ಪ್ರತಿಯೊಬ್ಬರೂ ಸಂವಿಧಾನ ಉಳಿಸಲು ಮುಂದಾಗಿ

| Published : Apr 27 2024, 01:02 AM IST

ಪ್ರತಿಯೊಬ್ಬರೂ ಸಂವಿಧಾನ ಉಳಿಸಲು ಮುಂದಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ ಬಂದು 77 ವರ್ಷ ಕಳೆದರೂ ಸಹ ಇಂದಿಗೂ ದಲಿತರಿಗೆ ಸಂಪೂರ್ಣವಾಗಿ ಸಾಮಾಜಿಕ ಸಮಾನತೆ ಸಿಕ್ಕಂತೆ ಕಾಣುತ್ತಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಹೇಳಿದರು.

ತುಮಕೂರು: ಸ್ವಾತಂತ್ರ ಬಂದು 77 ವರ್ಷ ಕಳೆದರೂ ಸಹ ಇಂದಿಗೂ ದಲಿತರಿಗೆ ಸಂಪೂರ್ಣವಾಗಿ ಸಾಮಾಜಿಕ ಸಮಾನತೆ ಸಿಕ್ಕಂತೆ ಕಾಣುತ್ತಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಹೇಳಿದರು.

ನಗರದ ನರಸಿಂಹರಾಜು ಕಾಲೋನಿಯಲ್ಲಿರುವ ದುರ್ಗಮ್ಮ ದೇವಾಲಯದ ಆವರಣದಲ್ಲಿ ಸಂಡೆ ಬಾಯ್ಸ್ ಸಂಘದಿಂದ ಆಯೋಜಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್‌ ಸಮಾನತೆಯ ರಥ ಹಿಮ್ಮುಖವಾಗಿ ಚಲಿಸದಂತೆ ನಾವೆಲ್ಲರೂ ಎಚ್ಚರಿಕೆವಹಿಸಬೇಕು. ಶೋಷಿತರಿಗೆ ಸಮಾನತೆಯ ಊರುಗೋಲಾಗಿರುವ ಸಂವಿಧಾನ ಬದಲಾಯಿಸುವ ಕುರಿತು ಆಗಾಗ ಹೇಳಿಕೆಗಳು ಬರುತ್ತಿವೆ. ಜನರು ಎಚ್ಚೆತ್ತುಕೊಂಡು ಸಂವಿಧಾನ ಉಳಿಸಲು ಮುಂದಾಗಬೇಕು ಎಂದರು.

ಸಂಡೇ ಬಾಯ್ಸ್ ಸಂಘದ ಅಧ್ಯಕ್ಷ ಸಂಜೀವಯ್ಯ, ಸದಸ್ಯರಾದ ಮಂಜುನಾಥ್, ಸುನಿಲ್, ಮಂಜುನಾಥ್(ಪುಟ್‌ಬಾಲ್), ಮಂಜು ಟೈಲ್ಸ್, ಸುರೇಶ್, ಉಮೇಶ್, ರಾಮಕೃಷ್ಣ, ದುರ್ಗಯ್ಯ, ಸತೀಶ್ ಚಂದ್ರನ್, ಸೋಮಸೇಖರ್, ರಘು, ಕುಂಭಯ್ಯ, ದಲಿತ ಮುಖಂಡರಾದ ಬಂಡೆ ಕುಮಾರ್, ನಾಗೇಶ್.ಎ. ಮತ್ತಿತರರು ಉಪಸ್ಥಿತರಿದ್ದರು.