ಸಾರಾಂಶ
ದಾವಣಗೆರೆ: ನಮ್ಮ ದೇಶದಲ್ಲಿ ಇರುವವರೆಲ್ಲರೂ ಕಾನೂನಿನ ಬಗ್ಗೆ ತಿಳಿದಿರಬೇಕು ಎಂದು ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ್ ಹೆಗಡೆ ತಿಳಿಸಿದರು.
ದಾವಣಗೆರೆ: ನಮ್ಮ ದೇಶದಲ್ಲಿ ಇರುವವರೆಲ್ಲರೂ ಕಾನೂನಿನ ಬಗ್ಗೆ ತಿಳಿದಿರಬೇಕು ಎಂದು ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ್ ಹೆಗಡೆ ತಿಳಿಸಿದರು.ನಗರದ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸಂವಿಧಾನ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳಿಗಾಗಿ ಕಾನೂನಿನ ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಮುಖವಾಗಿ ದಿನನಿತ್ಯದ ವ್ಯಾವಹಾರದ ಕಾನೂನಿನ ಬಗ್ಗೆ ತಿಳಿದಿರಬೇಕು. ಹಾಗೂ ಕಾನೂನಿನ ನೆರವು ಪ್ರತಿಯೊಬ್ಬ ನಾಗರಿಕರಿಗೂ ಸಿಗುವಂಥದ್ದು ಎಂದ ಅವರು, ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಪಾಲನೆಯ ಕುರಿತಾಗಿ ಮಕ್ಕಳಿಗೆ ತಿಳಿಸಿಕೊಟ್ಟರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮ. ಕರೆಣ್ಣವರ್ ಮಾತನಾಡಿ, ಬಾಲ ನ್ಯಾಯಾಂಗ ಮಂಡಳಿಯ ಅಡಿಯಲ್ಲಿ, ಅನಾಥ ಮಕ್ಕಳಿಗೆ ರಕ್ಷಣೆ ನೀಡಲಾಗುವುದರೊಂದಿಗೆ ಶಿಕ್ಷಣವನ್ನು ಒದಗಿಸಿ ಕೊಡಲಾಗುವುದು. ಸಂವಿಧಾನವು ದೇಶವನ್ನು ಹೇಗೆ ಮುನ್ನಡೆಸಬೇಕು ಎಂದು ತಿಳಿಸುತ್ತದೆ ಎಂದ ಅವರು, ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಇರುವ ವಿಶೇಷ ಕಾನೂನುಗಳ ಕುರಿತಾಗಿ ತಿಳಿಸಿದರು.ರಾಷ್ಟ್ರೋತ್ಥನ ವಿದ್ಯಾಲಯ ಪ್ರಾಚಾರ್ಯೆ ಸುಗುಣಾ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ಎಚ್.ವಿ.ಗಗನಶ್ರೀ, ಸಿಆರ್‌ಪಿ ಬಿ ಕ್ಯಾಂಪ್-2 ದಾವಣಗೆರೆ ಮಂಜಾ ನಾಯ್ಕ್ ಇತರರು ಉಪಸ್ಥಿತರಿದ್ದರು.