ಸಾರಾಂಶ
ತರೀಕೆರೆ, ಕನ್ನಡ ರಾಜ್ಯೋತ್ಸವ ನವೆಂಬರ್ ಗೆ ಸೀಮಿತವಾಗದೆ ವರ್ಷ ಪೂರ್ತಿ ಆಚರಿಸುವಂತಾಗಬೇಕು. ಪ್ರತಿಯೊಬ್ಬ ಕನ್ನಡಿಗರ ಮನೆ ಮನೆಯಲ್ಲಿ ನಿತ್ಯೋತ್ಸವ ವಾಗಬೇಕು ಎಂದು ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಅಡಳಿತಾಧಿಕಾರಿ ಟಿ.ಎಸ್.ಅನೂಪ್ ಹೇಳಿದರು.
ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಕನ್ನಡ ರಾಜ್ಯೋತ್ಸವ ನವೆಂಬರ್ ಗೆ ಸೀಮಿತವಾಗದೆ ವರ್ಷ ಪೂರ್ತಿ ಆಚರಿಸುವಂತಾಗಬೇಕು. ಪ್ರತಿಯೊಬ್ಬ ಕನ್ನಡಿಗರ ಮನೆ ಮನೆಯಲ್ಲಿ ನಿತ್ಯೋತ್ಸವ ವಾಗಬೇಕು ಎಂದು ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಅಡಳಿತಾಧಿಕಾರಿ ಟಿ.ಎಸ್.ಅನೂಪ್ ಹೇಳಿದರು.ಪಟ್ಟಣದ ಶ್ರೀ ಪ್ರಹರ್ಷಿತ ವಿದ್ಯಾಸಂಸ್ಥೆಯಿಂದ ನಡೆದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಕನ್ನಡನಾಡು ರನ್ನ, ಪಂಪರು ಜನಿಸಿದ ಪುಣ್ಯ ಬೀಡು, ರಾಷ್ಟ್ರಕವಿ ಕುವೆಂಪು, ವರಕವಿ ಬೇಂದ್ರೆ, ಶಿವರಾಮ ಕಾರಂತರಂತಹ ಪುಣ್ಯಪುರುಷರು ಜನಿಸಿದ ನಡಿಗೆ 8 ಜ್ಞಾನ ಪೀಠ ಪ್ರಶಸ್ತಿ ಲಭಿಸಿರುವುದು ಹೆಗ್ಗಳಿಕೆ ಎಂದು ಹೇಳಿದರು.
ಎರಡೂವರೆ ಸಾವಿರ ವರ್ಷಗಳ ಇತಿಹಾಸದ ಕನ್ನಡ ಭಾಷೆಗೆ ನಿತ್ಯ ಬದುಕಿನ ನಾಡು, ನುಡಿ, ನೆಲ, ಜಲ ಹಾಗೂ ಕನ್ನಡ ಭಾಷೆ ಹಿರಿಮೆ , ಕನ್ನಡ ಕಟ್ಟಿ ಬೆಳೆಸುವ ಜವಾಬ್ದಾರಿಯನ್ನು ಇಂದಿನ ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಮನದಟ್ಟುಮಾಡಬೇಕು. ಆಗ ಮಾತ್ರ ಕನ್ನಡವನ್ನು ಶ್ರೀಮಂತ ಗೊಳಿಸಲು ಸಾಧ್ಯ ಎಂದು ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಮಾತನಾಡಿ ಜಗತ್ತಿನ ಶ್ರೇಷ್ಠ ಭಾಷೆಗಳಲ್ಲೊಂದಾದ ಕನ್ನಡ ವಿಶ್ವದಾದ್ಯಂತ ಪಸರಿಸಲು ಕಂಕಣ ಬದ್ಧರಾಗಬೇಕು. 1950ರಲ್ಲಿ ಭಾರತ ಗಣರಾಜ್ಯವಾದ ಬಳಿಕ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪು ಗೊಂಡವು. ಕನ್ನಡ ಭಾಷೆಯ ಪ್ರಾಂತ್ಯಗಳು ಸೇರಿ ಮೈಸೂರು ರಾಜ್ಯ ಉದಯವಾಯಿತು. ಈಗ ಚೆಲುವ ಕನ್ನಡ ನಾಡಾಗಿದೆ. ಕರ್ನಾಟಕ ಹಸಿರಾಗಿರಲಿ, ಕನ್ನಡ ಭಾಷೆ ಉಸಿರಾಗಲಿ, ಕನ್ನಡ ಪ್ರೇಮ ಎಲ್ಲರಲ್ಲಿ ಇರಲಿ ಎಂದು ತಿಳಿಸಿ ಕನ್ನಡ ರಾಜ್ಯೋತ್ಸವ ಶುಭಾಶಯ ತಿಳಿಸಿದರು. ಶ್ರೀಪ್ರಹರ್ಷಿತ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಲೀಲಾ ಸೋಮಶೇಖರಯ್ಯ, ಪೋಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.6ಕೆಟಿಆರ್.ಕೆ.1ಃತರೀಕೆರೆಯಲ್ಲಿ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ 69ನೇ ಕನ್ನಡ ರಾಜ್ಯೋತ್ಸವ ನಡೆಯಿತು. ವಿದ್ಯಾ ಸಂಸ್ಥೆ ಅಡಳಿತಾಧಿಕಾರಿ ಟಿ.ಎಸ್. ಅನೂಪ್, ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಮತ್ತಿತರರು ಇದ್ದರು.