ಮತದಾರರ ಒಂದೊಂದು ಮತವೂ ಮೋದಿಗೆ ಶಕ್ತಿ ತುಂಬುತ್ತೆ

| Published : Apr 06 2024, 12:47 AM IST

ಸಾರಾಂಶ

ಇನ್ನು ಒಂದು ತಿಂಗಳ ಕಾಲ ನಮ್ಮೆಲ್ಲ ಮುಖಂಡರು, ಕಾರ್ಯಕರ್ತರು ವಿರಮಿಸದೇ ಕೆಲಸ ಮಾಡುವ ಮೂಲಕ, ಮತದಾರರು ನೀಡುವ ಒಂದೊಂದು ಮತವೂ ನರೇಂದ್ರ ಮೋದಿ ಕೈಗಳನ್ನು ಬಲಪಡಿಸುವ ಜೊತೆಗೆ ಮೂರನೇ ಬಾರಿಗೆ ಮೋದಿಯವರಿಗೆ ದೇಶವನ್ನು ಸುರಕ್ಷಿತವಾಗಿ ಮುನ್ನಡೆಸಲು ಶಕ್ತಿ ತುಂಬುತ್ತದೆ ಎಂಬುದನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಚನ್ನಗಿರಿ ಪ್ರಚಾರದಲ್ಲಿ ಹೇಳಿದ್ದಾರೆ.

ಇನ್ನೊಂದು ತಿಂಗಳು ವಿರಮಿಸದೆ ಬಿಜೆಪಿ ಗೆಲುವಿಗೆ ಶ್ರಮಿಸಿ-ಕಾರ್ಯಕರ್ತರಿಗೆ ಗಾಯತ್ರಿ ಸಿದ್ದೇಶ್ವರ ಮನವಿ

ಕನ್ನಡಪ್ರಭ ವಾರ್ತೆ, ದಾವಣಗೆರೆಇನ್ನು ಒಂದು ತಿಂಗಳ ಕಾಲ ನಮ್ಮೆಲ್ಲ ಮುಖಂಡರು, ಕಾರ್ಯಕರ್ತರು ವಿರಮಿಸದೇ ಕೆಲಸ ಮಾಡುವ ಮೂಲಕ, ಮತದಾರರು ನೀಡುವ ಒಂದೊಂದು ಮತವೂ ನರೇಂದ್ರ ಮೋದಿ ಕೈಗಳನ್ನು ಬಲಪಡಿಸುವ ಜೊತೆಗೆ ಮೂರನೇ ಬಾರಿಗೆ ಮೋದಿಯವರಿಗೆ ದೇಶವನ್ನು ಸುರಕ್ಷಿತವಾಗಿ ಮುನ್ನಡೆಸಲು ಶಕ್ತಿ ತುಂಬುತ್ತದೆ ಎಂಬುದನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಕರೆ ನೀಡಿದರು.

ಚನ್ನಗಿರಿ ತಾಲೂಕಿನಲ್ಲಿ ಶುಕ್ರವಾರ ಯುವ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ, ಜಿ.ಎಸ್.ಅನಿತಕುಮಾರ, ಹಿರಿಯ ಮುಖಂಡ, ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ ಇತರರ ನೇತೃತ್ವದಲ್ಲಿ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದ ಅವರು, ಕ್ಷೇತ್ರದ ಪ್ರತಿಯೊಬ್ಬ ಮತದಾರರು ಬಿಜೆಪಿ ನೀಡುವ ಮತವೂ ದೇಶವನ್ನು ಮತ್ತಷ್ಟು ಸದೃಢಗೊಳಿಸುತ್ತದೆಂಬ ಸಂಗತಿಯನ್ನು ಜನರಿಗೆ ತಿಳಿಸಬೇಕು ಎಂದರು. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತವೇ ಮುಂಚೂಣಿಯಲ್ಲಿದೆ. ನಮ್ಮ ದೇಶವು ಮತ್ತಷ್ಟು ಸಶಕ್ತ, ಸದೃಢವಾಗಬೇಕೆಂದರೆ ದಕ್ಷ, ಪ್ರಾಮಾಣಿಕ, ದಿಟ್ಟ ಆಡಳಿತದ ನರೇಂದ್ರ ಮೋದಿಯವರ ಸುರಕ್ಷಿತ ಕೈಗಳಿಗೆ ಮತ್ತೊಮ್ಮೆ ಆಡಳಿತ ಚುಕ್ಕಾಣಿ ಸಿಗುವಂತೆ ಮತದಾರರು ಆಶೀರ್ವದಿಸಬೇಕು. ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಲು ಕ್ಷೇತ್ರದ ಸಮಸ್ತ ಮತದಾರರ ಆಶೀರ್ವಾದ ಬೇಕು ಎಂದು ಅವರು ತಿಳಿಸಿದರು.

