ಭಾಷೆಯನ್ನು ಉಳಿಸಲು ಪ್ರತಿಯೊಬ್ಬರೂ ಮಾನಸಿಕವಾಗಿ ತಯಾರಾಗಬೇಕಿದೆ. ನಮಗೆ ಗೊತ್ತಿಲ್ಲದಂತೆ ಭಾಷೆಗಳನ್ನು ಕೊಲ್ಲುವ ವ್ಯವಸ್ಥೆ ವ್ಯಾಪಕವಾಗಿ ಬೆಳೆದಿದೆ. ಇಂದು ಪರಕೀಯರಿಂದ ಭಾಷೆಯ ಮೇಲಿನ ತೂಗುಗತ್ತಿ ಕಳಚಿದ್ದರೂ, ನಮ್ಮಿಂದಲೇ ಭಾಷೆಯ ಮೇಲೆ ಆಗುತ್ತಿರುವ ಅತ್ಯಾಚಾರಗಳನ್ನು ತಡೆಯಬೇಕಾದ ಗಂಭೀರ ಸವಾಲಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂಜೀವ ಪೂಜಾರ ಹೇಳಿದರು.

ಶಿಗ್ಗಾಂವಿ: ಭಾಷೆಯನ್ನು ಉಳಿಸಲು ಪ್ರತಿಯೊಬ್ಬರೂ ಮಾನಸಿಕವಾಗಿ ತಯಾರಾಗಬೇಕಿದೆ. ನಮಗೆ ಗೊತ್ತಿಲ್ಲದಂತೆ ಭಾಷೆಗಳನ್ನು ಕೊಲ್ಲುವ ವ್ಯವಸ್ಥೆ ವ್ಯಾಪಕವಾಗಿ ಬೆಳೆದಿದೆ. ಇಂದು ಪರಕೀಯರಿಂದ ಭಾಷೆಯ ಮೇಲಿನ ತೂಗುಗತ್ತಿ ಕಳಚಿದ್ದರೂ, ನಮ್ಮಿಂದಲೇ ಭಾಷೆಯ ಮೇಲೆ ಆಗುತ್ತಿರುವ ಅತ್ಯಾಚಾರಗಳನ್ನು ತಡೆಯಬೇಕಾದ ಗಂಭೀರ ಸವಾಲಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂಜೀವ ಪೂಜಾರ ಹೇಳಿದರು.

ಕಸಾಪ ಶಿಗ್ಗಾಂವಿ ತಾಲೂಕು ಹಾಗೂ ಹೋಬಳಿ ಘಟಕಗಳ ಆಶ್ರಯದಲ್ಲಿ ಖುರ್ಸಾಪೂರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದತ್ತಿ ಉಪನ್ಯಾಸ, ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಗ್ಗಾಂವಿ ಕಸಾಪ ಘಟಕವು ''''''''ಮಕ್ಕಳಿಗಾಗಿ ರೆಕ್ಕೆಗಳಾಗೋಣ'''''''' ಹಾಗೂ ಪುಸ್ತಕ ವಿಮರ್ಶೆಯಂತಹ ವಿನೂತನ ಕಾರ್ಯಕ್ರಮಗಳ ಮೂಲಕ ಕನ್ನಡ ಬೆಳೆಸುವ ಕಾಯಕವನ್ನು ನಿರಂತರವಾಗಿ ಚಲನಶೀಲಗೊಳಿಸಿರುವುದು ಶ್ಲಾಘನೀಯ ಎಂದರು.

ಕಸಾಪ ತಾಲೂಕು ಅಧ್ಯಕ್ಷ ನಾಗಪ್ಪ ಬೆಂತೂರ ಮಾತನಾಡಿ, ದತ್ತಿದಾನಿಗಳು ಕಾಣಿಕೆಯನ್ನು ಇಟ್ಟು ಕನ್ನಡ ಬೆಳೆಸಲು ಪ್ರೋತ್ಸಾಹ ನೀಡಿದ್ದಾರೆ. ಅನೇಕ ಮಹನೀಯರು ಈ ಕಾರ್ಯಕ್ರಮಕ್ಕೆ ನೇರವಾಗಿ ಹಾಗೂ ಪರೋಕ್ಷವಾಗಿ ಬೆನ್ನೆಲುಬಾಗಿ ನಿಂತಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ ಕನ್ನಡದ ಭವ್ಯ ಪರಂಪರೆಯನ್ನು ಬಿತ್ತುವ ಮೂಲಕ ಉದ್ದೇಶದಿಂದ ಕಸಾಪದಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಎಂದರು.

ಬೆಳಕು ಸಂಸ್ಥೆಯ ವತಿಯಿಂದ ನೀಡಲಾಗುವ ''''''''ಕಾಯಕ ರತ್ನ'''''''' ಪ್ರಶಸ್ತಿಯನ್ನು ಮಹಾಂತೇಶ ನಾಯ್ಕೋಡಿ ಅವರಿಗೆ ನೀಡಲಾಯಿತು. ದಸಾಪ ನೂತನ ಜಿಲ್ಲಾಧ್ಯಕ್ಷ ಡಾ. ಶರೀಫ ಮಾಕಪ್ಪನವರ ಮತ್ತು ರಮೇಶ ಹರಿಜನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಮ್ಮನಹಳ್ಳಿ ಸರಕಾರಿ ಪಪೂ ಕಾಲೇಜಿನ ಉಪನ್ಯಾಸಕರಾದ ಸುರೇಶಗೌಡ್ರ ಪಾಟೀಲ ಅವರು ''''''''ಮಗು ಮತ್ತು ಶಿಕ್ಷಣ'''''''' ಎಂಬ ವಿಷಯದ ಕುರಿತು ಸಾಂದರ್ಭಿಕ ದತ್ತಿ ಉಪನ್ಯಾಸ ನೀಡಿದರು.

ದಿ. ವಿಜಯಲಕ್ಷ್ಮಿ ಹಿರೇಮಠ, ದಿ. ಚನ್ನವೀರಯ್ಯ ಹಿರೇಮಠ, ದಿ. ಗುರುಸಿದ್ದಪ್ಪ ಅಜೂರ, ಶ್ರೀ ಆರೂಢ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಲಿಂ., ಮಾಗನೂರ ಆರುಣ ಬಸಪ್ಪ ಮತ್ತು ಸರ್ವಮಂಗಳಮ್ಮ ಇವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಗರಾಜ ವಡ್ಡರ, ಕಲ್ಲಪ್ಪ ಗುರುಶಿದ್ದಪ್ಪ ಅಜೂರ, ಪಿ.ಸಿ. ಹಿರೇಮಠ, ಸಂಗಮೇಶ್ವರಗೌಡ ಹುಡೇದಗೌಡ್ರ, ಸಿದ್ದಪ್ಪ ಮಸಳಿ, ಗೀತಾ ಹಿರೇಮಠ, ರೇಖಾ ಮಸಳಿ, ಜೆ.ಸಿ. ಕಲ್ಲಪ್ಪನವರ, ಲಲಿತಾ ಹಿರೇಮಠ, ಸಿ.ಡಿ. ಯತ್ನಳ್ಳಿ, ಶಂಭು ಕೆರಿ, ಎಚ್. ಎನ್. ಕರೆಕನ್ನಮ್ಮನವರ, ರವಿ ಕಡಕೋಳ ಮಂಜುನಾಥ ಮರ್ಚಿ ಇತರರಿದ್ದರು.