ಪ್ರತಿಯೊಬ್ಬರು ಇತಿಹಾಸ ಪರಂಪರೆಯ ಜ್ಞಾನ ಹೊಂದಿ

| Published : Oct 25 2024, 01:12 AM IST

ಸಾರಾಂಶ

ನಮ್ಮ ಇತಿಹಾಸ ಪರಂಪರೆಗಳನ್ನು ಅರಿತುಕೊಂಡು ಜವಾಬ್ದಾರಿಯಿಂದ ಅವುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ನಮ್ಮ ಇತಿಹಾಸ ಪರಂಪರೆಗಳನ್ನು ಅರಿತುಕೊಂಡು ಜವಾಬ್ದಾರಿಯಿಂದ ಅವುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಕಿ.ನಾ.ವಿ.ವ ಪದವಿ ಕಾಲೇಜು ಕಿತ್ತೂರು ಸಂಯುಕ್ತ ಆಶ್ರಯದಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರು ಪ್ರತಿಯೊಬ್ಬರು ಇತಿಹಾಸ ಪರಂಪರೆಯ ಜ್ಞಾನ ಹೊಂದಿರಬೇಕು ಅಂದಾಗ ಮಾತ್ರ ರಾಷ್ಟ್ರೀಯ ಪ್ರಜ್ಞೆ, ಪರಂಪರೆ ಇತಿಹಾಸಗಳ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದರು.ಪ್ರಾಚ್ಯ ವಸ್ತು ಇಲಾಖೆ ಕ್ಯೂರೇಟರ್ ರಾಘವೇಂದ್ರ ಮಾತನಾಡಿ, ಪರಂಪರೆಯ ಪ್ರಕಾರಗಳಾದ ಮೂರ್ತ, ಅಮೂರ್ತ ಪರಂಪರೆ ಮತ್ತು ನೈಸರ್ಗಿಕ ಪರಂಪರೆ ಕುರಿತು ಮತ್ತು ಅವುಗಳ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಪರಂಪರೆಯು ನಮ್ಮ ರಾಷ್ಟ್ರದ ಅಮೂಲ್ಯ ಸಂಪತ್ತು ಅದನ್ನು ಉಳಿಸಿ ಬೆಳೆಸುವ ಜಾವಾಬ್ದಾರಿ ಎಲ್ಲರ ಮೇಲಿದೆ ಎಂದು ನುಡಿದರು.ಇಲಾಖೆಯ ಶ್ವೇತ ಧ್ವಜವನ್ನು ಶಾಸಕರಿಗೆ ತಹಸೀಲ್ದಾರ್‌ ರವೀಂದ್ರ ಹಾದಿಮನಿಯವರಿಗೆ ಹಸ್ತಾಂತರಿಸುವ ಮೂಲಕ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದರು.ನಿವೃತ್ತ ಆಯುಕ್ತರಾದ ವೆಂಕಟೇಶ ಮಾಚಕನೂರ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮೂಲಕ ಪ್ರಾಚ್ಯ ಪ್ರಜ್ಞೆಯ ಮತ್ತು ಪರಂಪರೆಯ ಕುರಿತು ತಿಳುವಳಿಕೆ ನೀಡಿ ಸಂವಾದ ನಡೆಸಿದರು. ದೇಶಿಯ ಮತ್ತು ಪಾರಂಪರಿಕ ಉಡುಗೆ ತೊಡುಗೆ ತೊಟ್ಟು ವಿದ್ಯಾರ್ಥಿನಿಯರು ಶಿಕ್ಷಕರು ಇಲಾಖೆಯ ಎಲ್ಲ ಅಧಿಕಾರಿಗಳು ವಿಶೇಷ ಆಕರ್ಷಣೆಯ ಕೇಂದ್ರವಾಗಿದ್ದರು. ಪಾರಂಪರಿಕ ನಡಿಗೆಯು ಕಿತ್ತೂರು ಚನ್ನಮ್ಮ ವೃತ್ತದಿಂದ ಕೋಟೆಯವರಿಗೆ ಆವರಣದವರೆಗೆ ಕಾಲ್ನಡಿಗೆಯಲ್ಲಿ ಮೂಲಕ ವಿದ್ಯಾರ್ಥಿಗಳು ನಡಿಗೆ ಮೂಲಕ ಕೋಟೆಗೆ ಆಗಮಿಸಿದರು.ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಬಿ.ದಳವಾಯಿ, ಕೆಪಿಸಿಸಿ ಸದಸ್ಯ ರೋಹಿಣಿ ಪಾಟೀಲ, ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಲೋಕೋಪಯೋಗಿ ಸಹಾಯಕ ಅಭಿಯಂತರ ಸಂಜೀವ ಮಿರಜಕರ, ಪಾರ್ವತಿ ಲದ್ದಿಮಠ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಅಷ್ಪಾಕ ಹವಾಲ್ದಾರ, ಸುನೀಲ ಘಿವಾರಿ, ಅನಿಲ ಎಮ್ಮಿ ಉಪಸ್ಥಿತರಿದ್ದರು. ಶಿಕ್ಷಕ ಮಂಜುನಾಥ ಕಳಸಣ್ಣವರ ನಿರೂಪಿಸಿದರು. ಶಿಕ್ಷಕಿ ರಾಜೇಶ್ವರಿ ಕಳಸಣ್ಣವರ ಪ್ರಾರ್ಥಿಸಿದರು. ಶಿಕ್ಷಕ ಬಿ.ಸಿ.ಬಿದರಿ ಸ್ವಾಗತಿಸಿದರು. ರಾಜಶೇಖರ ರಗಟಿ ವಂದಿಸಿದರು.