, ರೇಣುಕುಗೌಡ್ರು ಪಾಟೀಲ, ಅನ್ನದಾನಯ್ಯ ಹಿರೇಮಠ, ಶಿವಾನಂದ ಕಟ್ಟಿಮನಿ ಮುಂತಾದವರು ಭಾಗವಹಿಸಿದ್ದರು.ವೇದಘೋಷ ಅಭಿಷೇಕ ಶಾಸ್ತ್ರಿಗಳು ನಡೆಸಿಕೊಟ್ಟರು. ಡಾ.ಎನ್.ಬಿ. ನಾಗರಹಳ್ಳಿ ಪ್ರಾರ್ಥಿಸಿದರು. ಮಹಾದೇವ ಬಿಷ್ಟಣ್ಣವರ ಸ್ವಾಗತಿಸಿ, ನಿರೂಪಿಸಿದರು.