ಸಾರಾಂಶ
ಪ್ರತಿಯೊಬ್ಬರು ಶ್ರಮವಹಿಸಿ ದುಡಿದು ಗಳಿಸಿದ ಹಣದಲ್ಲಿ ಒಂದು ಭಾಗವನ್ನು ಉಳಿತಾಯ ಮಾಡಬೇಕು. ಎಲ್ಲರಿಗೂ ಹಣದ ಮೌಲ್ಯ, ಮಹತ್ವದ ಬಗ್ಗೆ ಅರಿವಿರಬೇಕು. ಶಾಲಾ- ಕಾಲೇಜು ವೇಳೆಯಲ್ಲಿ ವಿನಾಕಾರಣ ಹಣ ವ್ಯಯಿಸಿ, ಭವಿಷ್ಯದಲ್ಲಿ ತುರ್ತು ಅಗತ್ಯ ಸಂದರ್ಭ ಹಣದ ಸಮಸ್ಯೆಯಿಂದ ಬಳಲಬಾರದು. ಶಾಲಾ ಅವಧಿಯಲ್ಲಿಯೇ ಮಕ್ಕಳಿಗೆ ಹಣದ ಮೌಲ್ಯ ಅರಿವು ನೀಡಬೇಕು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಶಿವಾನಂದಪ್ಪ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಪ್ರತಿಯೊಬ್ಬರಿಗೂ ಹಣದ ಮೌಲ್ಯ, ಮಹತ್ವದ ಬಗ್ಗೆ ಅರಿವಿರಬೇಕು. ಶಾಲಾ- ಕಾಲೇಜು ವೇಳೆಯಲ್ಲಿ ವಿನಾಕಾರಣ ಹಣ ವ್ಯಯಿಸಿ, ಭವಿಷ್ಯದಲ್ಲಿ ತುರ್ತು ಅಗತ್ಯ ಸಂದರ್ಭ ಹಣದ ಸಮಸ್ಯೆಯಿಂದ ಬಳಲಬಾರದು. ಆದ್ದರಿಂದ ಶಾಲಾ ಅವಧಿಯಲ್ಲಿಯೇ ಮಕ್ಕಳಿಗೆ ಹಣದ ಮೌಲ್ಯ ಅರಿವು ನೀಡಬೇಕು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಶಿವಾನಂದಪ್ಪ ಹೇಳಿದರು.ತಾಲೂಕಿನ ಹರಗುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರ ಸಲಹೆ, ಸಹಕಾರದಿಂದ ಮಕ್ಕಳ ಉಳಿತಾಯ ಹಣ ಹುಂಡಿಗೆ ಹಾಕುವ ಮೂಲಕ ಮಕ್ಕಳ ಬ್ಯಾಂಕ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಉಳಿಸಿದ ಹಣ, ಗಳಿಸಿದ ಹಣಕ್ಕೆ ಸಮ. ಪ್ರತಿಯೊಬ್ಬರು ಶ್ರಮವಹಿಸಿ ದುಡಿದು ಗಳಿಸಿದ ಹಣದಲ್ಲಿ ಒಂದು ಭಾಗವನ್ನು ಉಳಿತಾಯ ಮಾಡಬೇಕು. ಅನಿರೀಕ್ಷಿತ ಕಾಯಿಲೆ, ಅಪಘಾತ ಮುಂತಾದ ತುರ್ತು ಸಂದರ್ಭ ಬಳಸಲು ಅನುಕೂಲ ಆಗಲಿದೆ. ತಪ್ಪಿದಲ್ಲಿ ತುರ್ತು ಸಮಯದಲ್ಲಿ ತೀವ್ರ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ. ಸರ್ಕಾರ ಈಗ ಬ್ಯಾಂಕುಗಳ ಮೂಲಕ ಹಲವಾರು ಆಕರ್ಷಕ ಯೋಜನೆಗಳನ್ನು ತಂದಿದೆ. ಈ ಬಗ್ಗೆ ಅರಿಯಲು, ಹಣ ಬಳಸಲು ಬ್ಯಾಂಕ್ ವ್ಯವಹಾರ ಜ್ಞಾನ ಬಹಳ ಮುಖ್ಯ ಎಂದರು.ಶಿಕ್ಷಕರಾದ ಕಾಶಿನಾಥ್ ಎಂ.ಡಿ. ಪಾಸ್ ಬುಕ್ ವಿತರಿಸಿ ಸದುಪಯೋಗ ಪಡೆಯಲು ಮಕ್ಕಳಿಗೆ ತಿಳಿಸಿದರು. ರಾಜೇಂದ್ರ ಜಮಾ ಖರ್ಚುಗಳ ಬಗ್ಗೆ ಮಾಹಿತಿ ನೀಡಿ, ಪ್ರೋತ್ಸಾಹಿಸಿದರು. ರಾಘವೇಂದ್ರ ಚೆಕ್, ಚಲನ್ ಬರೆಯುವ ಬಗ್ಗೆ ಮಾಹಿತಿ ನೀಡಿದರು. ಸವಿತಾ ಬಾಯಿ ಹಣ ಸಂಗ್ರಹಿಸಿ ಪಾಸ್ ಪುಸ್ತಕಕ್ಕೆ ನಮೂದಿಸಿದರು. ಪುಲಾವತಿ ಕಾರ್ಯಕ್ರಮ ನಿರೂಪಿಸಿ ಪ್ರೋತ್ಸಾಹಿಸಿದರು. ಮಕ್ಕಳು ಸಡಗರದಿಂದ ಹಣ ಕಟ್ಟಿ, ತಮ್ಮ ಪಾಸ್ ಬುಕ್‌ಗಳಲ್ಲಿ ಹಣ ಜಮಾ ಆಗಿರುವುದು ಕಂಡು ಸಂತಸಗೊಂಡರು.
- - --20ಕೆಎಸ್.ಕೆಪಿ2:
ಶಿಕಾರಿಪುರ ತಾಲೂಕಿನ ಹರಗುವಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಬ್ಯಾಂಕ್ ಆರಂಭಕ್ಕೆ ಚಾಲನೆ ನೀಡಲಾಯಿತು.