ಇಡೀ ವಿಶ್ವವೇ ಇಂದು ಭಾರತದತ್ತ, ನರೇಂದ್ರ ಮೋದಿ ಆಳ್ವಿಕೆಯನ್ನು ಕೊಂಡಾಡುತ್ತಿದೆ. 6 ದಶಕದಲ್ಲಿ ಕಾಂಗ್ರೆಸ್ ಪಕ್ಷ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮೋದಿ ಕೇವಲ ಒಂದೇ ದಶಕದಲ್ಲಿ ಮಾಡಿ, ತೋರಿಸಿದ್ದಾರೆ. ಇನ್ನು ಕೆಲವೇ ವರ್ಷದಲ್ಲಿ ಭಾರತವು ವಿಶ್ವದಲ್ಲೇ 3ನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲಿದೆ. 10 ವರ್ಷಗಳ ಹಿಂದೆ ಕಾಂಗ್ರೆಸ್ ಆಳ್ವಿಕೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವಾರು ಯೋಜನೆಗಳು ಮೋದಿ ಅಧಿಕಾರಾವದಿಯಲ್ಲಿ ಪೂರ್ಣಗೊಂಡಿವೆ ಎಂದು ಅವರು ಹೇಳಿದರು.

ದೇಶದ ದೊಡ್ಡ ದೊಡ್ಡ ಯೋಜನೆಗಳ ಅನುಷ್ಠಾನದ ವೇಗ ಹೆಚ್ಚಿಸಲು ಗತಿ ಶಕ್ತಿ ಮಿಷನ್ ಜಾರಿಗೆ ತರಲಾಗಿದೆ. ಗತಿ ಶಕ್ತಿ ಅನುಷ್ಠಾನದಿಂದಾಗಿ ಹೆದ್ದಾರಿಗಳು, ರೈಲ್ವೇ ಕಾಮಗಾರಿಗಳು ಕಾಲಮಿತಿಯಲ್ಲೇ ಪೂರ್ಣಗೊಳ್ಳುತ್ತಿವೆ. ಕಾಂಗ್ರೆಸ್ ಪಕ್ಷವು ಜಾತಿ-ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಮೂಲಕ ದೇಶದ ಜನರನ್ನು 60 ವರ್ಷಗಳ ಕಾಲ ಕಗ್ಗತ್ತಲ್ಲಿಟ್ಟಿತ್ತು. ನಾಗರೀಕರ ಹಣವನ್ನೂ ಕಾಂಗ್ರೆಸ್ ಲೂಟಿ ಮಾಡಿತ್ತು. ಆದರೆ, ಮೋದಿ 10 ವರ್ಷದಲ್ಲೇ ಇಷ್ಟೊಂದು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, 6 ದಶಕ ಕಾಲ ಆಳಿದ್ದ ಕಾಂಗ್ರೆಸ್ಸಿನವರಿಂದ ಏಕೆ ಇದೆಲ್ಲಾ ಸಾಧ್ಯವಾಗಲಿಲ್ಲ ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳು ಅಲ್ಪ ಸಮಯಕ್ಕೆ ಮಾತ್ರ ಪ್ರಯೋಜನಕ್ಕೆ ಬರುವಂತಹ ಗ್ಯಾರಂಟಿಗಳಷ್ಟೇ. ಆದರೆ, ನರೇಂದ್ರ ಮೋದಿ ದೇಶ ಹಾಗೂ ಜನತೆಗೆ ದೀರ್ಘ ಕಾಲದವರೆಗೂ ಪ್ರಯೋಜನಕ್ಕೆ ಬರುವಂತಹ ಯೋಜನೆ, ಕಾರ್ಯಕ್ರಮ ನೀಡುತ್ತಾ ಬರುತ್ತಿದ್ದಾರೆ. ಇಡೀ ದೇಶಕ್ಕೆ ನರೇಂದ್ರ ಮೋದಿಯವರೇ ಗ್ಯಾರಂಟಿ ಎಂಬುದಾಗಿ ಚನ್ನಗಿರಿ ಮತದಾರರಿಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮನವರಿಕೆ ಮಾಡಿಕೊಟ್ಟು, ದಾವಣಗೆರೆ ಕ್ಷೇತ್ರದಿಂದ ತಮ್ಮನ್ನು ಗೆಲ್ಲಿಸಿ, ಲೋಕಸಭಾ ಸದಸ್ಯರಾಗಿ ಮಾಡಿ, ಆಶೀರ್ವದಿಸುವಂತೆ ಮನವಿ ಮಾಡಿದರು.

ಪಕ್ಷದ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ, ಹಿರಿಯ ಮುಖಂಡ ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ, ಜಿ.ಎಸ್.ಅನಿತಕುಮಾರ ಮಾತನಾಡಿದರು. ಮಂಡಲ ಅಧ್ಯಕ್ಷರು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಬೂತ್ ಮಟ್ಟದ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು. ಚನ್ನಗಿರಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ಗಾಯತ್ರಿ ಸಿದ್ದೇಶ್ವರ ತಮ್ಮ ಪಕ್ಷದ ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಎಚ್ಚೆಸ್ ಶಿವಕುಮಾರ ಜೊತೆಗೆ ತೆರೆದ ವಾಹನದಲ್ಲಿ ಪ್ರಚಾರ ಮಾಡಿ, ಮತಯಾಚಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಗಿರೀಶ್ ನಾಯ್ಕ್, ಮುಖಂಡರಾದ ತಾಪಂ ಮಾಜಿ ಅಧ್ಯಕ್ಷ ದೇವರಹಳ್ಳಿ ಎ.ಎಸ್. ಬಸವರಾಜಪ್ಪ, ಮಂಗೇನಹಳ್ಳಿ ಲೋಹಿತ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಸಂಗಮೇಶ್, ಸಂತೆಬೆನ್ನೂರು ಬಸವರಾಜ್, ಮಾಚನಾಯ್ಕಹಳ್ಳಿ ಚಂದ್ರಶೇಖರ್ ಸೇರಿದಂತೆ ಪ್ರಚಾರಕ್ಕೆ ಹೋದ ಎಲ್ಲ ಗ್ರಾಮಗಳಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದರು......................ಬಾಕ್ಸ.................................ಚನ್ನಗಿರಿ ತಾಲೂಕಿನಲ್ಲಿ ಪ್ರವಾಸೋದ್ಯಕ್ಕೆ ಉತ್ತೇಜನಪ್ರವಾಸಿ ತಾಣಗಳಿಗೆ ಕಾಯಕಲ್ಪ ನೀಡಲು ಒತ್ತು - ಗಾಯತ್ರಿ ಸಿದ್ದೇಶ್ವರಕನ್ನಡಪ್ರಭ ವಾರ್ತೆ, ದಾವಣಗೆರೆಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆ, ರಾಜ್ಯದ ಹೆಮ್ಮೆಯಾದ ಸೂಳೆಕೆರೆ ಅಭಿವೃದ್ಧಿಗೆ ಮಾಜಿ ಶಾಸಕ, ಹಿರಿಯ ಮುಖಂಡರಾದ ಮಾಡಾಳ್ ವಿರುಪಾಕ್ಷಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ 45 ಕೋಟಿ ಯೋಜನೆ ಸಿದ್ಧಪಡಿಸಿದ್ದು, ಸಂತೇಬೆನ್ನೂರು ಪುಷ್ಕರಣಿ, ಹೊದಿಗೆರೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ರಾಜೇಯವರ ಸಮಾಧಿ ಸ್ಥಳ, ದೇವರಹಳ್ಳಿಯ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಅಮ್ಮನ ಗುಡ್ಡ ಹೀಗೆ ಕ್ಷೇತ್ರದ ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಾಗಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಭರವಸೆ ನೀಡಿದ್ದಾರೆ. ಚನ್ನಗಿರಿ ಕ್ಷೇತ್ರದಲ್ಲಿ ಶುಕ್ರವಾರ ರೋಡ್ ಶೋ ಮೂಲಕ ಮತಯಾಚಿಸಿದ ಅವರು, ತಮ್ಮ ಪತಿ ಜಿ.ಎಂ.ಸಿದ್ದೇಶ್ವರ ಸತತ 4 ಸಲ ಸಂಸದರಾಗಿ ಆಯ್ಕೆಯಾಗುವಲ್ಲಿ ಚನ್ನಗಿರಿ ತಾಲೂಕಿನ ಕೊಡುಗೆಯೂ ಅವಿಸ್ಮರಣೀಯವಾದುದು. ಈ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಸಿದ್ದೇಶ್ವರ ಕೈಗೊಂಡಿದ್ದಾರೆ ಎಂದರು.

ಗ್ರಾಮ ಸಡಕ್ ಯೋಜನೆಯಡಿ 22 ಕೋಟಿ ವೆಚ್ಚದಲ್ಲಿ ರಸ್ತೆಗಳ ನಿರ್ಮಾಣ, ಆದರ್ಶ ಗ್ರಾಮ ಯೋಜನೆಯಡಿ ಎಸ್ಸಿ-ಎಸ್ಟಿ ಸಮುದಾಯಗಳು ಹೆಚ್ಚಾಗಿರುವ 21 ಗ್ರಾಮಗಳ ಅಭಿವೃದ್ಧಿಗೆ 15 ಕೋಟಿ ರು. ನೀಡಿದ್ದಾರೆ. ಎಲ್ಲಾ ಗ್ರಾಮಗಳ ಶಾಲಾ ಕೊಠಡಿ, ಸಮುದಾಯ ಭವನ, ಗ್ರಂಥಾಲಯ, ಅಂಗನವಾಡಿ, ರಂಗಮಂದಿರ, ಪ್ರಯಾಣಿಕರ ತಂಗುದಾಣಗಳ ನಿರ್ಮಾಣಕ್ಕೆ 11 ಕೋಟಿ ರು. ಅನುದಾನವನ್ನು ಸಿದ್ದೇಶ್ವರ ನೀಡಿದ್ದಾರೆ ಎಂದು ಅವರು ತಿಳಿಸಿದರು.ಕಿಸಾನ್ ಸಮ್ಮಾನ್ ಯೋಜನೆಯಡಿ ಚನ್ನಗಿರಿಯ 39 ಸಾವಿರ ಸಣ್ಣ ರೈತರಿಗೆ ಒಟ್ಟು 102 ಕೋಟಿ ರು., 15 ಸಾವಿರ ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ದೇವರಹಳ್ಳಿಯಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಈಗಾಗಲೇ 9.59 ಕೋಟಿ ರು. ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್‌ ಘಟಕ ನಿರ್ಮಿಸಲಾಗುತ್ತಿದೆ. ಹೀಗೆ ಸಿದ್ದೇಶ್ವರ, ಮಾಡಾಳ್ ವಿರುಪಾಕ್ಷಪ್ಪನವರು ಸಾಕಷ್ಟು ಅಭಿವೃದ್ಧಿ ಕೈಗೊಂಡಿದ್ದು, ಇನ್ನೂ ಹೆಚ್ಚಿನ ಮಟ್ಟದಲ್ಲಿ ಚನ್ನಗಿರಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ತಮ್ಮನ್ನು ಸಂಸದರಾಗಿ ಆಯ್ಕೆ ಮಾಡುವಂತೆ ಗಾಯತ್ರಿ ಸಿದ್ದೇಶ್ವರ ಮನವಿ ಮಾಡಿದರು.

...................ಕ್ಯಾಪ್ಷನ್ 5ಕೆಡಿವಿಜಿ2, 3-

ಚನ್ನಗಿರಿ ತಾಲೂಕಿನ ವಿವಿಧೆಡೆ ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಎಚ್.ಎಸ್.ಶಿವಕುಮಾರ ನೇತೃತ್ವದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ರೋಡ್ ಶೋ ಮೂಲಕ ಮತಯಾಚಿಸಿದರು. .....................5ಕೆಡಿವಿಜಿ4, 5, 6-

ಚನ್ನಗಿರಿ ತಾಲೂಕಿನ ವಿವಿಧೆಡೆ ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಎಚ್.ಎಸ್.ಶಿವಕುಮಾರ ನೇತೃತ್ವದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತಯಾಚಿಸಿದರು.